ಹಿಸ್ಟರಿ ಹಂಟರ್ನ ಹೊಸ ಎಪಿಸೋಡ್ನಲ್ಲಿ ಮನೀಷ್ ಪಾಲ್ ಅನಾವರಣ ಮಾಡಲಿದ್ದಾರೆ ಯುದ್ಧದ ಹಾದಿಯನ್ನು ಶಾಶ್ವತವಾಗಿ ಬದಲಾಯಿಸಿದ ಟಿಪ್ಪು ಸುಲ್ತಾನ್ ಸೃಷ್ಟಿ.
ಹಿಸ್ಟರಿ ಹಂಟರ್ನ ಮುಂಬರುವ ಸಂಚಿಕೆಯು ನಮ್ಮನ್ನು 18 ನೇ ಶತಮಾನಕ್ಕೆ ಕರೆದೊಯ್ಯಲಿದ್ದು, ಟಿಪ್ಪು ಸುಲ್ತಾನ್ ರಾಕೆಟ್ ವಿಜ್ಞಾನವನ್ನು ಹೇಗೆ ಬಳಕೆಗೆ ತಂದರು ಮತ್ತು ಆಂಗ್ಲೋ ಮೈಸೂರು ಯುದ್ಧಗಳಲ್ಲಿ ಬ್ರಿಟಿಷರನ್ನು ಸೋಲಿಸಲು ಅದನ್ನು ಹೇಗೆ ಬಳಸಿದರು ಎಂಬುದನ್ನು ಪ್ರೇಕ್ಷಕರ ಮುಂದಿಡಲಿದೆ.
6ನೇ ಸಂಚಿಕೆಯು ಡಿಸೆಂಬರ್ 25ರಂದು ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್ ಮತ್ತು ಡಿಸ್ಕವರಿ +ನಲ್ಲಿ ಪ್ರಸಾರವಾಗಲಿದೆ.
ವಾರ್ನರ್ ಬ್ರದರ್ಸ್ ಡಿಸ್ಕವರಿ ಚಾನೆಲ್ನ ‘ಹಿಸ್ಟರಿ ಹಂಟರ್’ ನಲ್ಲಿ ಮನೀಷ್ ಪಾಲ್ ವಿವಿಧ ವಿಷಯಗಳ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರಿದ ಪ್ರಾಚೀನ ಭಾರತೀಯ ದಂತಕಥೆಗಳು ಮತ್ತು ಕಥೆಗಳನ್ನು ಅರ್ಥ ಮಾಡಿಕೊಳ್ಳುವ ಪಯಣವನ್ನು ಮುಂದುವರೆಸಿದ್ದಾರೆ. ಮುಂಬರುವ ಸಂಚಿಕೆಯು ಮೈಸೂರು ಸುಲ್ತಾನರ ರಾಜವಂಶ ಮತ್ತು ಅದರ ಆಡಳಿತಗಾರ ಟಿಪ್ಪು ಸುಲ್ತಾನನ ಮೇಲೆ ಗಮನ ಸೆಳೆಯಲಿದೆ.
‘ಮೈಸೂರಿನ ಹುಲಿ’ ಎಂದೇ ಕರೆಸಿಕೊಳ್ಳುತ್ತಿದ್ದ ಟಿಪ್ಪು ಎರಡು ದಶಕಗಳ ಹಿಂದೆ 1767 ರಿಂದ 1799 ರ ನಡುವಿನ ಆಂಗ್ಲೋ ಮೈಸೂರು ಯುದ್ಧಗಳ ಸಮಯದಲ್ಲಿ ಬ್ರಿಟಿಷ್ ಸೈನ್ಯಕ್ಕೆ ಭಾರಿ ಹಾನಿಯನ್ನುಂಟುಮಾಡಿ, ಭೀತಿ ಹುಟ್ಟಿಸಿದ್ದರು. ಟಿಪ್ಪುವಿನ ವಿಜಯದ ರಹಸ್ಯವೆಂದರೆ ಅವರು ಮಿಲಿಟರಿ ರಾಕೆಟ್ಗಳನ್ನು ರಚಿಸಿದ್ದು ಮತ್ತು ಯುದ್ಧ ಇತಿಹಾಸವನ್ನೇ ಶಾಶ್ವತವಾಗಿ ಬದಲಿಸಿತು.
2002ರಲ್ಲಿ ನಾಗರಾಳದಲ್ಲಿ ಸಿಲಿಂಡರಾಕಾರದ ಲೋಹದ ವಸ್ತುಗಳು ಸಿಕ್ಕಿದ್ದ ಬಾವಿಯನ್ನು ಅಗೆದಾಗ, ಜಗತ್ತಿಗೆ ಟಿಪ್ಪುವಿನ ಆವಿಷ್ಕಾರ ತಿಳಿಯಿತು. ಮೆಟಲ್ ಕೇಸ್ಡ್ ರಾಕೆಟ್ಗಳ ಮೊದಲ ನಿದರ್ಶನವನ್ನು ನೀಡುವ ಈ ಪುರಾವೆಗಳ ಆಧಾರದ ಮೇಲೆ ಸಂಶೋಧನೆಯನ್ನು ಕೈಗೊಳ್ಳಲಾಯಿತು. ಈ ರಾಕೆಟ್ಗಳ ಸುತ್ತ ಸಾಕಷ್ಟು ಕುತೂಹಲಕಾರಿ ಸಂಗತಿಗಳಿವೆ. ಇದು ಫ್ರೆಂಚ್ ಸೇನೆಯಿಂದ ಮಾಡಲ್ಪಟ್ಟಿದೆಯೇ ಎಂದು ಕೆಲವು ತಜ್ಞರು ಪ್ರಶ್ನಿಸಿದರೆ, ಇನ್ನು ಕೆಲವರು ಮೈಸೂರಿನ ಶ್ರೀರಂಗಪಟ್ಟಣ ಕೋಟೆಯಲ್ಲಿ ಭೂಗತ ಸೌಲಭ್ಯದಲ್ಲಿ ಸಿದ್ಧಗೊಂಡಿತು ಎಂದು ಹೇಳುತ್ತಾರೆ.
ಈ ರಾಕೆಟ್ಗಳನ್ನು ರಚಿಸುವ ಪ್ರಕ್ರಿಯೆಯು ಟಿಪ್ಪುವಿನ ತಾತ – ಆರ್ಕಾಟ್ ನವಾಬರಾಗಿದ್ದ ನಯಾಕ್ರಿಂದ ತಿಳಿದಿತ್ತು ಎಂದು ಸಿದ್ಧಾಂತಗಳು ಸೂಚಿಸುತ್ತವೆ. ಮುಂಬರುವ ಸಂಚಿಕೆಯು ಈ ರಾಕೆಟ್ಗಳನ್ನು ಹೇಗೆ ತಯಾರಿಸಲಾಯಿತು ಎಂಬುದನ್ನು ವಿವರವಾಗಿ ವಿವರಿಸುವುದಲ್ಲದೆ ಅವುಗಳ ಬಳಕೆಯನ್ನು ಪ್ರದರ್ಶಿಸಲಿದೆ.
ಹಿಸ್ಟರಿ ಹಂಟರ್ನ ಹೊಸ ಸಂಚಿಕೆಯು ಡಿಸೆಂಬರ್ 25, ಡಿಸ್ಕವರಿ+ ಮತ್ತು ಡಿಸ್ಕವರಿ ಚಾನೆಲ್ನಲ್ಲಿ ಮೈಸೂರು ಸುಲ್ತಾನ ರಾಜವಂಶ ರಚಿಸಿದ ವಿಶ್ವದ ಮೊದಲ ಮಿಲಿಟರಿ ರಾಕೆಟ್ನ ದಂತಕಥೆ.