ಇಗಿನ ಕಾಲದಲ್ಲಿ ಪ್ರತಿಯೊಬ್ಬರು ಯುಪಿಐ ಮೂಲಕವೇ ಹಣ ಪಾವತಿ ಮಾಡುತ್ತಾರೆ. ಎಲ್ಲರ ಮೊಬೈಲಿನಲ್ಲಿ ಯು ಗೂಗಲ್ ಪೇ ಫೋನ ಫೋನ್ ಪೇ ಸಾಮಾನ್ಯವಾಗಿರುತ್ತದೆ. ನಮ್ಮಲ್ಲಿ ಬಹುತೇಕರು ನಿತ್ಯದ ವ್ಯವಹಾರಗಳಿಗೆ ಯುಪಿಐ ಪಾವತಿಯನ್ನೇ ನಂಬಿಕೊಂಡಿರುತ್ತಾರೆ.
ಆದರೆ,ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಹಾವಳಿ ಕೂಡ ಹೆಚ್ಚಾಗಿದೆ. ಹೀಗಿರುವಾಗ ಜಿಪೇ, ಪೇಟಿಎಂ, ಫೋನ್ ಪೇ ಮುಂತಾದ ಯುಪಿಐ ಬಳಕೆದಾರರು ತಮ್ಮ ಖಾತೆಯಲ್ಲಿನ ಹಣದ ಸುರಕ್ಷತೆ ಯಾವೆಲ್ಲ ರೀತಿ ಮಾಡಿಕೊಳ್ಳಬೇಕೆಂದು ನಾವು ಯೋಚಿಸಲೇ ಬೇಕಾಗಿದೆ.
ವಂಚಕರು ಆನ್ ಲೈನ್ ಪಾವತಿ ವಿಧಾನಗಳ ಮೂಲಕ ಜನರನ್ನು ವಂಚಿಸಿ ಹಣ ಲೂಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಯುಪಿಐ ಪಾವತಿಗಳನ್ನು ಮಾಡುವಾಗ ಸಾಕಷ್ಟು ಎಚ್ಚರ ವಹಿಸೋದು ಅಗತ್ಯ. ಯುಪಿಐ ಪಾವತಿಗಳು ಭಾರತದಲ್ಲಿ ಕ್ರಾಂತಿಯನ್ನೇ ಹುಟ್ಟುಹಾಕಿವೆ. ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು, ಹಣ ಪಾವತಿ ಹಾಗೂ ಸ್ವೀಕೃತಿ ತುಂಬಾ ಸುಲಭ. ಹಾಗೆಯೇ ಇದು ಸರಳ ಹಾಗೂ ಕಿರಿಕಿರಿಯಿಲ್ಲದ ವಿಧಾನ ಕೂಡ ಹೌದು. ಇದೇ ಕಾರಣಕ್ಕೆ ದೇಶದಲ್ಲಿ ದಿನದಿಂದ ದಿನಕ್ಕೆ ಆನ್ ಲೈನ್ ಪೇಮೆಂಟ್ ಮಾಡುವವರ ಸಂಖ್ಯೆ ಹೆಚ್ಚುತಲೆ ಇರುತ್ತದೆ.
ಬೇರೆ ಯಾವುದೇ ಆನ್ ಲೈನ್ ಪಾವತಿ ವಿಧಾನಗಳಿಗಿಂತ ಯುಪಿಐ ಪಾವತಿಗಳು ಹೆಚ್ಚು ಝಫಾಸ್ಟ್. ಅಲ್ಲದೆ, ಅನೇಕ ಬ್ಯಾಂಕ್ ಗಳು ಹಾಗೂ ಪ್ಲಾಟ್ ಫಾರ್ಮ್ ಗಳ ಮೂಲಕ ಕೂಡ ಅವು ಕಾರ್ಯನಿರ್ವಹಿಸುತ್ತವೆ. ಆದರೆ, ಈ ಆನ್ ಲೈನ್ ಪಾವತಿ ವಿಧಾನಗಳ ಬಳಕೆ ಹೆಚ್ಚಿದಂತೆ ಆನ್ ಲೈನ್ ವಂಚನೆ ಪ್ರಕರಣಗಳು ಕೂಡ ಏರಿಕೆ ಕಂಡಿವೆ. ಸೈಬರ್ ವಂಚಕರು ಹೊಸ ಹೊಸ ವಿಧಾನಗಳ ಮೂಲಕ ಯುಪಿಐ ಬಳಕೆದಾರರ ಖಾತೆಗೆ ಕನ್ನ ಹಾಕಲು ಪ್ರಯತ್ನಿಸುತ್ತಲೇ ಇರುತ್ತಾರೆ. ಯುಪಿಐ ಪಾವತಿಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದರಲ್ಲಿ ಜಾಗರೂಕರಾಗಿರಬೇಕು.
1.ನಂಬಿಕೆ ಇರುವಂತಹ ಯುಪಿಐ ಅಪ್ಲಿಕೇಷನ್ ಬಳಸುವುದು ಉತ್ತಮ. ಗೂಗಲ್ ನಲ್ಲಿ ಅನೇಕ ರೀತಿಯ ಯುಪಿಐ ಅಪ್ಲಿಕೇಷನ್ ಗಳು ಲಭ್ಯವಿರತ್ತವೆ ಆದರೆ, ಇವುಗಳಲ್ಲಿ ಅತ್ಯಂತ ಸುರಕ್ಷಿತ ಹಾಗೂ ನಂಬಿಕಾರ್ಹ ಅಪ್ಲಿಕೇಷನ್ ಆಯ್ಕೆ ಮಾಡೋದು ತುಂಬಾ ಮುಖ್ಯವಾಗಿರುತ್ತದೆ. ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಂ ಇವು ಕೆಲವು ಪ್ರಮುಖ ಅಪ್ಲಿಕೇಷನ್ ಗಳಾಗಿವೆ. ಈ ಆಪ್ ಗಳು ಪ್ರಮುಖ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳ ಬೆಂಬಲ ಹೊಂದಿವೆ. ಹೀಗಾಗಿ ಈ ಆಪ್ ಗಳ ಬಳಕೆಯಿಂದ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಬಹುದು.
2.ಯುಪಿಐ ಪಿನ್ ಸುರಕ್ಷಿತವಾಗಿಟ್ಟುಕೊಳ್ಳಬೇಕು.
ನಮ್ಮ ಯುಪಿಐ ಪಿನ್ ನಮ್ಮ ಹಣಕ್ಕೆ ಕೀಲಿಕೈ. ಇದ್ದ ಹಾಗೆ. ಇದನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಅಗತ್ಯ. ಯಾರೊಂದಿಗೂ ನಮ್ಮ ಪಿನ್ ಶೇರ್ ಮಾಡಬೇಡಬಾರದು. ಹಾಗೆಯೇ ಈ ಪಿನ್ ಅನ್ನು ನಾವು ನಂಬಿಕೆ ಹೊಂದಿರದ ಯಾವುದೇ ವೆಬ್ ಸೈಟ್ ಅಥವಾ ಅಪ್ಲಿಕೇಷನ್ ನಲ್ಲಿ ನಮೂದಿಸಬಾರದು. ಹಾಗೆಯೇ ನಮ್ಮ ಪಿನ್ ಅನ್ನು ನಿಯಮಿತವಾಗಿ ಬದಲಾಯಿಸುತ್ತಿರಬೇಕು.
3. ಯಾವುದೇ ಹಣ ಪಾವತಿ ಮಾಡುವ ಮುನ್ನ ನಾವು ಹಣ ಕಳುಹಿಸಬೇಕಾಗಿರುವ ವ್ಯಕ್ತಿಯ ಮಾಹಿತಿಗಳನ್ನು ಜಾಗರೂಕತೆಯಿಂದ ಪರಿಶೀಲಿಸಿ ಕೊಳ್ಳಬೇಕು. ಕಳುಹಿಸಬೇಕಾಗಿರುವ ವ್ಯಕ್ತಿಯ ಹೆಸರು, ಯುಪಿಐ ಐಡಿ ಹಾಗೂ ಮೊಬೈಲ್ ಸಂಖ್ಯೆ ಮುಂತಾದ ಮಾಹಿತಿಗಳನ್ನು ಪರಿಶೀಲಿಸಿ ಮತ್ತೆ ಹಣ ಕಳುಹಿಸಬೇಕು.
4.ನಮ್ಮನ್ನು ಜಾಣತನದಿಂದ ಯಾಮಾರಿಸಿ ಹಣ ದೋಚುವ ವಂಚಕರು ದೊಡ್ಡ ಪ್ರಮಾಣದಲ್ಲಿರುತ್ತಾರೆ. ನಮ್ಮ ಯುಪಿಐ ಪಿನ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಮುಂತಾದ ವೈಯಕ್ತಿಕ ಮಾಹಿತಿಗಳನ್ನು ಪಡೆದು ನಮ್ಮನ್ನು ವಂಚಿಸುತ್ತಾರೆ. ಇ-ಮೇಲ್, ಮೆಸೇಜ್ ಗಳ ಮೂಲಕ ಕೂಡ ನಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ. ಹೀಗಾಗಿ ನಮಗೆ ಬಂದಿರುವ ಅನುಮಾನಾಸ್ಪದ ಇ-ಮೇಲ್ ಅಥವಾ ಸಂದೇಶಗಳಲ್ಲಿನ ಲಿಂಕ್ ಗಳ ಮೇಲೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಬಾರದು. ಎಷ್ಟೇ ನಂಬಿಕಸ್ತನಾದರೂ ಅವನಿಗೆ ನಮ್ಮ ಡಿಟೇಲ್ಸ್ ಅನ್ನು ಕೊಡಬಾರದು.
5.ನಾವು ಆನ್ ಲೈನ್ ಪಾವತಿಗೆ ಬಳಸುವ ಸಾಧನ ಕೂಡ ವಂಚಕರ ಟಾರ್ಗೆಟ್ ನಲ್ಲಿರುತ್ತದೆ. ಹೀಗಾಗಿ ನಾವು ಯುಪಿಐ ಪಾವತಿಗೆ ಬಳಸುವ ಮೊಬೈಲ್ ಅಥವಾ ಲ್ಯಾಪ್ ಟಾಪ್ ಗಳಿಗೆ ಪಿನ್ ಬಳಸಿ ಉಪಯೋಗಿಸುವುದು ಒಳ್ಳೆಯದು.