ರಾಷ್ಟ್ರ : 2024ರ ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ಪ್ಯಾರಿಸ್ನಲ್ಲಿ ಅಧಿಕೃತ ಕಾಫಿ ಪಾರ್ಟ್ ನರ್ ಆಗಿರುವುದಕ್ಕೆ ಕೋಸ್ಟಾ ಕಾಫಿ ಹರ್ಷ ವ್ಯಕ್ತ ಪಡಿಸಿದೆ. ಈ ಮೂಲಕ ಕೋಸ್ಟಾ ಕಾಫಿಯು ಭಾರತೀಯ ಬರಿಸ್ಟಾಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವ ಮೂಲಕ ಕಾಫಿ ಸಂಸ್ಕೃತಿಯನ್ನು ಪಸರಿಸುವುದರಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಆರು ದೇಶಗಳ 130 ಕೋಸ್ಟಾ ಕಾಫಿ ತಂಡದ ಸದಸ್ಯರು ಆರು ಕಿಯೋಸ್ಕ್ ಗಳು ಮತ್ತು 110 ಕ್ಕೂ ಹೆಚ್ಚು ಸೆಲ್ಫ್ ಸರ್ವೀಸ್ ಪ್ಯಾಕ್ಟೋ ಯಂತ್ರಗಳನ್ನು ಬಳಸಿಕೊಂಡು ಪ್ಯಾರಿಸ್ನಾದ್ಯಂತ ಏಳು ಸ್ಥಳಗಳಲ್ಲಿ ಕ್ರೀಡಾ ಅಭಿಮಾನಿಗಳು ಮತ್ತು ಕ್ರೀಡಾಪಟುಗಳಿಗೆ ಬಿಸಿ ಬಿಸಿಯಾದ ಕಾಫಿ ಮತ್ತು ತಂಪು ಪಾನೀಯದ ರುಚಿ ಮತ್ತು ಅನುಭವವನ್ನು ದಾಟಿಸಲಿದ್ದಾರೆ.
ಬರಿಸ್ಟಾ ಎಂದರೆ ಸಾರ್ವಜನಿಕರಿಗೆ ಕಾಫಿ (ಉದಾಹರಣೆಗೆ ಎಸ್ಪ್ರೆಸೊ) ತಯಾರಿಸುವ ಮತ್ತು ನೀಡುವ ವ್ಯಕ್ತಿ ಎಂದರ್ಥ. ಈ ಸಹಯೋಗದ ಭಾಗವಾಗಿ ಕೋಸ್ಟಾ ಕಾಫಿಯು ಅಮೀರ್ ಫಯೀಜ್, ಮಲ್ಲಿಕಾ ತ್ರಿಪುರಾ ಮತ್ತು ಅಭಿಷೇಕ್ ಕುಮಾರ್ ಎಂಬ ಮೂರು ಅತ್ಯುತ್ತಮ ಭಾರತೀಯ ಬರಿಸ್ಟಾಗಳನ್ನು ಪರಿಚಯಿಸುತ್ತಿದೆ. ಈ ಪ್ರತಿಭಾವಂತರು ಕಠಿಣ ತರಬೇತಿಯ ಮೂಲಕ ತಮ್ಮ ಕೌಶಲ್ಯಗಳನ್ನು ಉತ್ತಮಗೊಳಿಸಿದ್ದಾರೆ ಮತ್ತು ಕೋಸ್ಟಾ ಕಾಫಿಯ ಟೀಮ್ವರ್ಕ್ ಹಾಗೂ ಶ್ರೇಷ್ಠತೆಯ ಮೌಲ್ಯಗಳ ಸಾಕಾರ ರೂಪದಂತೆ ಇರುತ್ತಾರೆ. ಕೋಸ್ಟಾ ಕಾಫಿ ತಂಡದ ಸದಸ್ಯರು ಎಲ್ಲಾ ಕಡೆ ಸುಲಭವಾಗಿ ಕಾಫಿ ದೊರೆಯುವಂತೆ ಮಾಡುತ್ತಾರೆ ಮತ್ತು ಕ್ರೀಡಾಪಟುಗಳು ಹಾಗೂ ಪ್ರೇಕ್ಷಕರಿಗೆ ಪ್ರತ್ಯೇಕವಾಗಿ ಕಾಫಿ ಮಾಸ್ಟರ್ ಕ್ಲಾಸ್ಗಳನ್ನು ನಡೆಸಿಕೊಡಲಿದ್ದಾರೆ. ಒಲಿಂಪಿಕ್ಸ್ ಗೇಮ್ಸ್ ಹುಮ್ಮಸ್ಸನ್ನು ಹೆಚ್ಚುಗೊಳಿಸುವಂತೆ ಕೋಸ್ಟಾ ಕಾಫಿ ತಂಡದ ಆಯ್ದ ಸದಸ್ಯರು ಒಲಿಂಪಿಕ್ ಗೇಮ್ಸ್ ನಲ್ಲಿ ಜ್ಯೋತಿ ಹಿಡಿಯುವ ಅದ್ಭುತ ಅವಕಾಶವನ್ನು ಪಡೆಯಲಿದ್ದಾರೆ.
ಈ ಕುರಿತು ಮಾತನಾಡಿರುವ ಕೋಕಾ-ಕೋಲಾ ಕಂಪನಿಯ ಕೋಸ್ಟಾ ಕಾಫಿಯ ಭಾರತ ಮತ್ತು ಎಮರ್ಜಿಂಗ್ ಇಂಟರ್ ನ್ಯಾಷನಲ್ ವಿಭಾಗದ ಜನರಲ್ ಮ್ಯಾನೇಜರ್ ವಿನಯ್ ನಾಯರ್ ಅವರು, “2024ರ ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ನ ಅಧಿಕೃತ ಕಾಫಿ ಪಾಲುದಾರರಾಗಿರುವುದಕ್ಕೆ ನಮಗೆ ಹೆಮ್ಮೆ ಇದೆ. ಈ ಅವಕಾಶವು ಪ್ರತಿಷ್ಠಿತ ಅಂತರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ಭಾರತೀಯ ಬರಿಸ್ಟಾಗಳಿಗೆ ತಮ್ಮ ಕೌಶಲ್ಯ ಮತ್ತು ಕಲಾತ್ಮಕತೆ ಪ್ರದರ್ಶಿಸಲು ಅವಕಾಶ ನೀಡುತ್ತದೆ ಮತ್ತು ಅದರ ಜೊತೆಗೆ ನಮ್ಮ ಪ್ರತಿಭಾವಂತ ತಂಡದ ಸದಸ್ಯರ ಮೇಲೆ ಇರುವ ನಮ್ಮ ಬದ್ಧತೆಯನ್ನು ಕೂಡ ತಿಳಿಸುತ್ತದೆ. ಅವರಿಗೆ ಈ ಅಪೂರ್ವ ಅವಕಾಶವನ್ನು ಒದಗಿಸುವ ಮೂಲಕ ನಾವು ಅವರ ಬೆಳವಣಿಗೆಯ ಕಡೆಗೆ ಗಮನ ನೀಡುತ್ತಿದ್ದೇವೆ, ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಮತ್ತು ಶ್ರೇಷ್ಠತೆ ಸಾಧಿಸುವ ಅವರ ಬದ್ಧತೆಯನ್ನು ಗೌರವಿಸುತ್ತಿದ್ದೇವೆ” ಎಂದು ಹೇಳಿದರು.
2024ರ ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ನಲ್ಲಿ ಭಾರತದ ನಮ್ಮ ಬರಿಸ್ಟಾಗಳ ಭಾಗವಹಿಸುವಿಕೆಯು ಅಮೂಲ್ಯ ಅನುಭವ ನೀಡುವ ಮತ್ತು ಅರ್ಥಪೂರ್ಣ ಸಂಪರ್ಕಗಳನ್ನು ಸಾಧ್ಯವಾಗಿಸುವ ಒಂದು ವಿಶಿಷ್ಟ ಪ್ರಯಾಣವಾಗಲಿದೆ.