ವಡಾ ಪಾವ್ ದೇಸಿ ಖಾದ್ಯವಾಗಿದೆ. ಎಲ್ಲ ವರ್ಗದ ಜನರು ತಿನ್ನಲು ಬಯಸುವ ಆಹಾರವಾಗಿದೆ. ಇದು ಮೂಲತಃ ಮಹಾರಾಷ್ಟ್ರಕ್ಕೆ ಸೇರಿದ ಸಸ್ಯಾಹಾರಿ ಫಾಸ್ಟ್ ಫುಡ್ ಖಾದ್ಯವಾಗಿದೆ. ಈ ಖಾದ್ಯವು ಬ್ರೆಡ್, ಬನ್ (ಪಾವ್) ಒಳಗೆ ಇರಿಸಲಾದ ಬಟಾಟೆ ವಡಾವನ್ನು ಒಳಗೊಂಡಿದೆ. ಇದನ್ನು ಸಾಮಾನ್ಯವಾಗಿ ಚಟ್ನಿಗಳು ಮತ್ತು ಹಸಿರು ಮೆಣಸಿನಕಾಯಿಯೊಂದಿಗೆ ಸವಿಯಲಾಗುತ್ತದೆ.
ಇದು ಮುಂಬೈನಲ್ಲಿ ಕೈಗೆಟುಕುವ ಬೀದಿ ಬದಿ ಆಹಾರವಾಗಿ ಹುಟ್ಟಿಕೊಂಡರೂ, ಇದು ಇಂದು ಭಾರತದಾದ್ಯಂತ ಆಹಾರ ಮಳಿಗೆಗಳು ಮತ್ತು ರೆಸ್ಟೋರೆಂಟ್ಗಳಲ್ಲಿನ ಮೆನುವನ್ನು ಸೇರಿಕೊಂಡಿದೆ. ಇದನ್ನು ಬಾಂಬೆ ಬರ್ಗರ್ ಎಂದೂ ಕರೆಯುತ್ತಾರೆ, ನೋಡಲು ಪಕ್ಕ ಬರ್ಗರ್ ನಂತೆ ಕಂಡರು ಇದು ಬರ್ಗರ್ ಅಲ್ಲ ಪಕ್ಕ ದೇಸಿ ಅಗ್ಗದ ಆಹಾರವಾಗಿದೆ. ಮುಂಬೈನ ಅತ್ಯಂತ ಪ್ರಸಿದ್ಧ ತಿಂಡಿಯಾದ ವಡಾ ಪಾವ್ ಮುಂಬೈಗರ ಸಂಸ್ಕೃತಿಯ ಒಂದು ಭಾಗವೆಂದು ಹೇಳಲಾಗುತ್ತದೆ.
ಮುಂಬೈನಲ್ಲಿ ವಡಾ ಪಾವ್ ಮಾರಾಟ ಮಾಡುವ ೨೦,೦೦೦ ಕ್ಕೂ ಹೆಚ್ಚು ಮಳಿಗೆಗಳಿವೆ. ಮುಂಬೈ ಒಂದರಲ್ಲೇ ಸ್ಥಳದ ಆಧಾರದ ಮೇಲೆ ವಡಾ ಪಾವ್ಲ್ಲಿ ಅನೇಕ ವಿಧಗಳಿವೆ. ಮುಲುಂಡ್ ನ ಕುಂಜ್ವಿಹಾರ್ ಜಂಬೋ ಕಿಂಗ್ ಮತ್ತು ಗೋಲಿ ವಡಾ ಪಾವ್ ನಂತಹ ದೊಡ್ಡ ಫಾಸ್ಟ್ ಫುಡ್ ರೆಸ್ಟೋರೆಂಟ್ ಸರಪಳಿಗಳು ಸಹ ಪ್ರಾಥಮಿಕವಾಗಿ ವಡಾ ಪಾವ್ ಅನ್ನು ಪೂರೈಸುತ್ತವೆ. ಮುಂಬೈನ ಹೊರಗೆ, ವಡಾ ಪಾವ್ ನ ಹೊಸ ರೂಪಾಂತರ ಪಾವ್ ವಡಾ, ಇದು ನಾಸಿಕ್ ನಲ್ಲಿ ಪ್ರಸಿದ್ಧವಾಗಿದೆ.
ರೈಲ್ವೆ ನಿಲ್ದಾಣದಿಂದ ಶುರುವಾದ ಈ ವಡಾ ಪಾವ್, ವ್ಯವಾಹರಿಕವಾಗಿ ಇಂದು ದೇಶದ್ಯಾಂತ ಮೂಲೆ ಮೂಲೆಯಲ್ಲಿ ವೈವಾಟು ನಡೆಸುತ್ತಿದೆ. ಬೀದಿಯ ವಡಾ ಪಾವ್ ಸ್ಟಾಲ್ಗಳಲ್ಲಿನ ಸಿಗುವ ವಡಾಪಾವ್ ಇಂದು ಮಾಲ್ಗಳಲ್ಲಿನ ಫುಡ್ ಕೋರ್ಟ್ನ ಪಾಸ್ಟ್ ಫುಡ್ ಕೌಂಟರ್ ನಲ್ಲಿಯು ಲಭ್ಯ.