ಬೆಂಗಳೂರು: ಕ್ಲೌಡ್ ದೈತ್ಯ ಸಂಸ್ಥೆಯಾಗಿರುವ ಒರಾಕಲ್ ಎಲೆಕ್ಟ್ರಾನಿಕ್ ಹೆಲ್ತ್ ಕೇರ್ ರೆಕಾರ್ಡ್ಸ್ ಸಂಸ್ಥೆ ತನ್ನ 3000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಇನ್ಸೈಡರ್ ವರದಿ ಮಾಡಿದ್ದು, ಕಳೆದ ಜೂನ್ ನಂತರದಲ್ಲಿ ಸಾವಿರಾರು ಉದ್ಯೋಗಿಗನ್ನು ವಜಾಗೊಳಿಸಿದೆ ಎನ್ನಲಾಗಿದೆ. ಒರಾಕಲ್ ನ ಈ ನಡೆಯ ಬಳಿಕ ಮಾರ್ಕೆಟಿಂಗ್, ಇಂಜಿನಿಯರಿಂಗ್, ಅಕೌಂಟ್ಸ್, ಕಾನೂನು ಮತ್ತು ಉತ್ಪನ್ನ ವಿಭಾಗಗಳ ಮೇಲೆ ಪರಿಣಾಮ ಬೀಳಲಿದೆ.
ಸೆರ್ನರ್ ಮೂಲಕ ಸುಮಾರು 28,000 ಉದ್ಯೋಗಿಗಳನ್ನ ಒರಾಕಲ್ ಪಡೆದುಕೊಂಡಿದೆ. ಒರಾಕಲ್ ಬಡ್ತಿಗಳನ್ನ ನೀಡಿಲ್ಲ ಮತ್ತು ಈ ವರ್ಷದ ಆರಂಭದಲ್ಲಿ ಉದ್ಯೋಗಿಗಳು 2023ರಲ್ಲಿ ಏನನ್ನೂ ನಿರೀಕ್ಷಿಸಬಾರದು ಎಂದು ಘೋಷಿಸಿತ್ತು.