ಮತದಾನ ದಿನವಾದ ಇಂದು ಮತದಾನದ ಮಹತ್ವ ಮತ್ತು ಅಧಿಕಾರವನ್ನು ಚಲಿಸುವಲ್ಲಿ ಯಾವ ಸೆಲೆಬ್ರಿಟಿಗಳು ಹಿಂದೆ ಬಿದ್ದಿಲ್ಲ.
ಡಾಲಿ ಧನಂಜಯ – ಕಾಳೇನಹಳ್ಳಿಯಲ್ಲಿ ಮತಚಲಾಯಿಸಿದರು, ರಾಜ್ಯ ಸಭಾ ಸದಸ್ಯರಾದ ಜಗ್ಗೇಶ ಮತ್ತು ಅವರ ಪತ್ನಿ ಮಲ್ಲೇಶ್ವರಂ ಕ್ಷೇತ್ರದಲ್ಲಿ ತಮ್ಮ ಮತದಾನ ಮಾಡಿದರು.
,ಪ್ರಕಾಶರಾಜ್ – ಶಾಂತಿನಗರ ಸೆಂಟ್ ಜೋಸೆಫ್ ಸ್ಕೂಲನಲ್ಲಿ ಮತದಾನ ಮಾಡಿ ಅದನ್ನು ಟ್ವೀಟಮೂಲಕ ಹಂಚಿಕೊಂಡಿದ್ದಾರೆ. ರಾಜಕುಮಾರ ಪರಿವಾರದ ಸದಸ್ಯರೊಂದಿಗೆ ಅಶ್ವಿನಿ ಪುನೀತರಾಜಕುಮಾರ ಮತ್ತು ರಾಘವೇಂದ್ರ ರಾಜಕುಮಾರ ಸದಾಶಿವನಗರದಲ್ಲಿ ಮತದಾನ ಮಾಡಿದರು.
ಗಣೇಶ ಮತ್ತು ಪತ್ನಿ ಶಿಲ್ಪಾ ಆರ್.ಆರ್.ನಗರ ಬೆಂಗಳೂರಿನಲ್ಲಿ ರಕ್ಷಿತ ಶೆಟ್ಟಿ – ಬೆಂಗಳೂರಿನಿಂದ ಉಡುಪಿಗೆ ತೆರಳಿ ಮತ ಚಲಾವಣೆ ಮಾಡಿದರು .
ರಮೇಶ ಅರವಿಂದ ಮತ್ತು ಅವರ ಪತ್ನಿ- ಬೆಂಗಳೂರಿನ ಜೆ.ಪಿ.ನಗರದಲ್ಲಿ ಮತಚಲಾಯಿಸಿದರು.
ಅಮೂಲ್ಯ ಮತ್ತು ಅವರ ಪತಿ – ರಾಜರಾಜೇಶ್ವರಿನಗರದಲ್ಲಿ ಮತ ಚಲಾಯಿಸಿದರು.
ಸಪ್ತಮಿಗೌಡ ಬೆಂಗಳೂರಿನಲ್ಲಿ ತಮ್ಮ ಹಕ್ಕನ್ನು ಚಲಾಯಿಸಿ ಇತರರಿಗೂ ಮತ ಚಲಾಯಿಸುವಂತೆ ಆಗ್ರಹಿಸಿದರು. ಅಲ್ಲದೆ ಅನೇಕ ಮಠಾಧೀಶರು ಸಹ ಮತಚಲಾಯಿಸಿದರು.ಅದರಲ್ಲಿ ಪ್ರಮುಖವಾಗಿ
ಸೋದೆ ವಿಶ್ವವಲ್ಲಭ ತೀರ್ಥರು, ಪೇಜಾವರ ವಿಶ್ವ ಪ್ರಸನ್ನ ತೀರ್ಥರು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥರು ಉಡುಪಿಯಲ್ಲಿ ಮತಚಲಾಯಿಸಿದರು.
ಹಾಸ್ಯ ಕಲಾವಿದ ಮತ್ತು ಮಿಸ್ಟರ್ ನ್ಯಾಗ್ಸ ಖ್ಯಾತಿಯ ದಾನಿಶ್ ಶೇಠ್ ಬೆಂಗಳೂರಿನಲ್ಲಿ ಮತಚಲಾಯಿಸಿದರು.
ಸುಧಾಮೂರ್ತಿ ಮತ್ತು ನಾರಾಯಣಮೂರ್ತಿ ದಂಪತಿಗಳು ಜಯನಗರದಲ್ಲಿ ಮತ ಚಲಾಯಿಸಿದರು.