ಈಗಿನ ಕಾಲದಲ್ಲಿ ನಾವು ಎಲ್ಲಿ ಬೇಕಾದರೂ ಓಡಾಡೋಕೆ ರಸ್ತೆ, ಮೂಲಭೂತ ಸೌಕರ್ಯ ಎಲ್ಲವೂ ಇದೆ. ಆದರೆ ಕಾರ್ ಕಲಿಯದೆ ಇರೋರಿಗೆ ಇದೊಂದು ಟಾಸ್ಕ್ ಆಗಿ ಬಿಡುತ್ತದೆ. ನಿಮಗೂ ಟ್ರಾವೆಲ್ ಮಾಡೋದು ಟಾಸ್ಕ್ ಅನಿಸ್ತಿದ್ಯಾ? ನೀವು ಇತ್ತೀಚೆಗೆ ಕಾರ್ ಕಲಿಯುತ್ತಿದ್ದೀರಾ. ಕಾರ್ ಚಾಲನೆ ಮಾಡುವ ಮೊದಲು ಅದರಲ್ಲಿನ ಹೊಸ ಫೀಚರ್ಸ್ ಗಳನ್ನು ಅರಿತುಕೊಳ್ಳಿ.
• ನಿಮ್ಮ ಎತ್ತರಕ್ಕೆ ತಕ್ಕಂತೆ ಕಾರಿನ ಸೀಟ್ ಅನ್ನು ಹೊಂದಿಸಿಕೊಳ್ಳೊ. ಇದರಿಂದ ನಿಮ್ಮ ದೃಷ್ಟಿ ರಸ್ತೆಯ ಬಿಳಿ ಪಟ್ಟಿ ಕಾಣುವಷ್ಟು ಇರಬೇಕು. ಸಲೀಸಾಗಿ ನಿಮ್ಮ ಕಾಲುಗಳು ಕ್ಲಚ್, ಬ್ರೇಕ್ ಗಳಿಗೆ ತಲುಪುವ ಹಾಗೆ ಇರಬೇಕು.
• ನೀವು ಕಾರ್ ಚಾಲಿಸುವಾಗ ಮೊಬೈಲ್ ನೋಡುವುದು, ಹಿಂದೆ ತಿರುಗಿ ನೋಡುವುದನ್ನೆಲ್ಲ ಮಾಡಬೇಡಿ. ಇದರಿಂದ ಅಪಘಾತವಾಗುವ ಸಾಧ್ಯತೆಗಳು ಹೆಚ್ಚು.
• ಕಾರ್ ನ ಸ್ಟೇರಿಂಗ್ ಅನ್ನು ಸರಿಯಾಗಿ ಹಿಡಿಯಲು ಕಲಿಯಿರಿ. ಎಡಗೈ ಗಡಿಯಾರದ 10 ಗಂಟೆ ಹಾಗೂ ಬಲಗೈ 2 ಗಂಟೆ ಅಂದಾಜಿಗೆ ಇರಿಸುವುದು ಒಳ್ಳೆಯದು.
• ವಾಹನವನ್ನು ಎಡಕ್ಕೆ, ಬಲಕ್ಕೆ ತಿರುಗಿಸುವಾಗ ಇಂಡಿಕೇಟರ್ ಗಳನ್ನು ಬಳಸೋದನ್ನು ಮರೆಯಬೇಡಿ.
• ಶುರುವಿನಲ್ಲೇ ಕಾರಿನಲ್ಲಿ ಓವರ್ ಟೇಕ್ ಮಾಡಲು ಹೋಗಬೇಡಿ. ಅಚಾನಕ್ ನಿಯಂತ್ರಣ ತಪ್ಪಿದರೆ ಕಷ್ಟ.
• ಕಾರು ನಿಯಂತ್ರಣ ತಪ್ಪಿದರೆ ಅಥವಾ ಆಫ್ ಆದರೆ ಪಾರ್ಕಿಂಗ್ ಲೈಟ್ ಹಾಕೋದನ್ನ ಮರೆಯಬೇಡಿ.