ವಯಸ್ಸು ಇನ್ನು 30 ದಾಟಿರುವುದಿಲ್ಲ ಅದಾಗಲೇ ಮುಖದ ಮೇಲೆ ಮೂಡುವ ಮೊಡವೆ ಕಲೆಗಳು ಅಥವಾ ಕಪ್ಪು ಕಲೆಗಳು, ಹಣೆಯ ಮೇಲಿನ ನೆರಿಗೆ, ಚರ್ಮದ ಸುಕ್ಕುಗಳು ಇರುವ ವಯಸ್ಸನ್ನು ಇನ್ನು ಹೆಚ್ಚಾಗಿದ್ದ ಹಾಗೆ ತಮ್ಮ ಮುಖದ ಸೌಂದರ್ಯ ಹಾಳಾಗಿ ಬಿಡುತ್ತದೆ.
ಆದರೆ ಸಣ್ಣ ವಯಸ್ಸಿನಲ್ಲಿ ಇಂತಹ ಸಮಸ್ಯೆಗಳು ಯಾಕೆ ಕಂಡುಬರುತ್ತದೆ ಎಂದು ನೋಡುವುದಾದರೆ ನಾವು ಅನುಸರಿಸುತ್ತಿರುವ ಜೀವನ ಶೈಲಿ, ತಿನ್ನುವ ಆಹಾರ ಪದ್ಧತಿಗಳು ಇಂತಹ ಸಮಸ್ಯೆಗಳನ್ನು ನಿಧಾನವಾಗಿ ತಂದುಬಿಡುತ್ತದೆ.
ನಾವು ಮುಖದ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳಬೇಕೆಂದು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಸೌಂದರ್ಯವರ್ಧಕಗಳನ್ನು ಬಳಸಲು ಆರಂಭಿಸುತ್ತೇವೆ. ಆದರೆ ಅಂತಹ ಸೌಂದರ್ಯ ವರ್ಧಕಗಳಿಗೆ ರಾಸಾಯನಿಕ ಪದಾರ್ಥಗಳ ಮಿಶ್ರಣ ಆಗಿರುವುದರಿಂದ ಅದನ್ನು ನಮ್ಮ ಮುಖಕ್ಕೆ ಹಚ್ಚುವುದು ಹಾನಿಕಾರಕ. ಆ ರೀತಿಯ ಸೌಂದರ್ಯ. ವರ್ಧಕಗಳನ್ನು ಬಳಸುವಾಗ ಸೌಂದರ್ಯವು ಅಲ್ಪಗಂಟೆಗಳವರೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ನಾವು ದಾಳಿಂಬೆ ಹಣ್ಣಿನ ಫೇಸ್ ಮಾಸ್ಕನ್ನು ಒಮ್ಮೆ ಟ್ರೈ ಮಾಡುವುದರಿಂದ ಮುಖದ ಸೌಂದರ್ಯ ಮೊದಲಿನ ಹಾಗೆ ಮತ್ತೆ ನಮ್ಮ ಮುಖ ಹಸನವಾಗುತ್ತದೆ.
ದಾಳಿಂಬೆ ಹಣ್ಣು ಬೆಲೆಯಲ್ಲಿ ಸ್ವಲ್ಪ ದುಬಾರಿಯಾದರೂ ಕೂಡ ವರ್ಷ ಪೂರ್ತಿ ಸಿಗುವ ಹಣ್ಣು ಈ ಹಣ್ಣು ತಿಂದ ಬಳಿಕ ಅದರ ಸಿಪ್ಪೆಯನ್ನು ನಾವು ಹಾಗೆ ಎಸೆದು ಬಿಡುತ್ತೇವೆ. ಇನ್ನು ಮುಂದೆ ಹಾಗೆ ಮಾಡದೆ ಆ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಬಳಿಕ ಒಣಗಿದ ಸಿಪ್ಪೆಯನ್ನು ಮಿಕ್ಸಿಯ ಜಾರಿಗೆ ಹಾಕಿಕೊಂಡು ಪೌಡರ್ ಮಾಡಿಕೊಳ್ಳಬೇಕು.
ಆ ದಾಳಿಂಬೆ ಸಿಪ್ಪೆಯ ಪೌಡರನ್ನು ಒಂದು ಬೌಲಿಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಹಾಲು ಹಾಕಿ ಮಿಶ್ರಣ ಮಾಡಿಕೊಂಡು ದಪ್ಪ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಿರಬೇಕು. ಆ ಬಳಿಕ ಸುಮಾರು ಅರ್ಧ ಗಂಟೆ ಹಾಗೆ ಒಣಗಲು ಬಿಡಬೇಕು ಬಳಿಕ ತಣ್ಣೀರಿನಿಂದ ಚೆನ್ನಾಗಿ ಮುಖ ತೊಳೆದುಕೊಳ್ಳಬೇಕು. ಪ್ರತಿದಿನ ಈ ರೀತಿ ಮಾಡೋದ್ರಿಂದ ನಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾ ಹೋಗಬಹುದು.
ಹದಿಹರೆಯವರಲ್ಲಿ ಮೊಡವೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಸಮಯದಲ್ಲಿ ಒಂದು ಟೇಬಲ್ ಚಮಚ ಆಗುವಷ್ಟು ದಾಳಿಂಬೆ ಪುಡಿಗೆ ಅಷ್ಟೇ ಪ್ರಮಾಣದ ನಿಂಬೆರಸಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಂಡು ನಿಮ್ಮ ಮುಖದ ಮೊಡವೆ ಆಗಿದ್ದ ಭಾಗಗಳಿಗೆ ಹಚ್ಚಿ ಕೆಲ ಗಂಟೆಗಳ ಬಳಿ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಬೇಕು ಹೀಗೆ ಮಾಡುವುದರಿಂದ ಕೂಡ ನಮ್ಮ ಮುಖ ಕ್ಲೀನಾಗಿ ಯಾವುದೇ ಸುಕ್ಕು ಇಲ್ಲದ ಹಾಗೆ ಕಾಣಿಸುತ್ತದೆ.