ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ, ಬಿಸಿಲಿನಿಂದ ತಂಪಾಗಿಸಿಕೊಳ್ಳಲು ಫ್ಯಾನ್ ಬೇಕೆ ಬೇಕು ಎಂಬಂತಹ ಸ್ಥಿತಿ ನಮ್ಮೆಲ್ಲರದ್ದು. ಅದರಲ್ಲೂ ಮನೆಯಲ್ಲಿ ಎಸಿ ಇಲ್ಲದಿದ್ರೂ ಫ್ಯಾನ್ ಅಂತೂ ರನ್ ಆಗ್ತಾನೇ ಇರಬೇಕು. ಪ್ರತಿಯೊಬ್ಭರ ಮನೆಯಲ್ಲಿ ಸೀಲಿಂಗ್ ಫ್ಯಾನ್ ಅಂತೂ ಇದ್ದೇ ಇರುತ್ತದೆ. ಆದರೆ ಫ್ಯಾನ್ ವೇಗವಾಗಿ ಓಡುತ್ತಿದ್ದರೆ ಹೆಚ್ಚು ಕರೆಂಟ್ ಖರ್ಚಾಗುತ್ತದೆ ಎಂಬುವುದು ಕೆಲವರ ಅಭಿಪ್ರಾಯ. ಆದರೆ ಅದು ಎಷ್ಟು ನಿಜ?
ಬೇಸಿಗೆಯಲ್ಲಿ ದಿನದ 24 ಗಂಟೆನೂ ಫ್ಯಾನ್ ಒನ್ ಇರಬೇಕು. ಅದರಲ್ಲೂ ಫುಲ್ ಸ್ಫೀಡ್ ನಲ್ಲಿ ಫ್ಯಾನ್ ತಿರುಗುತ್ತಾ ಇರಬೇಕು. ಎಸಿ, ಏರ್ ಕೂಲರ್ಗೆ ಹೋಲಿಸಿದರೆ ಫ್ಯಾನ್ ಕಡಿಮೆ ವ್ಯಾಟ್ಸ್ನಲ್ಲಿ ವರ್ಕ್ ಆಗುತ್ತದೆ. ಸೀಲಿಂಗ್ ಫ್ಯಾನ್ ಎಷ್ಟು ಪವರನ್ನು ಬಳಸುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿರುವುದಿಲ್ಲ. ಇದಕ್ಕಾಗಿಯೇ ಖರೀದಿ ಮಾಡುವ ಮೊದಲು ಸೀಲಿಂಗ್ ಫ್ಯಾನ್ಗಳ ವಿದ್ಯುತ್ ಬಳಕೆಯನ್ನು ತಿಳಿದು ತರುವುದು ಮುಖ್ಯ.
ಕೆಲವರು ಫ್ಯಾನ್ ಸ್ಪೀಡ್ ಹೆಚ್ಚಾದ್ರೆ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ ಎಂದುಕೊಂಡಿರುತ್ತಾರೆ. ಇದು ತಪ್ಪು ಕಲ್ಪನೆ. ಫ್ಯಾನ್ ಸ್ಪೀಡ್ ಹೆಚ್ಚಿದ್ದರೂ, ಕಡಿಮೆಯಿದ್ದರೂ ಒಂದೇ ರೀತಿಯ ವ್ಯಾಟ್ಸ ಎಳೆದುಕೊಳ್ಳುತ್ತದೆ. ಇನ್ನು ಕ್ವಾಲಿಟಿ ಹೆಚ್ಚಿದ್ದರೆ ವ್ಯಾಟ್ಸ ಕಡಿಮೆಯಾಗುತ್ತದೆ.ಇದನ್ನು ನಾವೆಲ್ಲರು ತಿಳಿದುಕೊಳ್ಳುವುದು ಉತ್ತಮವಾಗಿರುತ್ತದೆ.
ಮುಖ್ಯವಾಗಿ ಸೀಲಿಂಗ್ ಫ್ಯಾನ್ನ ವಿದ್ಯುತ್ ಬಳಕೆ ಸುಮಾರು 75 ವ್ಯಾಟ್ಸ ಆಗಿರುತ್ತದೆ. ಸೀಲಿಂಗ್ ಫ್ಯಾನ್ ಬ್ರ್ಯಾಂಡ್, ನಿಮ್ಮ ಸೀಲಿಂಗ್ ಫ್ಯಾನ್ನ ಗಾತ್ರ, ಸೀಲಿಂಗ್ ಫ್ಯಾನ್ ಬಳಸುವ ಸರಾಸರಿ ಅವಧಿ ಮೇಲೆ ವ್ಯಾಟ್ಸ್ ಅವಲಂಭಿತವಾಗಿರುತ್ತೆ. ಸೀಲಿಂಗ್ ಫ್ಯಾನ್ನ ವಿದ್ಯುತ್ ಬೇಡಿಕೆಯು ಅದರ ಹೆಚ್ಚಿನ ವೇಗದಲ್ಲಿ ಅಲ್ಲದೆ, ವ್ಯಾಟ್ಗಳಲ್ಲಿ ಅಳೆಯಲಾಗುತ್ತದೆ.
ಪ್ರತಿಗಂಟೆಗೆ ನಾರ್ಮಲ್ ಸೀಲಿಂಗ್ ಫ್ಯಾನ್ 75 ವ್ಯಾಟ್ ಬೇಕು. ಒಂದು ದಿನಕ್ಕೆ ಈ ವ್ಯಾಟ್ 900 ಆಗುತ್ತೆ. ತಿಂಗಳು ಪೂರ್ತಿ ಇದೇ ಲೆಕ್ಕಾಚಾರದಲ್ಲಿ ಲೆಕ್ಕ ಹಾಕಿದ್ರೆ 900 X 30=3000 ಸಾವಿರ ವ್ಯಾಟ್ಸ ಬೇಕಾಗುತ್ತದೆ. ಆದ್ದರಿಂದ ಸೀಲಿಂಗ್ ಫ್ಯಾನ್ನಲ್ಲಿ ಬಳಸುವ ಮೋಟರ್ನ ಗಾತ್ರ ಮತ್ತು ಪ್ರಕಾರವು ಅದು ಎಷ್ಟು ಶಕ್ತಿಯನ್ನು ಬಳಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ ಹೂರತು ಫ್ಯಾನ್ ಸ್ಪೀಡ್ನಲ್ಲಿಟ್ರು, ಕಡಿಮೆಯಿಟ್ರು ಒಂದೇ ರೀತಿ ವ್ಯಾಟ್ಸ ಕಡಿತಗೊಳ್ಳುತ್ತದೆ ಎನ್ನುವುದನ್ನು ನಾವೆಲ್ಲರು ಅರಿಯಲೇಬೇಕಾದ ಸತ್ಯವಾಗಿದೆ