ಮೂಲಂಗಿ ಎಲ್ಲರಿಗೂ ಇಷ್ಟವಾಗುವ ತರಕಾರಿ ಏನಲ್ಲ. ಕೆಲವು ಮಂದಿ ಮೂಲಂಗಿ ಹೆಸರು ಕೇಳಿದರೆಯೇ ಮೂಗು ಮುರಿತಾರೆ. ಆದರೆ ಈ ಮೂಲಂಗಿಯಿಂದ ಜೀರ್ಣಕ್ರಿಯೆ ಸುಧಾರಿಸುತ್ತೆ, ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಒಮ್ಮೆ ಈ ಮೂಲಂಗಿ ಮೊಸರುಬಜ್ಜಿ ಟ್ರೈ ಮಾಡಿ
ಬೇಕಾಗಿರುವ ಪದಾರ್ಥಗಳು
ತುರಿದ ಮೂಲಂಗಿ
ಮೊಸರು
ಸಾಸಿವೆ
ಉದ್ದಿನಬೇಳೆ
ಕಡಲೆಬೇಳೆ
ಒಣಮೆಣಸಿನಕಾಯಿ
ಕಾಯಿತುರಿ (ಬೇಕಿದ್ದರೆ)
ಉಪ್ಪು
ಎಣ್ಣೆ
ಮಾಡುವ ವಿಧಾನ
• ಮೊದಲಿಗೆ ಒಂದು ಬಾಣಲಿಯಲ್ಲಿ ಒಂದು ಚಮಚ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
• ಒಂದು ಪಾತ್ರೆಯಲ್ಲಿ ತುರಿದ ಮೂಲಂಗಿ, ಮೊಸರು, ಉಪ್ಪು, ಕಾಯಿತುರಿ (ಬೇಕಿದ್ದರೆ), ಸಿದ್ದವಾಗಿರುವ ಒಗ್ಗರಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಮೂಲಂಗಿ ಮೊಸರುಬಜ್ಜಿ ಸವಿಯಲು ಸಿದ್ದ.
• ಇದನ್ನು ಅನ್ನಕ್ಕೆ, ಚಪಾತಿ, ಪರೋಟಾ ಜೊತೆಗೂ ಸೇವಿಸಬಹುದು.