ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರತಿಯೊಬ್ಬರಿಗೂ ಮೊಬೈಲ್ ಬೇಕೇ ಬೇಕು. ಒಂದು ದಿನ ಮೊಬೈಲ್ ಇಲ್ಲವಾದರೂ ಕೆಲವೊಬ್ಬರಿಗೆ ದಿನನೇ ಸಾಗುವುದಿಲ್ಲ ಇನ್ನೂ ಒಂದು ವೇಳೆ ಮೊಬೈಲ್ ಕಳುವಾದರೆ ಅಂತು ನಿಂತಲ್ಲಿ ನಿಲ್ಲಲಾರದೆ ಚಡಪಡಿಸುತ್ತಾರೆ. ಇನ್ನು ಮುಂದೆ ಮೊಬೈಲ್ ಕಳೆದುಹೋದರೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನಿಮ್ಮ ಪೋನ್ ಕಳೆದು ಹೋದರೆ ಕೂತಲ್ಲಿಯೇ ನಿಮ್ಮ ಪೋನ್ನ್ನು ಬೇರೆಯವರು ಬಳಸದಂತೆ ಲಾಕ್ ಮಾಡುವ ಸೌಲಭ್ಯವನ್ನು ರಾಜ್ಯ ಪೋಲೀಸ್ ಇಲಾಖೆ ನೀಡುತ್ತಿದೆ.
ಮೊಬೈಲ್ ಕಳುವಾದರೆ ಏನು ಮಾಡಬೇಕು:
ಮೊಬೈಲ್ ಕಳುವಾದರೆ ಮೊದಲು ಪೋಲೀಸ್ ಇಲಾಖೆಯ ಇ ಲಾಸ್ಟ್ನಲ್ಲಿ ದೂರು ದಾಖಲಿಸಬೇಕು. ದೂರು ದಾಖಲಾದ ತಕ್ಷಣ ನೋಡಲ್ ಅಧಿಕಾರಿ ಸಿಇಐಆರ್ಗೆ ಮಾಹಿತಿಯನ್ನು ನೀಡಿ ಮೊಬೈಲ್ ಆಕ್ಟಿವೇಷನ್ ಅನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗುತ್ತದೆ. ಇದರಿಂದಾಗಿ ಕದ್ದ ಮೊಬೈಲನ್ನು ವಂಚಕರು ಬಳಸಲು ಸಾಧ್ಯವಾಗುವುದಿಲ್ಲ.
ಒಂದು ವೇಳೆ ಕಳೆದುಹೋದ ಫೋನ್ ಪತ್ತೆಯಾದರೆ ಸಿಇಐಆರ್ನಲ್ಲಿ ಮಾಹಿತಿ ಅಪ್ಡೆಟ್ ಆಗುತ್ತದೆ. ಆಗ ನೋಡಲ್ ಅಧಿಕಾರಿಗಳು ಸಂಬಂಧಪಟ್ಟ ಪೋಲೀಸ್ ರಾಣೆಗೆ ಮಾಹಿತಿಯನ್ನು ನೀಡಿ ಮೊಬೈಲ್ ವಾರಸುದಾರರಿಗೆ ತಲುಪಿಸಲಾಗುತ್ತದೆ.
ಮೊಬೈಲ್ ಲಾಕ್ ಮಾಡುವುದು ಹೇಗೆ:
www.ceir.gov.in ವೆಬ್ಸೈಟ್ಗೆ ಹೋಗಿ ದೂರು ಕೊಟ್ಟು ಮೊಬೈಲ್ ಬ್ಲಾಕ್ ಮಾಡಿಸಬಹುದು. ಕಳವಾದ ಮೊಬೈಲ್ ನಲ್ಲಿದ್ದ ಸಿಮ್ಕಾರ್ಡ್ ಅನ್ನು ಹೊಸದಾಗಿ ಪಡೆಯಬೇಕು. ಕಳವಾದ ಮೊಬೈಲ್ನ ಮಾಡೆಲ್ ಐಎಂಇಐ ನಂಬರ್ ಸಿಮ್ ನಂಬರ್ ಅನ್ನು ನೋಂದಣಿ ಮಾಡಬೇಕು. ನಂತರ ಮೊಬೈಲ್ಗೆ ಬರುವ ಒಟಿಪಿಯನ್ನು ನಮೂದಿಸಿದರೆ ಮೊಬೈಲ್ ಬ್ಲಾಕ್ ಆಗುತ್ತದೆ.
ಆನ್ಲಾಕ್ ಮಾಡುವುದು ಹೇಗೆ:
ಒಂದು ವೇಳೆ ಕಲುವಾದ ಮೊಬೈಲ್ ಪತ್ತೆಯಾಗಿ ದೊರೆತರೆ ಮೊದಲು ಲಾಕ್ ಓಪನ್ ಮಾಡುವಂತೆ ಮನವಿ ನೀಡಬೇಕು. ನೋಡಲ್ ಅಧಿಕಾರಿ ಸಿಇಐಆರ್ ಪೋರ್ಟ್ನಲ್ಲಿ ಮನವಿ ಸಲ್ಲಸಿ ಬ್ಲಾಕ್ ತೆರವು ಮಾಡಬೇಕು.