ಮಹಿಳೆಯರಿಗೆ ತಮ್ಮ ಪಿರಿಯಡ್ ಸಮಯ ಬಂತೆಂದರೆ ಸಾಕು ಮೂಡ್ ಆಫ್ ಅನ್ನುತರ ಇರುತ್ತಾರೆ. ಆ ಸಮಯದಲ್ಲಿ ಕೆಲವರಿಗೆ ತುಂಬ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವರಂತೂ ಬೆಡ್ ಇಂದ ಏಳಲು ಸಾಧ್ಯವಾಗದೆ ರೆಸ್ಟ್ ನಲ್ಲಿ ಇರುತ್ತಾರೆ. ಇನ್ನು ಕೆಲವರು ಕೆಲಸದ ಒತ್ತಡದಿಂದಾಗಿ ಕೆಲಸ ಮಾಡಲೇಬೇಕಾದ ಅನಿವಾರ್ಯದಿಂದಾಗಿ ಮಾತ್ರೆಗಳನ್ನು ತಿಂದು ಆ ಸಮಯವನ್ನು ಉಪಯೋಗಿಸಿಕೊಳ್ಳುತ್ತಾರೆ. ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಂತೂ ಆ ಸಮಯಕ್ಕೆ ರಜೆ ತೆಗೆದುಕೊಳ್ಳುತ್ತಾರೆ. ಒಟ್ಟಿನಲ್ಲಿ ಈ ಸಮಸ್ಯೆ ಯಾರಿಗೂ ಬಿಟ್ಟಿಲ್ಲ. ಅಂತಹ ಸಮಯಕ್ಕೆ ನಾವು ಉತ್ತಮ ಆಹಾರ ಪದ್ಧತಿಗಳನ್ನು ಅನುಸರಿಸಿಕೊಂಡು ಹೋದರೆ ಆ ಸಮಯಕ್ಕೆ ಆಗುವಂಥ ಸ್ವಲ್ಪ ನೋವನ್ನು ತಡೆಯಬಹುದು. ಉತ್ತಮ ಆಹಾರ ಪದಾರ್ಥಗಳನ್ನು ಕ್ರಮೇಣ ಸೇವಿಸುವುದರಿಂದ ಈ ಸಮಸ್ಯೆಯಿಂದ ಮುಂದೊಂದು ದಿನ ಇದರಿಂದ ಹೊರಗೆ ಬರಬಹುದು ಹಾಗಾದರೆ ಅಂತಹ ದಿನಗಳಲ್ಲಿ ಯಾವ ರೀತಿ ಆಹಾರವನ್ನು ಉಪಯೋಗಿಸಬೇಕು ಎಂದು ತಿಳಿಯುವುದಾದರೆ
1. ನೀರು ಬರಿತಾ ಆಹಾರಗಳು: ದೇಹದಲ್ಲಿ ನೀರಿನ ಭಾವದಿಂದ ಮುಟ್ಟಿನ ಸಮಯಕ್ಕೆ ತಲೆನೋವು ಬರಬಹುದು. ಅದಕ್ಕಾಗಿ ಹೆಚ್ಚು ನೀರು ನೀಡುವ ಸೌತೆಕಾಯಿ, ಕಲ್ಲಂಗಡಿ, ಪಪ್ಪಾಯ, ಎಳೆನೀರು, ರಾಗಿ ಜ್ಯೂಸ್ ಹೀಗೆ ಹೆಚ್ಚು ನೀರೀರುವ ಮತ್ತು ದೇಹ ತಂಪಾಗಿಸುವ ಆಹಾರವನ್ನು ಸೇವಿಸಬೇಕು.
2. ಹಸಿರು ಸೊಪ್ಪುಗಳು ಮತ್ತು ತರಕಾರಿಗಳು: ಪಾಲಕ್, ಕೇರ್, ಹೂಕೋಸು, ಎಲೆಕೋಸು, ಬೀಟ್ರೂಟ್ ಮುಂತಾದ ತರಕಾರಿಗಳ ಸೇವನೆಯಿಂದ ದೇಹಕ್ಕೆ ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಗಳು ಸಿಗುವುದರಿಂದ ಪಿರಿಯಡ್ ಸಮಯದಲ್ಲಿ ಉಂಟಾಗುವ ಬೆನ್ನು, ಕಾಲು, ಹೊಟ್ಟೆ ನೋವುಗಳನ್ನು ಸ್ವಲ್ಪ ಕಡಿಮೆಯಾಗಿಸಿಕೊಳ್ಳಬಹುದು.
3. ಹಾಲು ಮೊಸರು: ಈ ಸಮಯದಲ್ಲಿ ಅತಿಯಾಗಿ ಹಾಲು ಮತ್ತು ಮೊಸರನ್ನು ಉಪಯೋಗಿಸುವುದು ಸೂಕ್ತ. ಮೊಸರಿನಲ್ಲಿ ಪ್ರೊಬ್ಯಾಟಿಕ್ ಹೇರಳವಾಗಿರುವುದರಿಂದ ನಮ್ಮ ದೇಹವನ್ನು ಪೋಷಿಸುತ್ತದೆ. ಮತ್ತು ಇದನ್ನು ಸೇವಿಸುವುದರಿಂದ ಋತುಚಕ್ರದ ಸಮಯದಲ್ಲಿ ಸೋಂಕುಗಳಿಂದ ನಿಮ್ಮ ಯೋನಿಯನ್ನು ರಕ್ಷಿಸುತ್ತದೆ. ಅಲ್ಲದೆ ದೇಹ ಇದರ ಸೇವನೆಯಿಂದ ಪೂರ್ತಿ ದಿನ ತಣ್ಣಗಿರುತ್ತದೆ.
4. ಮೊಟ್ಟೆಗಳು: ಮೊಟ್ಟೆಗಳ ಸೇವನೆ ನಮ್ಮ ದೇಹಕ್ಕೆ ಸದಾ ಅವಶ್ಯಕ. ಆದರೆ ಮುಟ್ಟಿನ ಸಮಯಕ್ಕೆ ಊಟ ತಿಂಡಿ ಸರಿಯಾಗಿ ತಿನ್ನಲು ಆಗದಿದ್ದರೆ ಬೇಯಿಸಿದ ಮೊಟ್ಟೆಯನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಬಂದಂತಾಗುತ್ತದೆ.
5. ಡ್ರೈ ಫ್ರೂಟ್ಸ್ ಗಳು: ಪೀರಿಯಡ್ಸ್ ಸಮಯಕ್ಕೆ ಉತ್ತಮವಾದ ಎಲ್ಲಾ ಬಗೆಯ ಡ್ರೈ ಫ್ರೂಟ್ಸ್ ಗಳು ಸೇವನೆ ಒಳ್ಳೆಯದು. ಇದರಿಂದ ಪ್ರೋಟೀನ್,ಒಮೆಗಾ 3, ಪೊಟ್ಯಾಶಿಯಂ, ಮ್ಯಾಗ್ನಿಷಿಯಂ, ಕಬ್ಬಿಣ ಮುಂತಾದ ಪೋಷಕಾಂಶಗಳು ದೊರಕುತ್ತದೆ. ವಿಶೇಷವಾಗಿ ಅಗಸೆ ಬೀಜಗಳು ಮುಟ್ಟಿನ ಸಾಮಾನ್ಯ ಲಕ್ಷಣವಾಗಿರುವ ಮಲಬದ್ಧತೆ ನಿವಾರಿಸಲು ಸಹಾಯ ಮಾಡುತ್ತದೆ ಹೀಗೆ ಪೀರಿಯಡ್ ಸಮಯದಲ್ಲಿ ಉತ್ತಮ ಪೋಷಕಾಂಶವಿರುವ ಆಹಾರವನ್ನು ಸೇವನೆ ಮಾಡುವುದು ತುಂಬಾ ಉತ್ತಮ.