ಜೂನ್ 22ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಆತಿಥ್ಯ ನೀಡಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಶ್ವೇತಭವನ, ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿ ಮೂಲಕ ಅಮೆರಿಕ ಮತ್ತು ಭಾರತದ ನಡುವಿನ ಆಳವಾದ ಮತ್ತು ನಿಕಟ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತಿಳಿಸಿದೆ.
ಈ ವೇಳೆ ಮೋದಿ ಹಾಗೂ ಬಿಡೆನ್ ನಡುವೆ ಮುಕ್ತ, ಸಮೃದ್ಧ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಉಭಯ ದೇಶಗಳ ಬದ್ಧತೆ ಪುನರುಚ್ಚರಿಸಲಿದೆ ಎಂದು ತಿಳಿಸಿದೆ. ಇದರಿಂದ ರಕ್ಷಣೆ, ಶುದ್ಧ ಇಂಧನ ಮತ್ತು ಬಾಹ್ಯಾಕಾಶ ಸೇರಿದಂತೆ ಇತರ ಕಾರ್ಯಯಂತ್ರದ ತಂತ್ರಜ್ಞಾನದ ಪಾಲುದಾರಿಕೆಯನ್ನು ಹೆಚ್ಚಿಸಲು ಈ ಹಂಚಿಕೆಯ ಸಂಕಲ್ಪ ಬಲಪಡಿಸುತ್ತದೆ.
ಶೈಕ್ಷಣಿಕ ವಿಷಯ, ಹವಾಮಾನ ಬದಲಾವಣೆಯಿಂದ ಉದ್ಯೋಗಿಗಳ ಅಭಿವೃದ್ಧಿ ಮತ್ತು ಆರೋಗ್ಯ ಭದ್ರತೆಯವರೆಗಿನ ಸವಾಲುಗಳನ್ನು ಉಭಯ ದೇಶಗಳು ಒಟ್ಟಾಗಿ ಶ್ರಮಿಸಲಿದೆ ಎಂದು ತಿಳಿಸಿದೆ.