ಮಕ್ಕಳಿಗೆ ಬೇಸಿಗೆ ರಜೆ ಸಿಕ್ಕೊಡನೆ ಫ್ಯಾಮಿಲಿ ಜೊತೆ ಪ್ರವಾಸ ಹೋಗಬೇಕು ಅನ್ನೋದು ಎಲ್ಲರ ಯೋಜನೆ ಆದರೆ ಬೇಸಿಗೆಯ ಬಿಸಿಲಿಗೆ ಹೆದರಿ ಕೆಲವರು ತಮ್ಮ ಯೋಚನೆಯಿಂದ ಹಿಂದೆ ಸರಿಯುತ್ತಾರೆ. ಆದರೆ ಬೇಸಿಗೆಯಲ್ಲಿ ಪ್ರವಾಸ ಮಾಡಲು ಕೆಲವೊಂದು ಜಾಗಗಳು ಹೇಳಿ ಮಾಡಿಸಿದಂತಿರುತ್ತವೆ. ಒಂದು ಅಥವಾ ಎರಡು ದಿನ ಟ್ರಿಪ್ ಹೋಗಬಯಸುವವರಿಗೆ ಇಲ್ಲಿದೆ ನೋಡಿ ಬೇಸ್ಟ್ ಜಾಗಗಳು.
ಕಬಿನಿ :
ಕಬಿನಿ ವನ್ಯಜೀವಿ ಧಾಮವು ಪ್ರಕೃತಿ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ ಒಂದು ಕಾಲದಲ್ಲಿ ಬ್ರಿಟಿಷರ ಬೇಟೆಯಾಡುವ ಜಾಗವಾಗಿದ್ದ ಈ ಪ್ರದೇಶ ಇಂದು ಪ್ರಸಿದ್ದ ಪ್ರವಾಸಿತಾಣವಾಗಿದೆ. ಹಚ್ಚ ಹಸಿರು ಮತ್ತು ಜಲಪಾತಗಳಿಂದ ಕೂಡಿರುವ ಕಬಿನಿ ವೈವಿಧ್ಯಮಯವಾದ ಪ್ರಾಣಿಸಂಕುಲವನ್ನು ಹೊಂದಿದೆ. ಇಲ್ಲಿ ಅಪರೂಪದ ಪ್ರಾಣಿಗಳು ಕಾಣ ಸಿಗುತ್ತದೆ. ಮಕ್ಕಳೊಂದಿಗೆ ಪ್ರವಾಸ ಬರಲು ಇದು ಉತ್ತಮ ಸ್ಥಳ.
ನೇತ್ರಾಣಿ ದ್ವೀಪ:
ಮುರುಡೇಶ್ವರದಲ್ಲಿರುವ ನೇತ್ರಾಣಿ ದ್ವೀಪವನ್ನು ಪಾರಿವಾಳ ದ್ವೀಪ ಎಂದೂ ಕರೆಯಲಾಗುತ್ತದೆ. ಮೇಲಿನಿಂದ ನೋಡಿದರೆ ಹೃದಯದ ಆಕಾರದಂತೆ ಕಾಣುವ ಈ ದ್ವೀಪವನ್ನು ಸ್ಕೂಬಾ ಡೈವಿಂಗ್ಗೆ ಅತ್ಯುತ್ತಮ ತಾಣವೆಂದು ಪರಿಗಣಿಸಲಾಗಿದೆ. ಸ್ಕೂಬ್ ಡೈವಿಂಗ್ ಮಾಡಲು ಇಚ್ಚಿಸುವವರು ಬೇಸಿಗೆಯಲ್ಲಿ ಈ ತಾಣಕ್ಕೆ ಬರುವುದು ಉತ್ತಮ.
ನಾಗರಹೊಳೆ ಉದ್ಯಾನವನ:
ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ದೇಶದ ಅತ್ಯಂತ ಜನಪ್ರಿಯ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ. ಉದ್ಯಾನವನದ ಉದ್ದಕ್ಕೂ ಜೀಪ್ ಸಫಾರಿ, ಟ್ರೆಕ್ಕಿಂಗ್, ದೋಣಿ ವಿಹಾರಗಳಂತಹ ಮಾಡಬಹುದು. ಇಲ್ಲಿ ವೈವಿಧ್ಯಮಯವಾದ ಪ್ರಾಣಿಗಳನ್ನು ನೋಡಬಹುದು.
ಕೊಡಗು:
ಕೊಡಗು ಎಲ್ಲಾ ಪ್ರಕೃತಿ ಪ್ರಿಯರಿಗೆ ಇಷ್ಟವಾಗುವ ಸ್ಥಳವಾಗಿದೆ. ವರ್ಷ ಪೂರ್ತಿ ಆಹ್ಲಾದಕರವಾದ ಹವಾಮಾನವನ್ನು ಹೊಂದಿರುವ ಕೊಡಗು ಬೇಸಿಗೆಯಲ್ಲಿ ಹೋಗಲು ಉತ್ತಮ ಸ್ಥಳ. ಎತ್ತ ನೋಡಿದರು ಹಚ್ಚ ಹಸಿರಿನಿಂದ ಕೂಡಿರುವ ಇಲ್ಲಿ ತಲಕಾವೇರಿ, ಮಂದಲ್ಪಟ್ಟಿ , ಸ್ಪೈಸ್ ಗಾರ್ಡನ್, ಗೋಲ್ಡನ್ ಟೆಂಪಲ್ ಹೀಗೆ ಹಲವಾರು ಪ್ರವಾಸಿತಾಣಗಳಿವೆ.
ಕುದುರೆಮುಖ:
ಕುದುರೆಮುಖ ಬೇಸಿಗೆಯ ಪ್ರವಾಸಕ್ಕೆ ಉತ್ತಮವಾದ ಸ್ಥಳವಾಗಿದೆ. ಟ್ರೆಕ್ಕಿಂಗ್ ಮಾಡಲು ಅಥವಾ ಬೇಸಿಗೆಯಲ್ಲಿ ವಿಶ್ರಾಂತಿ ಪಡೆಯಲು ಬಯಸುವವರಿಗೆ ಕುದುರೆಮುಖ ಸ್ವರ್ಗ ಎಂದೇ ಹೇಳಬಹುದು. ಇಲ್ಲಿ ವೈವಿದ್ಯಮಯ ಪ್ರಾಣಿ ಹಾಗು ಪಕ್ಷಿಗಳನ್ನು ನೋಡಬಹುದು.
ದಾಂಡೇಲಿ:
ದಾಂಡೇಲಿಯು ಜಲ ಕ್ರೀಡೆಗಳನ್ನು ಬಯಸುವವರಿಗೆ ಹಾಟ್ಸ್ಪಾಟ್ ಆಗಿದೆ. ದಾಂಡೇಲಿ ಸುಪ ಡ್ಯಾಮ್ ಜಲಾಶಯದ ಸಮೀಪದಲ್ಲಿದ್ದು ಇಲ್ಲಿ ಬೋಟ್ ಮೂಲಕ ಸಾಗುವ ಕ್ರೀಡೆಗಳಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಾಂಡೇಲಿ ಜನಪ್ರಿಯತೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಇಲ್ಲಿಗೆ ಪ್ರವೇಶ ಮತ್ತು ಸಂಪರ್ಕದ ಸುಲಭವಾಗಿದೆ. ಪುಣೆ, ಮೈಸೂರು, ಕೊಡಗು, ಮಡಿಕೇರಿ ಮತ್ತು ಗೋವಾದಿಂದ ದಾಂಡೇಲಿಯು ಉತ್ತಮ ಸಂಪರ್ಕವನ್ನು ಹೊಂದಿದೆ.