ನಾಯಿ ಎಂದರೆ ಕೆಲವರಿಗೆ ಕೇವಲ ಸಾಕುಪ್ರಾಣಿಯಾದರೆ ಇನ್ನು ಕೆಲವರಿಗೆ ಮನೆಯ ಸದಸ್ಯನಂತೆ ಅತೀಯಾದ ಪ್ರೀತಿ. ಒಂದು ವೇಳೆ ಅದೇ ನಾಯಿ ಕಳೆದುಹೋದರೆ ಅವರಿಗೆ ಆಗುವ ನೋವು ಹೇಳತೀರದು. ತುಂಬಾ ಪ್ರೀತಿಸುತ್ತಿದ್ದ ನಾಯಿಯನ್ನು ಕಳೆದುಕೊಂಡ ಮುಂಬೈ ರಿಡ್ಲಾನ್ ಎಂಬ ಎಂಜಿನಿಯರ್ ಒಬ್ಬರು ಕಾಣೆಯಾದ ನಾಯಿಗಳನ್ನು ಪತ್ತೆ ಹಚ್ಚಲು ಕ್ಯೂಆರ್ ಕೋಡ್ನ್ನು ರಚಿಸಿದ್ದಾರೆ. ರಿಡ್ಲಾನ್ ಹೊಸ ಐಡಿಯಾಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
ರಿಡ್ಲಾನ್ ತನ್ನ ಪ್ರೀತಿಯ ನಾಯಿ ‘ಕಲೂ’ ನಾಪತ್ತೆಯಾದ ನಂತರ ಈ ಕ್ಯೂಆರ್ ಕೋಡ್ ಮಾಡುವ ಹೊಸ ಐಡಿಯಾವನ್ನು ಮಾಡಿದರು. 2020 ರಲ್ಲಿ ಪಟಾಕಿ ಸಿಡಿಯುವ ಸದ್ದಿಗೆ ಅಲ್ಲಿದ್ದ ನಾಯಿಗಳೆಲ್ಲ ಹೆದರಿ ಓಡಿ ಹೋದವು. ಇದರಲ್ಲಿ ರಿಡ್ಲಾನ್ ನಾಯಿಯು ಕೂಡಾ ಇತ್ತು ನಂತರ ಕಾಣೆಯಾದ ಅವರ ನಾಯಿಯನ್ನು ಹುಡುಕಲು ಪ್ರಾರಂಭಿಸಿದರು . ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಸಮುದಾಯಗಳನ್ನು ಸಂಪರ್ಕಿಸಿದರೂ ಅವರ ನಾಯಿ ಪತ್ತೆಯಾಗಿರಲಿಲ್ಲ. ತಮ್ಮ ನಾಯಿಯನ್ನು ಕಳೆದುಕೊಂಡು ಮನನೊಂದಿದ್ದ ರಿಡ್ಲಾನ್ ಬೇರೆ ಯಾರು ಈ ರೀತಿ ನಾಯಿಯು ಕಳೆದುಕೊಂಡ ದುಃಖಿಸ ಬಾರದು ಎಂದು ಕ್ಯೂಆರ್ ಕೋಡ್ ಅನ್ನು ರಚನೆ ಮಾಡಿದರು.
ಕ್ಯೂ ಆರ್ ಕೋಡ್ ವಿಶೇಷತೆ:
ಮುಂಬೈ ಮೂಲದ ಎಂಜಿನಿಯರ್ ರಿಡ್ಲಾನ್ ಕಳೆದುಹೋದ ನಾಯಿಗಳನ್ನು ಪತ್ತೆಹಚ್ಚಲು ಕ್ಯೂಆರ್ ಕೋಡ್ ಅನ್ನು ಕಂಡುಹಿಡಿದರು. QR ಕೋಡ್ ಅನ್ನು ನಾಯಿಯ ಕಾಲರ್ಗೆ ಕಟ್ಟಿರಬೇಕು. ಅದನ್ನು ಸ್ಕ್ಯಾನ್ ಮಾಡಿದ ನಂತರ ನಾಯಿಯ ಮಾಹಿತಿ ಬರುತ್ತದೆ.
ಈ ಕ್ಯೂ ಆರ್ ಕೋಡ್ನ್ನು, ಒಮ್ಮೆ ಸ್ಕ್ಯಾನ್ ಮಾಡಿದರೆ, ನಾಯಿಯ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸುತ್ತವೆ. ಅದರ ಹೆಸರು ಮತ್ತು ವೈದ್ಯಕೀಯ ಇತಿಹಾಸದಿಂದ ಹಿಡಿದು ಅದರ ಆರೈಕೆದಾರರ ಸಂಪರ್ಕ ಮಾಹಿತಿಯವರೆಗೆ ಎಲ್ಲವನ್ನೂ ಪ್ರದರ್ಶಿಸಲಾಗುತ್ತದೆ.
ಟ್ಯಾಗ್ನ ಬೆಲೆ 100 ರೂ. ಮತ್ತು ಸಾಗಣೆಗೆ 50 ರೂ. ಆಗಿದೆ. ನಾಯಿಯ ಹೆಸರು, ವೈದ್ಯಕೀಯ ಇತಿಹಾಸ ಮತ್ತು ಅವರ ರಕ್ಷಕರ ವಿವರಗಳನ್ನು ಈ ಕ್ಯೂಆರ್ ಕೋಡ್ ಒಳಗೊಂಡಿರುತ್ತದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಟ್ಯಾಗ್ಗಳನ್ನು ನಾಯಿಗಳು ಮಾತ್ರವಲ್ಲದೇ ಹಸುಗಳು, ಆಡುಗಳು ಮತ್ತು ಇತರ ಪ್ರಾಣಿಗಳ ಮೇಲೆ ಬಳಸಬಹುದಾಗಿದೆ.