ಇತ್ತೀಚಿನ ಮಕ್ಕಳಿಗೆ ಊಟ ತಿನ್ನಿಸಲು ಪೋಷಕರು ಹೆಣಗಾಡಬೇಕು. ಅದಕ್ಕೆ ಈಸಿ ವಿಧಾನ ಮೊಬೈಲ್ ನಲ್ಲಿ ರೈಮ್ಸ್ ಹಾಕಿಬಿಡೋದು ಅಂದುಕೊಂಡಿದ್ದಾರೆ. ಆದರೆ ನೆನಪಿಡಿ ಇದರಿಂದ ಮಕ್ಕಳಲ್ಲಿ ಏನೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ?
• ಊಟದ ಕಡೆ ಗಮನವೆಲ್ಲಿರುತ್ತೆ?
ಮಕ್ಕಳ ಊಟ ಮಾಡುವುದನ್ನು ಬಿಟ್ಟು ಮೊಬೈಲ್ ನೋಡುತ್ತಿದ್ದರೆ ಅವರಿಗೆ ಊಟದ ರುಚಿ ಹಾಗೂ ಅದರ ಕಡೆ ಗಮನವೆಲ್ಲಿರುತ್ತೆ.
• ಮನೆಯವರ ಜೊತೆ ಮಾತಾಡೋದು ಯಾವಾಗ?
ಅಪ್ಪ, ಅಮ್ಮ, ಅಣ್ಣ ತಮ್ಮ, ಅಕ್ಕ, ತಂಗಿಯರ ಜೊತೆ ಒಟ್ಟಾಗಿ ಕೂತು ಊಟ ಮಾಡುವ ಖುಷಿಯನ್ನು ಮಕ್ಕಳಿಗೆ ಬಾಲ್ಯದಿಂದಲೇ ತಿಳಿಸಿಕೊಡಬೇಕು. ಇಡೀ ದಿನದ ಎಲ್ಲಾ ಆಟ, ಪಾಠಗಳ ಚರ್ಚೆ ಊಟ ಮಾಡುವಾಗ ಆಗಲಿ.
• ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ
ಹೆಚ್ಚು ಮೊಬೈಲ್ ನೋಡುವ ಮಕ್ಕಳು ಮಂಕಾಗಿ ಇರೋದು, ಯಾರೊಂದಿಗೂ ಬೆರೆಯದೆ ಒಬ್ಬಂಟಿಯಾಗಿ ಇರೋದನ್ನ ರೂಢಿಸಿಕೊಂಡು ಬಿಡ್ತಾರೆ ಎಚ್ಚರ!
• ಮಿತವಿಲ್ಲದ ಆಹಾರ ಸೇವನೆ
ಮೊಬೈಲ್ ನೋಡಿಕೊಂಡು ಆಹಾರ ಸೇವಿಸುವ ಮಕ್ಕಳಿಗೆ ತಾವೆಷ್ಟು ಊಟ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ಇದರಿಂದ ದೇಹದ ತೂಕ ಕೂಡ ಹೆಚ್ಚಾಗುತ್ತದೆ.
• ಮೆಟಬಾಲಿಸಂ ಕೊರತೆ
ಸೇವಿಸಿದ ಆಹಾರ ಜೀರ್ಣವಾಗದೆ ಕುಳಿತಲ್ಲೇ ಇರುವುದು ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ.