ಇಂದಿನ ದಿನದಲ್ಲಿ ಹೆಚ್ಚಿನ ಯುವಕರು ಬುಲೆಟ್ ಬೈಕ್ ಖರೀದಿಸಲು ಆಸೆಪಡುತ್ತಾರೆ. ಆದರೆ ಅದನ್ನು ಹೇಗೆ ಮೈಂಟೇನ್ ಮಾಡ್ಬೇಕು ಎಂಬುದು ಗೊತ್ತಿರುವುದಿಲ್ಲ. ಹಾಗಿದ್ರೆ ಬುಲೆಟ್ ಬೈಕ್ ಹೀಗೆ ಬಳಸಿದರೆ ಯಾವತ್ತು ರಿಪೇರಿಗೆ ಕೊಡಬೇಕಂತಾನೇ ಇರುವುದಿಲ್ಲ.
ಇಂದಿನ ಯುವಕರಿಗೆ ಬೈಕ್ಗಳೆಂದರೆ ಸಾಕು ತುಂಬಾ ಕ್ರೇಜ್. ಹಿಂದಿನ ಕಾಲದಲ್ಲಿ ಮನೆಗೊಂದು ಸೈಕಲ್ ಇರುವ ಹಾಗೆ ಈಗಿನ ಕಾಲದಲ್ಲಿ ಒಂದು ಮನೆಗೆ ಎರಡು ಬೈಕ್ಗಳು ಸಿಗುತ್ತಿದೆ. ಹಾಗಾಗಿಯೇ ಇಂದಿನ ದಿನಗಳಲ್ಲಿ ಬೈಕ್ ಬಳಸುವ ಬಹುತೇಕ ಯುವಕರು ಬುಲೆಟ್ ಬೈಕ್ ಓಡಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಯುವಕರಿಗೆ ಬೇರೆ ಬೈಕಿಗಿಂತ ಬುಲೆಟ್ ಬೈಕ್ ನ ಮೇಲೆ ಆಸಕ್ತಿ ಹೆಚ್ಚಿರುತ್ತದೆ.
ಇಂದಿನ ಯುವಜನತೆಯ ಕ್ರೇಜ್ಗೆ ತಕ್ಕಂತೆ ಸಾಕಷ್ಟು ಬುಲೆಟ್ ವಾಹನಗಳು ಸಹ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುತ್ತವೆ. ಯುವಕರು ಲಕ್ಷಗಟ್ಟಲೆ ಖರ್ಚು ಮಾಡಿ ಬುಲೆಟ್ ಬೈಕ್ ಕೊಂಡಿರುವ ಹಿನ್ನಲೆಯಲ್ಲಿ ಈ ಬುಲೆಟ್ ಬೈಕ್ಗಳ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೆ ಹೆಚ್ಚು ರಿಪೇರಿ ಆಗದೆ ಬೈಕ್ ಓಡಿಸಬಹುದಾಗಿದೆ.
ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಬಳಸುವವರು ಯಾವುದೇ ಸಂದರ್ಭದಲ್ಲೂ ಬೈಕ್ ನಲ್ಲಿ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಬಾರದು. ಅಲ್ಲದೆ, ಬೈಕ್ ನಿಲ್ಲಿಸಿದ ತಕ್ಷಣ ಲಾಕ್ ಆಫ್ ಮಾಡಬೇಕು. ಬುಲೆಟ್ ಬೈಕ್ ಗೇರ್ ನಲ್ಲಿ ಚಲಿಸುವಾಗ ನಿಲ್ಲುವ ಸಮಸ್ಯೆ ಹೆಚ್ಚು. ಇದಕ್ಕಾಗಿ, ರಿಲೇ ಫ್ಯೂಸ್ಗಳನ್ನು ಪರಿಶೀಲಿಸುತ್ತಲೆ ಇರಬೇಕು. ಚೈನ್ ಲೂಬ್ರಿಕೇಶನ್ ಅನ್ನು ಪ್ರತಿ 7 ದಿನಗಳಿಗೊಮ್ಮೆ ನೋಡಿಕೊಳ್ಳುತ್ತಿರಬೇಕು. ಹಾಗೆಯೇ ಬುಲೆಟ್ ಬೈಕ್ಗಳಲ್ಲಿ ಮುಂಭಾಗದ ಟೈರ್ಗಳಿಗೆ ಗಾಳಿ 28 ರಿಂದ 30 ಮತ್ತು ಹಿಂಭಾಗದ ಟೈರ್ಗಳಿಗೆ 35 ರಿಂದ 40 ರ ನಡುವೆ ಇರಬೇಕು. ಬುಲೆಟ್ ಜೀರೋ ವೈಬ್ರೇಷನ್ ಬೈಕ್ ಎಂದು ವಿಶೇಷವಾಗಿ ಗುರುತಿಸಿಕೊಂಡಿದೆ. ವೇಗದ ಪ್ರಯಾಣಕ್ಕೆ ಬುಲೆಟ್ ಬೈಕ್ ಸೂಕ್ತ, ಆದರೆ ಅತಿಯಾದ ವೇಗದಲ್ಲಿ ಯಾವುದೆ ಕಾರಣಕ್ಕೂ ಬೈಕ್ ಓಡಿಸಬಾರದು.
ಬುಲೆಟ್ ಬೈಕ್ ಸರ್ವಿಸ್ ಮಾಡಿದರೆ 35 ಕಿ.ಮೀ ನಿಂದ 40 ಕಿ.ಮೀ ಮೈಲೇಜ್ ಸಿಗಲಿದೆ ಎಂದು ಹೇಳಲಾಗುತ್ತದೆ. ಬುಲೆಟ್ ಬೈಕ್ಗಳಿಗೆ ಕಂಪನಿಯ ಸೈಲೆನ್ಸರ್ಗಳನ್ನು ಮಾತ್ರ ಬಳಸಬೇಕು. ಇನ್ನು ಥರ್ಡ್ ಪಾರ್ಟಿ ಸೈಲೆನ್ಸರ್ಗಳನ್ನು ಬಳಸುವುದರಿಂದ ಬುಲೆಟ್ ಬೈಕ್ಗೆ ಹಾನಿಯಾಗುವುದಲ್ಲದೆ ಹೆಚ್ಚು ಬಿಸಿಯಾಗುವ ಸಾಧ್ಯತೆಯೂ ಇರುತ್ತದೆ. ಹೀಗೆ ಬುಲೆಟ್ ಅನ್ನು ಬಳಸುವವರು ಈ ಎಲ್ಲಾ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಅದನ್ನು ಯಾವುದೇ ಕಾರಣಕ್ಕೂ ರಿಪೇರಿಗಿಡುವ ಅನಿವಾರ್ಯ ಅತಿಯಾಗಿ ಬರುವುದಿಲ್ಲ.