ಆಭರಣಗಳು ಒಬ್ಬರ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನು ಕೆಲವರಿಗೆ ಇದು ಸಂಪತ್ತು, ಅಧಿಕಾರ ಮತ್ತು ಸ್ಥಾನಮಾನವನ್ನು ಸಂಕೇತ.. ಕೆಲವರಿಗೆ, ಆಭರಣವು ಸ್ವಯಂ ಮತ್ತು ಸೃಜನಶೀಲ ಅಭಿವ್ಯಕ್ತಿಯ ಕಲೆಯ ಒಂದು ರೂಪವಾಗಿದೆ. ಇನ್ನು ಕೆಲವರು ತಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಭಾಗವಾಗಿ ಆಭರಣಗಳನ್ನು ಧರಿಸುತ್ತಾರೆ.
ಜಗತ್ತಲ್ಲಿ ಚಿನ್ನದ ನಂತರ ಪ್ರಮುಖ್ಯವಾದ ಸ್ಥಾನವನ್ನು ಬೆಳ್ಳಿ ಪಡೆದುಕೊಂಡಿದೆ. ಬಳೆಗಳು, ಉಂಗುರಗಳು, ಗೆಜ್ಜೆಗಳನ್ನು ಸಾಮಾನ್ಯವಾಗಿ ಬೆಳ್ಳಿಯಿಂದ ತಯಾರಿಸಲಾಗುತ್ತದೆ. ಬೆಳ್ಳಿಯು ಮಾಯ ಮಂತ್ರಗಳಿAದ ರಕ್ಷಣೆಯನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಹಿಂದೂಗಳು ಬೆಳ್ಳಿಯು ಚಂದ್ರನ ಪ್ರತೀಕ ಎಂದು ನಂಬುತ್ತಾರೆ.ಇದು ನಕಾರಾತ್ಮಕ ಭಾವನೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಇನ್ನು ಬೆಳ್ಳಿಯ ಒಡವೆಗಳ ಬೆಲೆ ಚಿನ್ನಕ್ಕೆ ಹೊಲಿಸಿದ್ದರೆ ಕೊಂಚ ಕೈಗೆ ಎಟಕುವಂಥದ್ದು.ನಿಮ್ಮಿಷ್ಟದ ಬೆಳ್ಳಿ ಒಡವೆಗೆ ಬಂಗಾರ ಲೇಪಿಸಿಕೊಂಡು ಮದುವೆ, ಸಮಾರಂಭಗಳಿಗೆ ಸುತ್ತಾಡಬಹುದು..
ಹಾಗಿದ್ರೆ ಇಲ್ಲಿದೆ ನೋಡಿ ಯಾವ ಒಡವೆಗೆ ಎಷ್ಟಿದೆ ಚಿನ್ನದ ಲೇಪನದ ರೇಟ್…
• ಸೊಂಟಪಟ್ಟಿ- ಚಿನ್ನದ ಲೇಪ ಬೆಳ್ಳಿಯ ಸೊಂಟಪಟ್ಟಿಗೆ ಆರಂಭಿಕ ದರ 3000 ರೂ.
• ಜುಮ್ಕ- ಚಿನ್ನದ ಲೇಪ ಮುತ್ತು ಮಣಿಗಳನ್ನು ಪೊಣಿಸಿದ ಜುಮ್ಕಗೆ ಆರಂಭಿಕ ಬೆಲೆ 900 ರೂ.
• ಬೆಳ್ಳಿ ಬ್ರೇಸ್ಲೆಟ್ – 2000 ರೂ.
• ರೇಡಿಯಂ ಲೇಪದ ಬ್ರೇಸ್ಲೆಟ್- 3000 ರೂ.
• ಮುತ್ತಿನ ಬುಗಡಿಗೆ- 2,200 ರೂ.
• ಪ್ಯಾಶನೇಬಲ್ ಉಂಗುರ- ಆರಂಭಿಕ ದರ 200 ರೂ.
• ಸ್ಟಡ್- 402 ರೂ.
ಇವೆಲ್ಲವು ಆನ್ ಲೈನ್ ಖರೀದಿಯ ದರಗಳು. ಸಾಕಷ್ಟು ಆನ್ ಲೈನ್ ವೆಬ್ ಸೈಟ್ ಇರುವುದರಿಂದ ದರವು ಕೊಂಚ ಭಿನ್ನವಾಗಿರುತ್ತದೆ. ನೇರ ಬೆಳ್ಳಿಯ ಅಂಗಡಿಗಳಲ್ಲಿ ಬೆಳ್ಳಿಯ ದರಗಳು ಅಲ್ ಲೈನ್ ದರಗಳಿಗೆ ಹೋಲಿಸಿದರೆ ಕೊಂಚ ದುಬಾರಿ ಅನಿಸಬಹುದು.
ಮಾಲ್ ಗಳಲ್ಲಿ ಅಲ್ಲಲ್ಲಿ ಸಣ್ಣದಾಗಿ ಬೂತ್ ಮಾದರಿಯಲ್ಲಿ ಬೆಳ್ಳಿಯ ಒಡವೆಯ ಶಾಫ್ ಗಳನ್ನು ಕಾಣಬಹದು. ಇಲ್ಲಿ ಕೇವಲ ಟ್ರೇಂಡಿ ಕಲೆಕ್ಷನ್ ಗಳು ಮಾತ್ರ ಲಭ್ಯವಿರುತ್ತದೆ. ಸಾಂಪ್ರದಾಯಿಕ ಒಡವೆಗಳು ಬೇಕಾದಲ್ಲಿ ಚಿನ್ನದ ಒಡವೆ ಅಂಗಡಿ ಅಥವಾ ಕೇವಲ ಬೆಳ್ಳಿಯ ಸಾಮಾಗ್ರಿಗಳನ್ನು ಮಾರುವ ಅಂಗಡಿಗಳಲ್ಲಿ ಪಡೆಯಬಹುದು.