ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್ ಸಿ) 2022ನೇ ಸಾಲಿನ ನಾಗರಿಕ ಸೇವಾ ಆಯೋಗದ ಫಲಿತಾಂಶ ಪ್ರಕಟಗೊಂಡಿದೆ.
ಸಿಎಸ್ ಸಿ ಫಲಿತಾಂಶವನ್ನು upsc.gov.in ಅಧಿಕೃತ ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದಾಗಿದೆ. ಈ ಬಾರಿ 933 ಅಭ್ಯರ್ಥಿಗಳು ಮೆರಿಟ್ ಪಟ್ಟಿಗೆ ಆಯ್ಕೆಯಾಗಿದ್ದಾರೆ. ಯುಪಿಎಸ್ ಸಿ ಸಿಎಸ್ ಇ ಪರೀಕ್ಷೆಯಲ್ಲಿ ಮೂವರು ಮಹಿಳಾ ಅಭ್ಯರ್ಥಿಗಳು ಟಾಪರ್ ಗಳಾಗಿದ್ದಾರೆ.
ಪ್ರಥಮ ಸ್ಥಾನದಲ್ಲಿ ಇಶಿತಾ ಕಿಶೋರ್ (AIR 1) ಎರಡನೇ ಸ್ಥಾನದಲ್ಲಿ ಗರಿಮಾ ಲೋಹಿಯಾ (AIR 2) ಮತ್ತು ಮೂರನೇ ಸ್ಥಾನದಲ್ಲಿ ಉಮಾ ಹರತಿ (AIR 3) ಸ್ಥಾನ ಪಡೆದಿದ್ದಾರೆ.
ಉಳಿದಂತೆ ಸ್ಮೃತಿ ಮಿಶ್ರಾ (AIR 4), ಮಯೂರ್ ಹಜಾರಿಕಾ (AIR 5), ಗಹನಾ ನವ್ಯಾ ಜೇಮ್ಸ್ (AIR 6), ವಸೀಮ್ ಅಹ್ಮದ್ ಭಟ್ (AIR 7), ಅನಿರುದ್ಧ್ ಯಾದವ್ (AIR 8), ಕನಿಕಾ ಗೋಯಲ್ (AIR 9), ರಾಹುಲ್ ಶ್ರೀವಾಸ್ತವ (AIR 10) ಮುಂದಿನ ಟಾಪ್ 10 ಸ್ಥಾನಗಳನ್ನು ಪಡೆದಿದ್ದಾರೆ.
ಯುಪಿಎಸ್ ಸಿ ಫಲಿತಾಂಶವನ್ನು ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡೋದು ಹೀಗೆ:
1. ಯುಪಿಎಸ್ ಸಿ ಯ ಅಧಿಕೃತ ವೆಬ್ ಸೈಟ್ upsc.gov.in ಗೆ ಭೇಟಿ ನೀಡಿ.
2. UPSC ನಾಗರಿಕ ಸೇವೆಗಳ ಫೈನಲ್ ಫಲಿತಾಂಶ 2022 ಲಿಂಕ್ ಅನ್ನು ಕ್ಲಿಕ್ ಮಾಡಿ
3. ನಿಮ್ಮ ಹೆಸರು ಮತ್ತು UPSC ರೋಲ್ ನಂಬರ್ ಹಾಕಿ ಕ್ಲಿಕ್ ಮಾಡಿ.
4. UPSC CSE ಅಂತಿಮ ಫಲಿತಾಂಶಗಳು 2023 ಅನ್ನು ಡೌನ್ಲೋಡ್ ಮಾಡಿ
5. ಅದೇ ಮುದ್ರಣವನ್ನು ಪ್ರಿಂಟ್ ತೆಗೆದುಕೊಳ್ಳಬಹುದು.
ಒಟ್ಟು 933 ಅಭ್ಯರ್ಥಿಗಳು UPSC CSE ಪರೀಕ್ಷೆಗಳು, ಸಂದರ್ಶನಗಳಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಇವುಗಳಲ್ಲಿ ಸಾಮಾನ್ಯ ವರ್ಗದಿಂದ 345 ವಿದ್ಯಾರ್ಥಿಗಳು, ಆರ್ಥಿಕವಾಗಿ ದುರ್ಬಲ ವಿಭಾಗ (EWS) ವರ್ಗದಿಂದ 99, OBC ವರ್ಗದಿಂದ 263, SC ವರ್ಗದಿಂದ 154 ಮತ್ತು ST ವರ್ಗದ 72 ವಿದ್ಯಾರ್ಥಿಗಳು ಸೇರಿದ್ದಾರೆ.
ಕ್ಯಾಂಪಸ್ನಲ್ಲಿ, UPSC ಪರೀಕ್ಷಾ ಕೊಠಡಿಯ ಸಮೀಪದಲ್ಲಿ ಫೆಸಿಲಿಟೇಶನ್ ಕೌಂಟರ್ ನಿರ್ವಹಿಸುತ್ತದೆ. ಸೋಮವಾರದಿಂದ ಶುಕ್ರವಾರ ಬೆಳಗ್ಗೆ 10:00 ರಿಂದ ಸಂಜೆ 5:00 ರವರೆಗೆ ಕಾರ್ಯನಿರ್ವಹಿಸುತ್ತದೆ.
ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳು ಅಥವಾ ನೇಮಕಾತಿಗಳ ಬಗ್ಗೆ ಯಾವುದೇ ಮಾಹಿತಿ ಅಥವಾ ಸ್ಪಷ್ಟೀಕರಣಗಳನ್ನು ವೈಯಕ್ತಿಕವಾಗಿ ಅಥವಾ 23385271, 23381125, ಅಥವಾ 23098543 ಗೆ ಕರೆ ಮಾಡುವ ಮೂಲಕ ಪಡೆಯಬಹುದು.