ಐಪಿಎಲ್-2023 ರ ಇಂದಿನ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 56 ರನ್ ಗಳ ಜಯಭೇರಿ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 2 ವಿಕೆಟ್ ಕಳೆದುಕೊಂಡು 227 ರನ್ ಗಳಿಸಿತ್ತು. ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ 142 ರನ್ ಜೊತೆಯಾಟ ಆಡಿದರು.
ವೃದ್ಧಿಮಾನ್ 43 ಬಾಲ್ ಗಳಲ್ಲಿ 10 ಬೌಂಡರಿ, 4 ಸಿಕ್ಸರ್ಗಳೊಂದಿಗೆ 81 ರನ್ ಗಳಿಸಿದರು. ಜೊತೆಯಾಟದಲ್ಲಿದ್ದ ಶುಭಮನ್ ಗಿಲ್ 51 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್ಗಳೊಂದಿಗೆ ಅಜೇಯ 94 ರನ್ ಗಳಿಸಿದರು.
ಟೈಟಾನ್ಸ್ ನೀಡಿದ 228 ರನ್ಗಳ ಗುರಿ ಬೆನ್ನಟ್ಟಿದ ಲಖನೌ ತಂಡ 20 ಓವರ್ಗಳಲ್ಲಿ 7 ವಿಕೆಟ್ಗೆ 171 ರನ್ ಮಾತ್ರ ಗಳಿಸಿತು. ಲಖನೌ ಪರ ಆರಂಭಿಕರಾದ ಕ್ವಿಂಟನ್ ಡಿ ಕಾಕ್ 41 ಎಸೆತಗಳಲ್ಲಿ 70 ರನ್ ಗಳಿಸಿದರು.