ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ದಿನ ಬಾಕಿ ಇದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಎರಡೇ ದಿನದಲ್ಲಿ ಮತದಾರರು ರಾಜ್ಯದ ಭವಿಷ್ಯವನ್ನು ನಿರ್ಧಾರಿಸಲಿದ್ದು, ಮತ ಪ್ರಚಾರಕ್ಕೆ ಇಂದೇ ಕಡೆದಿನವಾಗಿದೆ.
ಮತದಾರರನ್ನು ಸೆಳೆಯಲು ರಾಜ್ಯದಲ್ಲಿ ಅಭ್ಯರ್ಥಿಗಳು ಬೀರುಸಿನ ಪ್ರಚಾರ ಕೈಗೊಂಡಿದ್ದು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ರಾಷ್ಟ್ರಮಟ್ಟದ ಘಟಾನುಘಟಿ ನಾಯಕರುಗಳು ಕರ್ನಾಟಕದೆಲ್ಲೆಡೆ ಓಡಾಡಿ ಭರ್ಜರಿ ಮತ ಪ್ರಚಾರ ನಡೆಸಿದ್ದಾರೆ.
ನಿನ್ನೆಯವರೆಗೆ ನಾಯಕರುಗಳಿಂದ ನಡೆದ ಪ್ರಚಾರಕ್ಕೆ ಇಂದು ತೆರೆಬಿಳಲಿದ್ದು, ಇವತ್ತು ಕ್ಷೇತ್ರದ ಅಭ್ಯರ್ಥಿ ಹೊರತುಪಡಿಸಿ ಬೇರೆ ಯಾವುದೇ ನಾಯಕರಿಗೆ ಅವಕಾಶವಿಲ್ಲ. ಅಭ್ಯರ್ಥಿ ಸೇರಿ 6ಮಂದಿ ಮನೆ ಮನೆಗೆ ಪ್ರಚಾರ ಮಾಡಲು ಅವಕಾಶವಿದೆ.
ಕೊನೆಯ ಹಂತದ ಪ್ರಚಾರ ಇಂದು ಮಾಡಲು ಅವಕಾಶವಿದ್ದು, ಸಂಜೆ 5ಗಂಟೆ ನಂತರ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. 5 ಗಂಟೆಯ ನಂತರ ಯಾವುದೇ ಸಭೆ ಸಮಾರಂಭ ರೋಡ್ ಶೋ ಧ್ವನಿವರ್ಧಕಗಳನ್ನು ಬಳಸಿ ಮತ ಪ್ರಚಾರ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಅಭ್ಯರ್ಥಿಗಳ ಆಶ್ವಾಸನೆ ಗ್ಯಾರಂಟಿಗಳು ಮತದಾರರ ಮನವೊಲಿಸುವಲ್ಲಿ ಸಫಲವಾಗಿದೆಯೇ, ವಿಫಲವಾಗಿದಿಯೋ ಎಂದು ಕಾದುನೋಡಬೇಕಿದೆ.