ಅಗಡಿ ತೋಟವು ಪರಿಸರ ಸ್ನೇಹಿ ಮತ್ತು ಸಾವಯವ ಕೃಷಿ ಸ್ಥಳವಾಗಿದೆ ಗ್ರಾಮೀಣ ಜೀವನವನ್ನು ಅನುಭವಿಸಲು ಹೇಳಿಮಾಡಿಸಿದ ಸ್ಥಳವಾಗಿದೆ. ಇದು ಜೀವನದ ಜಂಜಾಟಗಳನ್ನು ಮರೆಯಲು ಸಹಾಯ ಮಾಡುವ ಸ್ಥಳವಾಗಿದೆ ಮತ್ತು ಪ್ರಕೃತಿಯ ಮಡಿಲಲ್ಲಿ ಮಗುವಾಗಿ ಸಮಯ ಕಳೆದ ಅನುಭವವನ್ನು ನೀಡುತ್ತದೆ. ಅಗಡಿ ತೋಟವು ಗೋಡಂಬಿ ತೋಟವಾಗಿದೆ ಮತ್ತು ಎಲ್ಲಾ ನೈಸರ್ಗಿಕ ವಸ್ತುಗಳಿಂದ ಸುತ್ತುವರೆದಿರುವ ಅತ್ಯಂತ ದೊಡ್ಡ ಉದ್ಯಾನವನದಂತೆ ಕಾಣುತ್ತದೆ. ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಕುನ್ನೂರು ಸಮೀಪದ ಈ ಅದ್ಭುತ ಸ್ಥಳ ಕೃಷಿ ಸಂಪತ್ತಿನ ಗಣಿ ಮತ್ತು ಮನರಂಜನೆಯ ತಾಣವಾಗಿದೆ.
ಅಗಡಿ ತೋಟವನ್ನು ಪ್ರವೇಶಿಸಿದರೆ ಅಲ್ಲಿ ನಮಗೆ ಹಲವಾರು ರೀತಿಯ ತಾಜಾ ಪಾನೀಯಗಳು ಮತ್ತು ಹಣ್ಣುಗಳೊಂದಿಗೆ ನೃತ್ಯದ ಮೂಲಕ ಸ್ವಾಗತಿಸಲಾಗುತ್ತಾರೆ, ಕುದುರೆ ಮತ್ತು ಒಂಟೆ ಸವಾರಿ, ಎತ್ತಿನ ಬಂಡಿ, ಮ್ಯಾಜಿಕ್ ಶೋ, ಗುಜರಾತಿ ನೃತ್ಯ, ಸಾಂಸ್ಕೃತಿಕ ಉಡುಗೆ, ಮತ್ತು ಹಲವಾರು ಚಟುವಟಿಕೆಗಳೊಂದಿಗೆ ನಮಗೆ ಬರಮಾಡಿಕೊಳ್ಳುತ್ತಾರೆ.
ಮಧ್ಯಾಹ್ನದ ಊಟಕ್ಕೆ ಅಗಡಿ ತೋಟದಲ್ಲಿ ಉತ್ತರ ಕರ್ನಾಟಕದ ವಿಷೇಶ ಊಟ ಖಡಕ್ ಜವಾರಿ ರೊಟ್ಟಿ ಮತ್ತು ಚಪಾತಿ ಜೊತೆಗೆ ಮೊಳಕೆಕಾಳು, ಬದನೆಕಾಯಿ ಎನ್ನೆಗಾಯಿ ಮತ್ತು ಎರಡು ರೀತಿಯ ಚಟ್ನಿಗಳನ್ನು ಬಡಿಸಿ ಮತ್ತು ಅದರೊಂದಿಗೆ ಸಿಹಿ ಹೋಳಿಗೆ ಇರುತ್ತದೆ. ಈ ಸ್ಥಳವು ಅತ್ಯಂತ ರುಚಿಯಾದ ಉಪಹಾರ ಮತ್ತು ಉತ್ತರ ಕರ್ನಾಟಕದ ಊಟವನ್ನು ಒದಗಿಸುತ್ತದೆ.
ಒಮ್ಮೆಯಾದರೂ ಈ ಒಂದು ಪ್ರದೇಶಕ್ಕೆ ವಿಶೇಷವಾಗಿ ಹೋಗಿ ಆನಂದಿಸಬೇಕು, ಇಲ್ಲಿನ ಗ್ರಾಮೀಣ ಸೊಬಗು ಕಣ್ಣತುಂಬಿಕೊಳ್ಳಬೇಕು. ಒಂದು ದಿನದ ಪ್ರವಾಸಕ್ಕೆ ಇಲ್ಲಿಗೆ ಪ್ರಯತ್ನಿಸಬಹುದು.