ಎಲ್ಲಾರೂ ಹೆಂಗಿದ್ದಿರಿ? ಹಬ್ಬಾ ಹೆಂಗಾತು? ಎಲ್ಲಾರೂ ಹಬ್ಬಾ ಫುಲ್ ಮಜಾ ಮಾಡಿದ್ರಿ ಅನ್ಕೋತೇನಿ.
ಹೆಂಗ ನಮ್ಮ ವೆಂಕಪ್ಪನ ಕಲ್ಯಾಣ ಆತು ಹಂಗ ನಿಮ್ಮದೂ ಕಲ್ಯಾಣ ಆಗ್ಲಿ ಅಂತ ಬೇಡಕೋತೇನಿ. ಯಾಕಂದ್ರ ಈ ಟೈಮಿನ್ಯಾಗ ಕಲ್ಯಾಣ ಆಗೋದ ಭಾಳ ಕಠಿಣಾದ ನೋಡ್ರಿ. ಅದ ಒಂದ ಗಾದಿ ಮಾತ ಅದಲಾ ಹಲ್ಲು ಇದ್ದಾವ್ರಿಗೆ ಕಡಲಿಯಿಲ್ಲಾ ಕಡಲಿ ಇದ್ದಾವರಿಗೆ ಹಲ್ಲಿಲ್ಲಾ ಅಂತ ಹಂಗ ಅದ ನೋಡ್ರಿ ಈಗಿನ ಪರಿಸ್ಥಿತಿ. ಅಂದ್ರ ಯಾರಿಗೆ ಲಗ್ನಾ ಮಾಡಕೊಳಿಕ್ಕೆ ಆಶಾ ಅದ ಅವರಿಗೆ ಹುಡಗಾ/ಹುಡಗಿ ಸಿಗತಾ ಸಿಗವಲ್ರು. ಇನ್ನ ಸ್ವಲ್ಪ ಮಂದಿಗೆ ಬ್ಯಾಡೋ ಮಾರಾಯಾ ಅಂದ್ರು ಬಿಟ್ಟ ಹೋಗಲಿಕ್ಕೆ ಆಗದಂತಹಾ ಪರಿಸ್ಥಿತಿ ಅದ ನೋಡ್ರಿ. ಹಿಂತಾ ಟೈಮಿನ್ಯಾಗ ಹುಡಗೋರೇನ ಮಾಡಬೇಕು ನೀವ ಹೇಳ್ರಿ.
ಮ್ಯಾಲೇನ ಬರದೇನಿ ನಾನೇನು ಮಾಡಲಿ ಬಡವನಯ್ಯಾ ಅಂದ್ರ ಇದು ಬರೆ ರೊಕ್ಕಕ್ಕ ಸಂಬಂಧ ಪಟ್ಟಿದ್ದ ಬಡತನ ಅಂತ ಅಲ್ಲಾ. ಎಲ್ಲಾ ರೀತಿಯ ಬಡತನಾನು ಇದ್ರಾಗ ಬಂತು ಅನ್ಕೋರಿ. ಇನ್ಯಾವ ಬಡತನ ಇರ್ತದ ದೋಸ್ತ ಅಂತ ಕೆಳಬ್ಯಾಡ್ರಿ. ಬಡವ ಅಂದ್ರ ಬರೆ ರೊಕ್ಕಯಿಲ್ಲದಾವ ಅಂತ ಅರ್ಥಾ ಅಲ್ಲಾ ಪ್ರೀತಿನ್ಯಾಗ ಸೋತಾವರು ಮತ್ತ ಪ್ರೀತಿ ಉಳಿಸಿಕೋಳ್ಳಿಕ್ಕ ಬರಲ್ದಾವ್ರು ಸುದೇಕ ಬಡವ್ರ. ಯಾಕಂದ್ರ ಪ್ರೀತಿನ ಒಂದ ಆಸ್ತಿ ಅದನ್ನ ಉಳಿಸ್ಕೋಳಿಕ್ಕೆ ಕೈ ಮೀರಿ ಪ್ರಯತ್ನಾ ಮಾಡ್ರಿ. ಆಗಲಿಲ್ಲಾ ಅಂದ್ರ ಹಂಗ ಸುಮ್ಮನ್ನ ಬಿಡ ಬ್ಯಾಡ್ರಿ ಶತಾಯ ಗತಯ ಪ್ರಯತ್ನಾ ಮಾಡ್ರಿ ಒಂದಿಲ್ಲಾ ಒಂದ ಹಾದಿ ಸಿಕ್ಕೇ ಸಿಗತದ. ಮನ್ಯಾಗ ಕುತ್ತು ಮಾತಾಡ್ರಿ. ಅವ್ವಾ ಅಪ್ಪಾ ಏನೇ ಮಾಡಿದ್ರು ನಿಮ್ಮ ಚೊಲೋದಕ್ಕ ಮರಿಬ್ಯಾಡ್ರಿ ಹಂಗ ಅಂತ ಅವ್ರರಿಗೆ ನಿಮಗ ಯಾವದು ಚೊಲೋ ಅಸ್ತದ ಅದನ್ನು ಹೇಳ್ರಿ ಅವರು ಒಪ್ಪಿನೂ ಒಪ್ಪ ಬಹುದು. ಯಾಕಂದ್ರ ಅವರಿಗೆ ಬೇಕಾಗಿರುದು ತಮ್ಮ ಮಕ್ಕಳ ಸುಖಾ ಅಷ್ಟ. ಅವರಿಗೆ ನೀವ ಹೇಳ್ರಿ ನಾನು ಎಲ್ಲೇ ಇದ್ದ್ರ ಸುಖದಿಂದ ಇರ್ತೇನಿ ಅಂತ.
ಯಾರೂ ಹುಟ್ಟಾ ಬಡವ ಇರೋದಿಲ್ಲಾ ಪರಿಸ್ಥಿತಿ ಅವರನ್ನು ಹಂಗ ಮಾಡತದ. ಹಂಗಂತ ಇವತ್ತ ಬಡವ್ರ ಇದ್ದಾವ್ರು ಯಾವಾಗು ಬಡವ್ರ ಇರ್ತಾರ ಅಂತನೂ ಅಲ್ಲ. ಹಂಗ ಅವರು ಬಡವ್ರು ಅಂತ ನೀವು ಈಗ ಬಿಟ್ಟ ಹೋದ್ರ ಅವರು ಮುಂದ ಶ್ರೀಮಂತರಾದಾಗ ನಿಮಗ ಅವರ ಜೋಡಿ ಮಾತಾಡ್ಲಿಕ್ಕೆ ಮಾರಿ ಸುದೇಕ ಇರೋದಿಲ್ಲಾ ಅದಕ್ಕ ಎಲ್ಲಾ ಕಡೆದ ಸಂಭಾಳಿಸಿಗೊಂಡ ಜೀವನಾ ನಡಸ್ರಿ.
ಮುಂದವರಿತದ……….