ಬೆಂಗಳೂರು : ವಾಟ್ಸ್ಆ್ಯಪ್ ಇಂದು ‘ಸಾಮಾಜಿಕ ಪರಿಣಾಮ ಉಂಟು ಮಾಡಲು ವೇಗದ ಹಾದಿ’ (ಫಾಸ್ಟ್ ಲೇನ್ ಟು ಸೋಷಿಯಲ್ ಇಂಪ್ಯಾಕ್ಟ್) ಎಂಬ ವಿಚಾರದಲ್ಲಿನ ತನ್ನ ವರದಿಯನ್ನು ಬಹಿರಂಗ ಪಡಿಸಿದೆ. ಈ ವರದಿಯು ಇಂದಿನ ಡಿಜಿಟಲ್ ಆರ್ಥಿಕತೆಯಲ್ಲಿ ಸಣ್ಣ ಉದ್ದಿಮೆಗಳಿಗೆ ಅಭಿವೃದ್ಧಿ ಹೊಂದಲು, ಸಮಾಜ ಕಲ್ಯಾಣ ಸಂಸ್ಥೆಗಳಿಗೆ ಸಕಾರಾತ್ಮಕ ಸಾಮಾಜಿಕ ಪರಿಣಾಮ ಉಂಟು ಮಾಡಲು ವಾಟ್ಸ್ಆ್ಯಪ್ ಹೇಗೆ ಶಕ್ತಿ ಒದಗಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಜೊತೆಗೆ ಭಾರತೀಯರ ಬಳಕೆದಾರರ ಬದುಕಿನಲ್ಲಿ ವಾಟ್ಸ್ಆ್ಯಪ್ ಹೇಗೆ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಬಹಿರಂಗ ಪಡಿಸಿದೆ.
ರೆಡ್ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ಸಿದ್ಧಪಡಿಸಿದ ಈ ವರದಿಯು ವಾಟ್ಸ್ಆ್ಯಪ್ ಉತ್ಪನ್ನಗಳಾದ ವಾಟ್ಸ್ಆ್ಯಪ್ ಕನ್ಸ್ಯೂಮರ್ ಆ್ಯಪ್, ವಾಟ್ಸ್ಆ್ಯಪ್ ಬಿಸಿನೆಸ್ ಆ್ಯಪ್ ಮತ್ತು ವಾಟ್ಸ್ಆ್ಯಪ್ ಬಿಸಿನೆಸ್ ಪ್ಲಾಟ್ ಫಾರ್ಮ್ [ಎಪಿಐ] ಗಳು ಉಂಟು ಮಾಡಿದ ಪರಿಣಾಮವನ್ನು ತಿಳಿಸಿದೆ. ಜೊತೆಗೆ ಈ ವರದಿಯು ವಾಟ್ಸ್ಆ್ಯಪ್, ಬಿಸಿನೆಸ್ ಮತ್ತು ಸಮುದಾಯಗಳನ್ನು ಬಲಪಡಿಸಲು ವ್ಯಕ್ತಿಗಳ ಮಧ್ಯೆ ಅತ್ಯುತ್ತಮ ಸಂವಹನ ಸಾಧ್ಯವಾಗುವಂತೆ ಮಾಡುವ ಮೂಲಕ ಜನರು ಪರಸ್ಪರ ಸಂವಹನ ನಡೆಸುವ ವಿಧಾನದ ಮೇಲೆ ಮತ್ತು ಉದ್ಯಮ ನಡೆಸುವುದರ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂಬುದನ್ನು ಚರ್ಚೆ ಮಾಡುತ್ತದೆ.
ಈ ವರದಿಯ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿರುವ ಮೆಟಾ ಇಂಡಿಯಾದ ಪಬ್ಲಿಕ್ ಪಾಲಿಸಿ ವಿಭಾಗದ ವೈಸ್ ಪ್ರೆಸಿಡೆಂಟ್ ಶಿವನಾಥ್ ತುಕ್ರಾಲ್ ಅವರು, “ವ್ಯಕ್ತಿಗಳು, ಬಿಸಿನೆಸ್ ಗಳು ಮತ್ತು ಸಮಾಜ ಕಲ್ಯಾಣ ಸಂಸ್ಥೆಗಳು ಸಂವಹನ ನಡಸುವ ರೀತಿ ಮತ್ತು ಕಾರ್ಯನಿರ್ವಹಿಸುವ ರೀತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟು ಮಾಡಿರುವ ವಾಟ್ಸ್ಆ್ಯಪ್ ಒಂದು ಪ್ರಮುಖ ಸಾಧನವಾಗಿ ಹೊರಹೊಮ್ಮಿದೆ. ಮಹಿಳಾ ಉದ್ಯಮಿಗಳಿಗೆ ಬೆಂಬಲ ಒದಗಿಸುವುದರಿಂದ ಹಿಡಿದು, ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವವರೆಗೆ ಮತ್ತು ಪೋಷಕರು ತಮ್ಮ ಮಕ್ಕಳ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡುವವರೆಗೆ ವಾಟ್ಸ್ಆ್ಯಪ್ ಸಂಸ್ಥೆಯು ಸಮಾಜದಲ್ಲಿ ಪಾಸಿಟಿವ್ ಬದಲಾವಣೆ ಉಂಟು ಮಾಡಲು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ. ವರದಿಯಲ್ಲಿ ಉಲ್ಲೇಖಿಸಲಾದ ಉದಾಹರಣೆಗಳು ಭಾರತದಲ್ಲಿ ಬೆಳೆಯುತ್ತಿರುವ ಡಿಜಿಟಲ್ ಕ್ಷೇತ್ರದ ಮೂಲಕ ಸಮಾಜದ ವಿವಿಧ ವಿಭಾಗಗಳಿಗೆ ನೆರವು ಒದಗಿಸುವ ವಾಟ್ಸ್ಆ್ಯಪ್ ನ ಅದ್ಭುತ ಶಕ್ತಿಗೆ ಪುರಾವೆಯಾಗಿವೆ” ಎಂದು ಹೇಳಿದರು.
ಭಾರತದ ಎಂಎಸ್ಎಂಇಗಳ ಪೋಷಣೆ ಮತ್ತು ಉದ್ಯಮಶೀಲತೆಗೆ ಪ್ರೇರೇಪಣೆ
ವಾಟ್ಸ್ಆ್ಯಪ್ ಬಿಸಿನೆಸ್ ಆ್ಯಪ್ ಭಾರತದ ಉದ್ದಗಲಕ್ಕೂ ಇರುವ ಸೂಕ್ಷ್ಮ, ಸಣ್ಣ ಉದ್ದಿಮೆಗಳು ಮತ್ತು ಏಕವ್ಯಕ್ತಿ ಉದ್ಯಮಿಗಳಿಗೆ ಹೊಸ ಮಾರುಕಟ್ಟೆಗಳನ್ನು ಹುಡುಕಲು ಮತ್ತು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಸಮರ್ಪಕವಾದ ದಾರಿಯನ್ನು ಒದಗಿಸಿದೆ. ಜೊತೆಗೆ ಅವರು ತಮ್ಮ ಉದ್ದಿಮೆಗಾಗಿ ವೃತ್ತಿಪರ ಡಿಜಿಟಲ್ ಗುರುತನ್ನು ಹೊಂದಲು ನೆರವಾಗಿದೆ.
ವಾಟ್ಸ್ಆ್ಯಪ್ ಬಿಸಿನೆಸ್ ಸಣ್ಣ ಉದ್ದಿಮೆಗಳಿಗೆ ಸುಲಭವಾಗಿ ಕಾರ್ಯ ನಿರ್ವಹಣೆ ಮಾಡಲು ಮತ್ತು ಆನ್ಲೈನ್ನಲ್ಲಿ ಸುಲಭವಾಗಿ ಆರ್ಡರ್ಗಳನ್ನು ಸ್ವೀಕರಿಸಲು ಹಾಗೂ ಆರ್ಡರ್ ಅನ್ನು ಪೂರೈಸಲು ಅನುವು ಮಾಡಿಕೊಡುವ ಮೂಲಕ ಉದ್ದಿಮೆಯ ದಕ್ಷತೆಯನ್ನು ಹೆಚ್ಚುವಂತೆ ಮಾಡಲು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶಿಸುವ ಅವಕಾಶವೂ ಸೇರಿದಂತೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದ ಕಾರಣ ಪ್ರಾದೇಶಿಕ ಉದ್ದಿಮೆಗಳು ಮತ್ತು ಸ್ಟಾರ್ಟ್ಅಪ್ಗಳಿಗೆ ಡಿಜಿಟಲ್ ಉಪಕರಣಗಳ ಲಭ್ಯತೆಯನ್ನು ಒದಗಿಸುವ ಮೂಲಕ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವುದರಿಂದ ಆ ಉದ್ದಿಮೆಗಳನ್ನು ದೊಡ್ಡ ಉದ್ಯಮಗಳೊಂದಿಗೆ ಸಮಾನ ಸ್ಥಾನದಲ್ಲಿ ಇರಿಸಲು ಸಾಧ್ಯವಾಗುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಮತ್ತು ಮೆಟಾದ ‘ವಾಟ್ಸ್ಆ್ಯಪ್ ಸೆ ವ್ಯಾಪಾರ್’ ಕಾರ್ಯಕ್ರಮಗಳು ಜಂಟಿಯಾಗಿ ವಾಟ್ಸ್ಆ್ಯಪ್ ಬಿಸಿನೆಸ್ ಆ್ಯಪ್ ಮುಖಾಂತರ 10 ಮಿಲಿಯನ್ ಅಂದ್ರೆ ಒಂದು ಕೋಟಿ ಪ್ರಾದೇಶಿಕ ವ್ಯಾಪಾರಿಗಳಿಗೆ ಡಿಜಿಟಲ್ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಉದ್ದೇಶ ಹೊಂದಿವೆ. ಈ ಸಹಭಾಗಿತ್ವದ ಯೋಜನೆಯನ್ನು ಭಾರತದ 29 ರಾಜ್ಯಗಳಲ್ಲಿ, 11 ಭಾರತೀಯ ಭಾಷೆಗಳಲ್ಲಿ ಅಳವಡಿಸಲಾಗುವುದು.
ಈ ಯೋಜನೆ ಮುಖಾಂತರ 25,000 ವ್ಯಾಪಾರಿಗಳಿಗೆ ಮೆಟಾ ಸ್ಮಾಲ್ ಬಿಸಿನೆಸ್ ಅಕಾಡೆಮಿಗೆ ಪ್ರವೇಶಾವಕಾಶ ಒದಗಿಸಲಾಗುತ್ತದೆ. ಆ ಮೂಲಕ ಅವರಿಗೆ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯಗಳನ್ನು ಹೆಚ್ಚಿಸುವ ತರಬೇತಿ ನೀಡಲಾಗುತ್ತದೆ.
ಪರಿಣಾಮ ಉಂಟು ಮಾಡುವ ಶಕ್ತಿ ಹೆಚ್ಚಿಸಲು ಸಮಾಜ ಕಲ್ಯಾಣ ಸಂಸ್ಥೆಗಳ ಬಲವರ್ಧನೆ
ಭಾರತದಲ್ಲಿರುವ ಹಲವಾರು ಸಮಾಜ ಕಲ್ಯಾಣ ಸಂಸ್ಥೆಗಳಿಗೆ ಶಿಕ್ಷಣ, ಆರೋಗ್ಯ ಸೇವೆ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಮಹಿಳಾ ಸಬಲೀಕರಣದಂತಹ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಲು, ಉತ್ತಮ ಬದಲಾವಣೆ ತರಲು ವಾಟ್ಸ್ಆ್ಯಪ್ ಅನುವು ಮಾಡಿಕೊಟ್ಟಿದೆ. ಜೊತೆಗೆ ತಳಮಟ್ಟದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯವಾಗಿಸಲು ನೆರವಾಗಿದೆ.
ಮನ್ ದೇಶಿ ಫೌಂಡೇಶನ್ 100,000ಕ್ಕೂ ಹೆಚ್ಚು ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ಆರ್ಥಿಕ ಸಾಕ್ಷರತೆ ಒದಗಿಸಿದೆ ಮತ್ತು ಸಂಸ್ಥೆಯ ವಾಟ್ಸ್ಆ್ಯಪ್ ಚಾಟ್ಬಾಟ್ ಮೂಲಕ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರ ಅವಕಾಶ ಒದಗಿಸುವ ಮೂಲಕ ನೆರವಾಗಿದೆ. ಇಲ್ಲಿಯವರೆಗೆ ಅವರು 15,000ಕ್ಕೂ ಹೆಚ್ಚು ಮಹಿಳೆಯರಿಗೆ ಡಿಜಿಟಲ್ ತರಬೇತಿ ನೀಡಿದ್ದಾರೆ. ವಿಶೇಷವಾಗಿ ಮಹಿಳೆಯರಲ್ಲಿ ಶೇ.85% ರಷ್ಟು ಮಂದಿ ಮಹಿಳೆಯರು ಗ್ರಾಮೀಣ ಭಾಗದವರಾಗಿದ್ದಾರೆ.
ಗರ್ಭಿಣಿಯರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸಲು ಮತ್ತು ಅವರಿಗೆ ಶಿಶುಪಾಲನಾ ಜ್ಞಾನ ಒದಗಿಸುವ ಮೂಲಕ ಶಕ್ತಿ ತುಂಬಲು, ಎನ್ ಜಿ ಓಗಳು ಬಡತನ ಸ್ಥಿತಿಯನ್ನು ಕಡಿಮೆ ಮಾಡಲು ಯೋಜನೆ ರೂಪಿಸಿಕೊಳ್ಳಲು ಹಾಗೂ ಯುವಜನತೆ ಉತ್ತಮ ಉದ್ಯೋಗಾವಕಾಶ ಪಡೆಯಲು ಕೌಶಲ್ಯಾಭಿವೃದ್ಧಿ ಮಾಡಲು ವಾಟ್ಸ್ಆ್ಯಪ್ ನೆರವಾದ ಪ್ರಕರಣಗಳನ್ನು ಇಲ್ಲಿ ಗಮನಿಸಬಹುದಾಗಿದೆ.
ಸಮರ್ಥ ಇ-ಆಡಳಿತಕ್ಕಾಗಿ ನಾಗರಿಕ ಸೇವೆಗೆ ನೆರವು
ದಕ್ಷ ಮತ್ತು ಅಂತರ್ಗತ ನಾಗರಿಕ ಸೇವೆಗಳನ್ನು ಒದಗಿಸಲು ವಾಟ್ಸ್ಆ್ಯಪ್ ದೇಶಾದ್ಯಂತ ಇರುವ ಸರ್ಕಾರಿ ಇಲಾಖೆಗಳಿಗೆ ನೆರವು ಒದಗಿಸಿದೆ. ದೂರು ಪರಿಹಾರ, ಡಿಜಿಟಲ್ ಆರೋಗ್ಯ ತಂತ್ರಜ್ಞಾನಕ್ಕೆ ಪ್ರೋತ್ಸಾಹ, ಸೈಬರ್ ಸುರಕ್ಷತಾ ಜಾಗೃತಿ, ಸ್ಥಳೀಯ ಉಪಯುಕ್ತ ಸೇವೆ ಒದಗಿಸುವಿಕೆ, ಸಮರ್ಥ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆ ಸೇವೆ ಇತ್ಯಾದಿ ಸೇವೆಗೆಳನ್ನು ನೀಡುವುದಕ್ಕೆ ನವೀನ ರೀತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ವಾಟ್ಸ್ಆ್ಯಪ್ ಅನ್ನು ಬಳಸಿರುವ ಪ್ರಕರಣಗಳನ್ನು ಈ ವರದಿಯಲ್ಲಿ ನೀಡಲಾಗಿದೆ.
ಉದಾಹರಣೆಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್ ಸಿ ಎಚ್) ಗ್ರಾಹಕರಿಗೆ ತೊಂದರೆ ಮುಕ್ತ ಅನುಭವ ಒದಗಿಸಲು, ಗ್ರಾಹಕರ ಕುಂದುಕೊರತೆ ಮತ್ತು ಪ್ರಶ್ನೆಗೆ ಪರಿಹಾರ ಒದಗಿಸುವ ವ್ಯವಸ್ಥೆಯನ್ನು ಸುಗಮಗೊಳಿಸಲು ವಾಟ್ಸ್ಆ್ಯಪ್ ಅನ್ನು ಪರಿಣಾಮಕಾರಿಯಾಗಿ ಬಳಸುತ್ತಿದೆ. ಚಾಟ್ಬಾಟ್ ಭಾರತದಾದ್ಯಂತ ಇರುವ ಗ್ರಾಹಕರು ಉತ್ಪನ್ನ ಅಥವಾ ಸೇವೆಯ ವಿರುದ್ಧ ತಮಗೆ ಎದುರಾದ ಕುಂದುಕೊರತೆಗಳ ಬಗ್ಗೆ ದೂರುಗಳನ್ನು ನೀಡಲು ಅನುವು ಮಾಡಿಕೊಡುತ್ತದೆ ಮತ್ತು ಸ್ಟೇಟಸ್ ಅಪ್ ಡೇಟ್ ಗಳನ್ನು ಟ್ರ್ಯಾಕ್ ಮಾಡುವ ಅವಕಾಶವನ್ನು ಒದಗಿಸುವ ಮೂಲಕ ಕುಂದುಕೊರತೆ ದಾಖಲೆಗಳನ್ನು ನೋಡುವುದಕ್ಕೂ ಅನುವು ಮಾಡಿ ಕೊಡುತ್ತದೆ. ಜೊತೆಗೆ ಜಾಗೃತಿಯನ್ನು ಉಂಟು ಮಾಡುತ್ತದೆ ಮತ್ತು ಗ್ರಾಹಕರ ಹಕ್ಕುಗಳು ಹಾಗೂ ಅದಕ್ಕೆ ಸಂಬಂಧಿಸಿದ ಇತರ ವಿಚಾರಗಳ ನಾಗರಿಕರಿಗೆ ಇರುವ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.