ಮಂಗಳೂರು : “ಅಧ್ಯಾಪಕರುಗಳ ಪ್ರೋತ್ಸಾಹ ಮತ್ತು ಬೆಂಬಲವೇ ಇವತ್ತಿನ ಈ ದಿನದ ಯಶಸ್ಸು ಮತ್ತು ಇಲ್ಲಿಯ ಕಾರ್ಯಕ್ರಮಗಳೇ ಈ ಕಾಲೇಜಿನ ಮಹತ್ವವನ್ನು ಸಾರುತ್ತಿದೆ ಹಾಗೂ ಉಳಿದ ಕಾಲೇಜುಗಳಿಗಿಂತ ಭಿನ್ನ ಎನ್ನುವುದನ್ನು ಸಾಬೀತುಪಡಿಸುತ್ತಿದೆ” ಎಂದು ಪಿ.ಎ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ 2024ರ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ಮಂಗಳೂರು ವಿ.ವಿ ಯ ಕುಲಪತಿಗಳಾದ ಡಾ.ಪಿ.ಎಲ್ ಧರ್ಮ ಹೇಳಿದರು.
ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಾಂಶುಪಾಲರಾದ ಡಾ. ಸರ್ಫ್ರಾಝ್ ಜೆ ಹಾಸಿಂ ಓದಿದರು. ಪಿ.ಎ ಇ.ಟಿ ಯ ಹಣಕಾಸು ವ್ಯವಹಾರಗಳ ಮುಖ್ಯಸ್ಥ ರಾದ ಅಹ್ಮದ್ ಕುಟ್ಟಿ ಕೆ, ಕಾಲೇಜ್ ನ ಖರೀದಿ ವಿಭಾಗದ ನಿರ್ದೇಶಕರಾದ ಹಾರಿಸ್ ಟಿಡಿ, ಪಿ.ಎ.ಇ.ಟಿ ಯ ಎ.ಜಿ.ಎಂ ಶರಫುದ್ದೀನ್ ಪಿ.ಕೆ ಅಥಿತಿಗಳಾಗಿ ಆಗಮಿಸಿದರು.
ಪಿ.ಎ.ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ಡಾ. ರಮೀಝ್ ಕೆ, ಪಿ.ಎ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಸಲೀಮುಲ್ಲಾ ಖಾನ್, ಪಿ.ಎ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲರಾದ ಡಾ. ಸಜೀಶ್ ರಘುನಾಥನ್, ಪಿ.ಎ.ಇ.ಟಿ ಯ ವಿದ್ಯಾರ್ಥಿ ಡೀನ್ ಡಾ. ಸಯ್ಯಿದ್ ಅಮೀನ್,ಉಪಪ್ರಾಂಶುಪಾಲರಾದ ಡಾ.ಹರಿಕೃಷ್ಣನ್ ಜಿ, ಸಿ.ಪಾಡ್ ಮುಖ್ಯಸ್ಥರಾದ ಫೈಝಲ್ ಎನ್, ಐ.ಕ್ಯೂ.ಎ.ಸಿ ಯ ಮುಖ್ಯಸ್ಥೆ ವಾಣಿಶ್ರೀ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಡೆಲ್ಸಿ ಡಿ.ಸೋಜಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೀಪ್ತಿ ಉದ್ಯಾವರ್, ಮಾನವಿಕ ವಿಭಾಗದ ಮುಖ್ಯಸ್ಥೆ ನೂರ್ ಜಹಾನ್ ಬೇಗಂ ಹಾಗೂ ವಾರ್ಷಿಕೋತ್ಸವದ ಸಂಯೋಜಕರಾದ ಬಶೀರ್ ಅಹ್ಮದ್, ಚೈತ್ರ ಎನ್ ವಿ ಮತ್ತು ಅನ್ಫಾ ನಿಶಾತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ವಿಜೇತರನ್ನು ಇದೇ ಸಂಧರ್ಭ ಅಭಿನಂದಿಸಲಾಯಿತು. ಅಧ್ಯಾಪಕರಾದ ಲವೀನ ಡಿ. ಸೋಜ ಮತ್ತು ಅಫ್ರದತ್ ಅಮಾನ್ ಕಾರ್ಯಕ್ರಮ ನಿರೂಪಿಸಿದರೆ ವಿದ್ಯಾರ್ಥಿಗಳಾದ ಇರ್ಫಾದ್ ಪ್ರಾರ್ಥನೆ ನೆರವೇರಿಸಿದರು.