ಮಂಗಳೂರು : ತುಳುವರ ಸಂಸ್ಕೃತಿ ಆರಾಧನೆ ಕಲಿಯಲೆಂದೇ ಅಮೇರಿಕಾದಿಂದ ಮಂಗಳೂರಿಗೆ ಹಾರಿ ಬಂದ ಸ್ಯಾಮ್ .ತುಳುವರೇ ಅವಾಕ್ಕಾಗುವ ರೀತಿಯಲ್ಲಿ ತುಳು ಮಾತನಾಡುವ ಅಮೇರಿಕಾದ ಸ್ಯಾಮ್.
ಈತನಿಗೆ ತುಳುವಿನಲ್ಲಿ ಮಾತಾನಾಡುವುದೆಂದರೆ ಇಷ್ಟ ,ತುಳುವರೊಂದಿಗೆ ಬೆರೆಯುವುದೆಂದರೆ ಸಂತಸ.ಈ ಕಾರಣದಿಂದಲೇ ಅಮೇರಿಕಾದಿಂದ ಫ್ಲೈಟ್ ಏರಿ ದಕ್ಷಿಣ ಕನ್ನಡ ಹಾರಿ ಬಂದಿದ್ದಾರೆ.
ವ್ಲಾಗರ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆದಿರುವ ಸ್ಯಾಮ್ ವಾರದ ಹಿಂದಷ್ಟೇ ಮಂಗಳೂರಿಗೆ ಆಗಮಿಸಿದ್ದಾರೆ.
ಇನ್ನು ಎರಡು ತಿಂಗಳು ಕಾಲ ಕರಾವಳಿಯಲ್ಲಿ ಪರ್ಯಾಟನೆ. ಉಡುಪಿ ,ದ.ಕ ದ ,ಜಾತ್ರೆ ,ಕೋಲ,ನೇಮ ಯಕ್ಷಗಾನ ಸಂಸ್ಕೃತಿ ಸವಿಯಲಿದ್ದಾರೆ.
ಅಮೇರಿಕಾದ ರೋಧ್ ಐಲ್ಯಾಂಡ್ ನಿವಾಸಿಯಾಗಿರುವ ಸ್ಯಾಮ್. ಅಮೆರಿಕಾದಲ್ಲಿರುವ ತುಳು ಗೆಳೆಯರಿಂದ ಪ್ರೇರಿತನಾಗಿ ತುಳು ಭಾಷೆಯನ್ನು ಎರಡು ವರ್ಷಗಳಿಂದ ಕಲಿಯುತಿದ್ದಾರೆ. ಈ ಹಿನ್ನಲೆ ಸ್ಯಾಮ್ ಗೆ ಮಂಗಳೂರಿನಲ್ಲಿ ಭರಪೂರ ಸ್ವಾಗತ ಸಿಕ್ಕಿದೆ.