ಮಂಗಳೂರು : ಮಹಾನಗರಕ್ಕೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ತೀವ್ರ ಕುಸಿತ ಕಂಡಿದ್ದು, ಶುಕ್ರವಾರ 4.20ಕ್ಕೆ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇ 5ರಿಂದ ರೇಶನಿಂಗ್ ಆರಂಭವಾಗಲಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆ ಬಳಿಕ ಮಂಗಳೂರು ನಗರ ಪ್ರದೇಶ ಮತ್ತು ಸುರತ್ಕಲ್ ಪ್ರದೇಶಗಳಿಗೆ ಪರ್ಯಾಯ ದಿನಗಳಲ್ಲಿ ನೀರು ಬಿಡಲು ಕ್ರಮವಹಿಸಲಾಗಿದೆ.
ತುಂಬೆ ವೆಂಟೆಡ್ ಡ್ಯಾಂನಿಂದ ಪ್ರತಿನಿತ್ಯ 160 ಎಂಎಲ್ಡಿ ನೀರು ಮೇಲೆತ್ತಲಾಗುತ್ತಿದ್ದು, ಇದರಲ್ಲಿ 150ಎಂಎಲ್ಡಿ ನೀರು ನಗರಕ್ಕೆ ಪೂರೈಸಲಾಗುತ್ತಿದೆ. ಬಿರು ಬೇಸಿಗೆಗೆ ನೇತ್ರಾವತಿಯಲ್ಲಿ ನೀರಿನ ಪ್ರಮಾಣ ಒಂದೇ ಸವನೆ ಕಡಿಮೆಯಾಗುತ್ತಿದ್ದು, ತುರ್ತು ಅಗತ್ಯ ಕಾರ್ಯಗಳಿಗೆ ಮಾತ್ರ ನೀರು ಬಳಸುವಂತೆ ಜಿಲ್ಲಾಡಳಿತ ಸ್ಪಷ್ಟ ನಿರ್ದೇಶನ ನೀಡಿದೆ.
ಮೇ 5 (ಬೆಸ ದಿನಗಳು): ಬೆಂದೂರು ರೇಚಕ ಸ್ಥಾವರದಿಂದ ನೀರು ವಿತರಣೆಯಾಗುವ ಪ್ರದೇಶಗಳು: ಕೋರ್ಟ್ ವಾರ್ಡ್, ಕಾರ್ಸ್ಟ್ರೀಟ್, ಬಾವುಟಗುಡ್ಡೆ ಟ್ಯಾಂಕ್, ಆಕಾಶವಾಣಿ ಟ್ಯಾಂಕ್, ಪದವು ಟ್ಯಾಂಕ್, ಗೋರಿಗುಡ್ಡ, ಸೂಟರ್ಪೇಟೆ, ಶಿವಭಾಗ್, ಬೆಂದೂರು, ಕದ್ರಿ, ವಾಸ್ ಲೇನ್, ಬೆಂದೂರು, ಕಾರ್ಸ್ಟ್ರೀಟ್, ಕುದ್ರೋಳಿ ಫಿಶಿಂಗ್ ಹಾರ್ಬರ್, ಕೊಡಿಯಾಲ್ಬೈಲ್.
ಪಡೀಲ್ ರೇಚಕ ಸ್ಥಾವರ: ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯಾ, ಜೆಪ್ಪಿನಮೊಗರು, ಬಿಕರ್ನಕಟ್ಟೆ ಟ್ಯಾಂಕ್, ಉಲ್ಲಾಸ್ ನಗರ, ಬಜಾಲ್, ತಿರುವೈಲು, ವಾಮಂಜೂರು.
ಶಕ್ತಿನಗರ ಟ್ಯಾಂಕ್: ಕುಂಜತ್ತಬೈಲ್, ಮುಗ್ರೋಡಿ, ಶಕ್ತಿನಗರ, ಸಂಜಯ ನಗರ, ಪ್ರೀತಿನಗರ, ಮಂಜಡ್ಕ, ರಾಜೀವ ನಗರ, ಬೊಂದೇಲ್, ಗಾಂಧಿನಗರ, ಶಾಂತಿನಗರ, ಕಾವೂರು.
ತುಂಬೆ ಪಣಂಬೂರು ಡೈರೆಕ್ಟ್ ಲೈನ್: ಕಂಕನಾಡಿ, ನಾಗುರಿ, ಪಂಪ್ವೆಲ್, ಬಲ್ಲೂರುಗುಡ್ಡೆ, ಪಡೀಲ್.
ಮೇ 6ರಂದು (ಸಮ ಸಂಖ್ಯೆ): ಪಣಂಬೂರು ರೇಚಕ ಸ್ಥಾವರದಿಂದ ನೀರು ವಿತರಣಾ ಸ್ಥಳಗಳು: ಸುರತ್ಕಲ್, ಎನ್ಐಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ.
ಪಡೀಲ್ ರೇಚಕ ಸ್ಥಾವರ: ಬಜಾಲ್, ಜಲ್ಲಿಗುಡ್ಡೆ, ಮುಗೇರ್, ಎಕ್ಕೂರು, ಸದಾಶಿವನಗರ, ಅಳಪೆ, ಮೇಘನಗರ, ಮಂಜಳಿಕೆ, ಕಂಕನಾಡಿ, ರೈಲ್ವೇ ಸ್ಟೇಷನ್ ಪ್ರದೇಶ, ಕುಡುಪು, ಪಾಂಡೇಶ್ವರ, ಸ್ಟೇಟ್ಬ್ಯಾಂಕ್, ಗೂಡ್ಶೆಡ್, ಧಕ್ಕೆ, ಕಣ್ಣೂರು, ನಿಡ್ಡೆಲ್, ಶಿವನಗರ, ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರನಗರ.
ಶಕ್ತಿನಗರ ಟ್ಯಾಂಕ್: ಕಂಡೆಟ್ಟು, ಕುಲಶೇಖರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್ಗೇಟ್, ಕೊಂಗೂರು ಮಠ, ಪ್ರಶಾಂತ್ ನಗರ.
ತುಂಬೆ- ಪಣಂಬೂರು ಡೈರೆಕ್ಟ್ ಲೈನ್: ಮೂಡ ಪಂಪ್ಹೌಸ್, ಕೊಟ್ಟಾರ ಚೌಕಿ, ಪಂಪ್ಹೌಸ್, ಕೂಳೂರು ಪಂಪ್ಹೌಸ್, ಕಾಪಿಕಾಡ್, ದಡ್ಡಲ್ಕಾರ್ಡ್ ಪ್ರದೇಶ, ಬಂಗ್ರಕೂಳೂರು.
ಇದೇ ರೀತಿ ಬೆಸ ಸಂಖ್ಯಾ ದಿನ ಮತ್ತು ಸಮ ಸಂಖ್ಯಾ ದಿನದ ಲೆಕ್ಕಾಚಾರದಲ್ಲಿ ದಿನ ಬಿಟ್ಟು ದಿನ ಮಂಗಳೂರು ನಗರದಲ್ಲಿ ನೀರು ವಿತರಣೆಯಾಗಲಿದೆ ಎಂದು ಮಂಗಳೂರು ನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.
ಕಟ್ಟಡ ರಚನೆ, ಇತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್ಗಳ ಜೋಡಣೆಯನ್ನು ತಾತ್ಕಾಲಿಕವಾಗಿ ಕಡಿತಗೊಳಿಸುವುದು. ಸಾರ್ವಜನಿಕರು ನೀರನ್ನು ಅನಾವಶ್ಯಕವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ ಕಡಿತಗೊಳಿಸಲು ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಮಂಗಳೂರು ಮಹಾನಗರ ಪಾಲಿಕೆ ಕಂಟ್ರೋಲ್ ರೂಮ್ 0824-2220319/2220306 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೇ ತಿಂಗಳಾಂತ್ಯ ಅಥವಾ ಜೂನ್ ಮೊದಲ ವಾರದವರೆಗೆ ಮಳೆ ಬಾರದಿದ್ದರೆ ನೀರಿನ ಹಾಹಾಕಾರ ಮತ್ತಷ್ಟು ಕಾಡಲಿದೆ. ಸಾರ್ವಜನಿಕರು ಕೂಡಾ ಮಿತ ನೀರು ಬಳಕೆ ಮಾಡುವುದು ಅನಿವಾರ್ಯವಾಗಿದೆ.