ಮಾನವನು ತನ್ನ ದಿನ ನಿತ್ಯ ಜೀವನದಲ್ಲಿ ಒಂದಲ್ಲ ಒಂದು ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಾನೆ ಟಿವಿ ಯಲ್ಲಿ ನಿತ್ಯಜ್ಯೋತಿಷ್ಯ ಕೇಳುವುದು. ವಾಸ್ತು ನೋಡುತ್ತಾ ಇರುವುದು. ಅಲ್ಲಿ ದೇವರು ಇದ್ದಾನೆ ಇವುಗಳನ್ನು ಮಾಡಬಾರದು. ಇವುಗಳನ್ನೇ ಮಾಡಬೇಕು ಇಂತಹ ಅನೇಕ ವಿಷಯ ಗಳನ್ನು ಪ್ರತಿನಿತ್ಯ ಜನರುಮಾತಾಡುತ್ತಿರುತ್ತಾರೆ.
ಭಗವಂತ ಇದ್ದಾನೆ ಹಾಗೂ ಆತ ಸರ್ವಶಕ್ತನಿದ್ದಾನೆ. ಭಗವಂತ ಕರುಣಾಮಯಿ ಸಾಗರನಿದ್ದಾನೆ. ಭಗವಂತ ಎಲ್ಲರನ್ನು ಸಮನಾಗಿ ನೋಡುತ್ತಾನೆ. ಮನುಷ್ಯನಿಗೆ ಆತನ ಕರ್ಮದ ಪ್ರಕಾರ ಫಲಪ್ರಾಪ್ತಿಯಾಗುತ್ತದೆ. ಗೀತೆಯಲ್ಲಿ ಶ್ರೀ ಕೃಷ್ಣ ನೀನು ಕರ್ಮ ಮಾಡು ಫಲದ ಅಪೇಕ್ಷೆ ಮಾಡಬೇಡ ಎಂದೇ ಹೇಳಿದ್ದಾನೆ. ಭಗವಂತನನ್ನು ಒಲಿಸಿಕೊಳ್ಳಲು ಭಕ್ತಿ ಮತ್ತು ಪ್ರೇಮದ ಮಾರ್ಗದಿಂದ ಮಾತ್ರ ಸಾಧ್ಯ ಹೊರತು ಭಯದಿಂದ ಅಲ್ಲ. ಕೇವಲ ದೇವಸ್ಥಾನಗಳಲ್ಲಿ ಭಗವಂತನನ್ನು ಕಾಣದೆ ಸಮಸ್ತ ಚರಾಚರ ಸೃಷ್ಟಿಯಲ್ಲಿ ಆತನೇ ತುಂಬಿದ್ದಾನೆ ಎಲ್ಲರಲ್ಲೂ ಆತನನ್ನೇ ಕಾಣಬೇಕು. ಇದು ನಮ್ಮ ಹಿರಿಯರು ನಮ್ಮ ಶಾಸ್ತ್ರಗಳು ನಮಗೆ ಹೇಳಿದ ಸಂದೇಶ. ಮತ್ತು ನಾವುಗಳು ನಂಬಿರುವ ಸತ್ಯ
ಇಂದು ಜನ ಪ್ರತಿನಿತ್ಯ ಜ್ಯೋತಿಷ್ಯ ಟಿವಿಯಲ್ಲಿ ನೋಡಿ ಕೆಲ ಜನ ಗಾಬರಿಗೊಳ್ಳುತ್ತಾರೆ ಅಥವಾ ಸಂತೋಷಪಡುತ್ತಾರೆ. ನಮ್ಮ ಮನೆಗೆ ವಾಸ್ತು ಸರಿಯಾಗಿಲ್ಲ ನಮ್ಮ ಬೆಡ್ರೂಮ್ ಬಾಗಲು ತೆಗಿಯಬೇಕಂತೆ. ಈಶಾನ್ಯ ದಿಶಕ್ಕೆ ಭಾರ ಹೆಚ್ಚಿಗೆ ಇದೆಯಂತೆ ಮೇಲಿನ ಒಂದು ರೂಮು ತೆಗೆಯಲು ವಾಸ್ತು ಶಾಸ್ತ್ರಿಗಳು ಹೇಳಿದ್ದಾರೆ. ಅದಕ್ಕಾಗಿ ನಮ್ಮ ಮನೆಯಲ್ಲಿ ಕಿರಿಕಿರಿ ಯಾಗುತ್ತಿದೆಯಂತೆ. ನನ್ನ ಸಣ್ಣ ಮಗಳ ಲಗ್ನ ಕೂಡ ಅದಕ್ಕಾಗಿ ಆಗಿಲ್ಲವಂತೆ. ನನ್ನ ದೊಡ್ಡ ಮಗನ ಹೆಂಡತಿ ಬಹಳ ಕಿರಿಕಿರಿ ಮಾಡುತ್ತಿದ್ದಾಳೆ. ವಾಸ್ತು ಶಾಸ್ತ್ರಿಗಳು ಇದೆಲ್ಲದಕ್ಕೆ ವಾಸ್ತುದೋಷ ಕಾರಣವೆಂದು ಹೇಳಿದರು. ಹಾಗೂ ನನಗೆ ಸಾಡೇಸಾತಿ ಇರುವುದರಿಂದ ಶನಿಯ ಕಾಟ ಇದೆಯಂತೆ. ನನ್ನ ಗ್ರಹಚಾರ ಸರಿಯಾಗಿ ಇಲ್ಲ ಎಂದು ಜ್ಯೋತಿಷ್ಯಕಾರರು ನನ್ನ ಕುಂಡಲಿ ಹಾಗೂ ಕೈ ನೋಡಿ ಹೇಳಿದರು. ಯಾವ ಕೆಲಸ ಮಾಡಿದರು ಯಶಸ್ಸು ಸಿಗುತ್ತಿಲ್ಲ .ಹಿಗಿಲ್ಲ ಕೆಲವರು ಆಲೋಚಿಸುತ್ತಾ ಇರುವರು ಹಲವು ಮಂದಿ ಇದ್ದಾರೆ.
ಇನ್ನೂ ಕೆಲವರು ಬೆಕ್ಕು ಅಡ್ಡ ಬಂದರೆ ಅಪಶಕುನ. ಖಾಲಿ ಕೊಡ ಎದುರು ಬಂದರೆ ಅಪಶಕುನ ಎಡಗಣ್ಣು ಹೊಡೆದುಕೊಂಡರೆ ಅಪ ಶಕುನ. ಶುಭ ಕಾರ್ಯಕ್ಕೆ ಹೋಗುವಾಗ ವಿಧವಾ ಹೆಣ್ಣುಮಗಳು ಕಂಡರೆ ಅಪಶಕುನ. ಕಾಗೆ ಮನೆಯ ಮೇಲೆ ಕುಳಿತರೆ ಅಪಶಕುನ. ಹಲ್ಲಿ ತಲೆಯ ಮೇಲೆ ಮೇಲೆ ಬಿದ್ದರೆ ಅಪಶಕುನ .ಇಂತಹ ಅನೇಕ ನಂಬಿಕೆಗಳನ್ನು ಜನರು ಇಂದಿಗೂ ಅನುಸರಿಸಿದ್ದಾರೆ
ಇನ್ನು ಕೆಲವರು ರಾತ್ರಿ ಉಗುರು ಕತ್ತರಿಸ ಬಾರದು. ಮಂಗಳವಾರ ಕ್ಷೌರ ಮಾಡಿಸಬಾರದು. ಅಮಾವಾಸ್ಯೆ ರಾತ್ರಿ ಹೊರಗಡೆ ತಿರುಗಬಾರದು ಹಾಗೂ ಶುಭಕಾರ್ಯಗಳು ಮಾಡಬಾರದು. ಭೂತ ಪ್ರೇತಗಳು ನಮಗೆ ಕಾಡುತ್ತವೆ ಕಾರಣ ಭೂತರಾಜನ ಹತ್ತಿರ ಹೋಗಬೇಕು ಎಲ್ಲ ಸರಿ ಹೋಗುತ್ತದೆ .ಆ ಸ್ವಾಮಿ ನಮಗೆ ಮಂತ್ರಾಕ್ಷತೆ ವಿಭೂತಿ ಕೊಟ್ಟ ನಮ್ಮ ರೋಗ ಗುಣವಾಯಿತು ಹೀಗೆಲ್ಲ ನಂಬುತ್ತಾರೆ
ನಿಜವಾಗಿ ನೋಡಿದರೆ ಜ್ಯೋತಿಷ್ಯ ಶಾಸ್ತ್ರ ವಾಸ್ತು ಶಾಸ್ತ್ರ ಸಂಪೂರ್ಣ ಸತ್ಯವಾದವುಗಳು ನಾವು ಅವುಗಳು ಸುಳ್ಳು ಎಂದು ಹೇಳುತ್ತಿಲ್ಲ. ಇವು ನಮ್ಮ ಶಾಸ್ತ್ರ ಗಳ ಒಂದು ಭಾಗವೇ.
ಪ್ರತಿ ಸಣ್ಣ ವಿಷಯಕ್ಕೆ ಪ್ರತಿನಿತ್ಯ ಟಿವಿಯಲ್ಲಿ ಜ್ಯೋತಿಷ್ಯವನ್ನು ನೋಡಿಕೊಂಡು ಅಥವಾ ನಮ್ಮ ಕೈ ರೇಖೆಗಳನ್ನು ಜ್ಯೋತಿಷ್ಯ ಕಾರರಿಗೆ ತೋರಿಸಿ ಗಾಬರಿಯಾಗುವುದು ಬೇಡ, ಕೋತಿಯ ಕೈಗಳಿಗೂ ರೇಖೆಗಳು ಇರುತ್ತವೆ. ಅದರ ಮದುವೆ ಯಾವಾಗ ಆಗುತ್ತದೆ ಆ ಕೋತಿಗೆ ಮಕ್ಕಳಷ್ಟು ರೇಖೆಗಳಿಂದ ನಿರ್ಣಯಿಸಲು ಸಾಧ್ಯವೇ?
ಲಗ್ನ ಮೂರ್ತಶುಭಕಾರ್ಯಗಳಿಗಾಗಿ ಮನಸ್ಸಿನ ಸಮಾಧಾನಕ್ಕಾಗಿ ಸಮಾಜದ ನಿಯಮ ನಿಬಂಧನೆಗಳಿಗೆ ನಾವು ಒಳಪಟ್ಟ ಕಾರಣ ಅಷ್ಟು ಮಾತ್ರ ಜ್ಯೋತಿಷ್ಯ ನೋಡಿದರೆ ಸಾಕು. ನಮ್ಮ ಜನ್ಮ ಜನ್ಮಾಂತರದ ಕರ್ಮಫಲ ಹಾಗೂ ಪ್ರಸ್ತುತ ಕರ್ಮಫಲ ದಿಂದ ನಮ್ಮ ಜೀವನದಲ್ಲಿ ಏರುಪೇರುಗಳು ಕಷ್ಟ ಸುಖಗಳು ಬರುತ್ತವೆ ಎಂದು ತತ್ವಜ್ಞಾನಿಗಳು ಅನುಭವಸ್ಥರು ಹೇಳುತ್ತಾರೆ. ನಮ್ಮ ನಮ್ಮ ಈ ಕರ್ಮ ಫಲ ದಿಂದ ಯಾರು ತಪ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲವಂತೆ.
ಮೂಢನಂಬಿಕೆಗೆ ಪುಷ್ಠಿ ಎಂಬಂತೆ ಗುಲ್ಬರ್ಗ ಬೀದರ್ ಜಿಲ್ಲೆಗಳಲ್ಲಿ ಭಾನುಮತಿ ದೆವ್ವ ಗಳ ಕಾಟ ಬಹಳ ಇತ್ತು. ಕರ್ನಾಟಕ ಸರ್ಕಾರ ವಿಜ್ಞಾನಿ ನರಸಿಂಹಯ್ಯ ಡಾ ಶೋಭಾ ಒಳಗೊಂಡಂತೆ ಐವರು ಸದಸ್ಯರ ಕಮಿಟಿ ಏರ್ಪಡಿಸಿ ಭಾನುಮತಿ ದೆವ್ವ ಗಳಿಂದ ಪೀಡಿತರಾದ 200 ಕೇಸ್ ಗಳನ್ನು ಸ್ಟಡಿ ಮಾಡಿ ಇದೆಲ್ಲ ಸುಳ್ಳು ಎಂಬ ನಿರ್ಣಯಕ್ಕೆ ಬಂದರು. ಮನುಷ್ಯ ಹಿಸ್ಟೀರಿಯಾ. ಸ್ಕ್ರೀನೂ ಫಿಜಿಯ ಎಂಬ ಮನೋರೋಗದಿಂದ ಬಳಲುತ್ತಿದ್ದು ಕೆಲವರು ಕೈಚಳಕ ದಿಂದ ಇದೆಲ್ಲ ಮಾಡಿದ್ದಾರೆ ಎಂದು ಸರಕಾರಕ್ಕೆ ವರದಿ ಸಲ್ಲಿಸಲಾಯಿತು.
ಇನ್ನು ವಾಸ್ತು ಶಾಸ್ತ್ರ ಎಂದರೆ ವಾಸ್ತು ಎಂದರೆ ವಾಸಿಸುವ ಸ್ಥಳ ಎಂದು ಅರ್ಥ ಕೂಡ. ಆ ಸ್ಥಳದಲ್ಲಿ ಗಾಳಿ ಬೆಳಕು ಚೆನ್ನಾಗಿ ಬರಬೇಕು ಸೂರ್ಯ ರಶ್ಮಿ ಮನೆಯಲ್ಲಿ ಬೀಳಬೇಕು. ಪ್ರಾರ್ಥನೆ ಗಾಗಿ ಒಂದು ದೇವರ ಕೋಣೆ ಪ್ರತ್ಯೇಕ ಇರಬೇಕು. ನಮ್ಮ ಭೂಮಿ 90° ವಾಲಿ ಬಗ್ಗಿ ತಾನು ತಿರುಗುತ್ತಾ ಸೂರ್ಯನ ಸುತ್ತ ತಿರುಗುತ್ತಿರುತ್ತದೆ ಕಾರಣ ಈಶಾನ್ಯ ದಿಕ್ಕಿನ ಕಡೆಗೆ ನೀರು ಬಹಳ ಇರುತ್ತದೆ ಎಂದು ಆ ಕಡೆ ಬಾವಿ ತೋಡಿಸಿ. ಆಗ್ನೇಯ ದಿಕ್ಕು ಎತ್ತರ ಇದ್ದ ಕಾರಣ ಅಲ್ಲಿ ಅಡಿಗೆ ಮನೆ ಕಟ್ಟಿ. ಫಲಾನು ಸ್ಥಳದಲ್ಲಿ ದೇವರ ಮನೆ ಇರಲಿ ಎಂದೆಲ್ಲಾ ಹೇಳ್ತಾರೆ. ಇದೇ ವಾಸ್ತು ಶಾಸ್ತ್ರದಲ್ಲಿ 50000 ಕಿಂತ ಜನಸಂಖ್ಯೆ ಹೆಚ್ಚಾಗಿ ಜನರು ವಾಸಿಸುವ ಪಟ್ಟಣದಲ್ಲಿ ಮನೆಗಳಿಗೆ ವಾಸ್ತು ನೋಡಬೇಡಿ ಎಂದೇ ಹೇಳಿದ್ದಾರೆ. ಸ್ವಲ್ಪ ಗಾಳಿ ಬೆಳಕು ಕಿಡಿಕಿ ನೋಡಿಕೊಂಡರೆ ಸಾಕು. ಏಕೆಂದರೆ ಸೂರ್ಯನ ಕಿರಣ ಮನೆಯಲ್ಲಿ ಬೀಳಬೇಕು ಆದರೆ ನಮ್ಮ ಮನೆಗೆ ಪೂರ್ವ ದಿಕ್ಕಿನಲ್ಲಿರುವ ಸ್ಥಳಕ್ಕೆ ಕಾರ್ಪೊರೇಷನ್ ನವರು ನಮ್ಮ ಎದುರು ಮನೆಗೆ 20 ಅಂತಸ್ತು ಕಟ್ಟಲು ಪರವಾನಿಗೆ ಕೊಟ್ಟಿ ರುತ್ತಾರೆ. ಅವರು 20 ಅಂತಸ್ತು ಮನೆ ನಮ್ಮ ಮನೆ ಎದುರಿಗೆ ಪೂರ್ವ ದಿಕ್ಕಿನಲ್ಲಿ ಕಟ್ಟಿದರೆ ನಮ್ಮ ಮನೆಗೆ ಜೀವಮಾನದಲ್ಲಿ ಎಂದು ಸೂರ್ಯ ಬೆಳಕು ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡಲು ಸಾಧ್ಯವಿಲ್ಲ
25.30 ವರ್ಷ ಹೆಣ್ಣು ಮಗಳಿಗೆ ಬಂದಾಗ ಆಕೆ ಲಗ್ನ ಆಗದಿದ್ದಾಗ ಬಹಳಷ್ಟು ಕುಂಡಲಿ ಜ್ಯೋತಿಷ್ಯ ನೋಡುತ್ತಾ ಕೊಡಬೇಡಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇನ್ನು ಹಾಗೆ ನೋಡುತ್ತಾ ಮನೆಯಲ್ಲಿ ಕುಳಿತರೆ ಆಕೆ ಮುಟ್ಟು ನಿಲ್ಲುವ ದಿನಗಳು ಬಂದುಬಿಡುತ್ತವೆ. ಮುಂದೆ ಆಕೆಗೆ ಸಂತಾನ ಕೂಡ ಆಗುವುದಿಲ್ಲ ಆಗ ನಿಮ್ಮ ಜ್ಯೋತಿಷ್ಯ ಏನು ಮಾಡಬಲ್ಲದು ,? ಹಿಂದೆ 14 ವರ್ಷಕ್ಕೆ ಹೆಣ್ಣು ಮಗಳಿಗೆ ಲಗ್ನ ಮಾಡುತ್ತಿದ್ದರು. ಬಹಳಷ್ಟು ಸಂತಾನ ಪ್ರಾಪ್ತಿಯಾಗುತ್ತಿತ್ತು. ಇಂದು ನಮ್ಮ ಸಂವಿಧಾನ 21 ವರ್ಷ ನಿರ್ಧರಿಸಿದೆ. ಕಾರಣ ಹೆಣ್ಣು ಮಗಳಿಗೆ ಮೂವತ್ತು ವರ್ಷ ದಾಟಿದರೆ ಲಗ್ನಕ್ಕಾಗಿ ಹೆಚ್ಚಿಗೆ ಜ್ಯೋತಿಷ್ಯ ನೋಡಬೇಡಿ ಗೋತ್ರ ಭಿನ್ನ ವಾದರೆ ಸಾಕು ಎಂದೆ ಕೆಲ ಅನುಭವಸ್ಥರು ಪಂಡಿತರು ಮದುವೆಯ ವಿಷಯದಲ್ಲಿ ಹೇಳುವುದುಂಟು
ರಾತ್ರಿ ಉಗುರು ತೆಗೆಯಬೇಡಿ ಎಂಬುವುದಕ್ಕೆ ಹಿಂದೆ ನಮ್ಮ ಮನೆಗಳಲ್ಲಿ ವಿದ್ಯುತ್ ಶಕ್ತಿ ಇರುತ್ತಿರಲಿಲ್ಲ ಕೈಗೆ ಗಾಯವಾಗಬಾರದು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಅಮಾವಾಸ್ಯೆ ರಾತ್ರಿ ಹೊರಗೆ ಹೋಗಬಾರದು ಎಂದಾಗ ಕತ್ತಲಲ್ಲಿ ಹಾವು ಚ್ಚೇಳು ಕ್ರೂರ ಪ್ರಾಣಿಗಳು ತಿರುಗುತ್ತಿರುತ್ತವೆ ಕಾರಣ ಹೊರಗೆ ಹೋಗಬಾರದು. ಅರಳಿ ಮರ ರಾತ್ರಿ ಇಂಗಾಲ ಡೈಯಾಕ್ಸೈಡ್ ಬಿಡುಗಡೆ ಮಾಡುತ್ತದೆ ಕಾರಣ ರಾತ್ರಿ ಅದರ ಕೆಳಗೆ ಕೊಡುವುದು ಹಾನಿಕಾರಕ ನಿಷಿದ್ಧ ಎಂದು ಹೇಳಿದ್ದಾರೆ. ಇಂತಹ ಅನೇಕ ನಮ್ಮ ನಂಬಿಕೆಗಳ ಹಿಂದೆ ಅರ್ಥಗಳು ತುಂಬಿವೆ. ಅವನ್ನೆಲ್ಲಾ ವೈಜ್ಞಾನಿಕವಾಗಿ ನಾವು ತಿಳಿದುಕೊಳ್ಳಬೇಕು.