ಸಕ್ಕರೆ ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೂ ಕೂಡ ಸಿಹಿಯನ್ನು ಇಷ್ಟಪಡುವವರು ಎಲ್ಲದಕ್ಕೂ ಸಕ್ಕರೆಯನ್ನು ಹೆಚ್ಚಾಗಿ ಉಪಯೋಗಿಸಲು ಮುಂದಾಗುತ್ತಾರೆ.
ಹಲವು ರೋಗಗಳು ಮತ್ತು ಕಾಯಿಲೆಗಳಿಗೆ ಕಾರಣವಾಗುವ ಅತ್ಯಂತ ಹಾನಿಕಾರಕ ಪದಾರ್ಥಗಳಲ್ಲಿ ಸಕ್ಕರೆಯೂ ಒಂದು. ಮಕ್ಕಳಿಗಂತೂ ಸಕ್ಕರೆ ಪ್ರತಿಯೊಂದು ಆಹಾರವನ್ನು ಉಪಯೋಗಿಸುವಾಗಲು ಬೇಕೆನಿಸುತ್ತದೆ.
ಮಧುಮೇಹಿ ರೋಗಿಗಳು ಸಕ್ಕರೆ ಎಂದರೆ ಬೆಚ್ಚಿಬೀಳುತ್ತಾರೆ. ಅಧ್ಯಯನಗಳ ಪ್ರಕಾರ, ಪ್ರಪಂಚದಾದ್ಯಂತ 70 ಪ್ರತಿಶತದಷ್ಟು ಸಂಸ್ಕರಿಸಿದ ಆಹಾರಗಳಲ್ಲಿ ಸಕ್ಕರೆಯನ್ನು ಸೇರಿಸಲಾಗುತ್ತದೆ ಅಂತೆ. ಸ್ಥೂಲಕಾಯತೆಯ ಹೊರತಾಗಿ, ಯಕೃತ್ತಿನ ಸಮಸ್ಯೆ, ಟೈಪ್ -2 ಮಧುಮೇಹ, ಹೃದಯ ಸಮಸ್ಯೆಗಳು ಕಾಯಿಲೆಗಳನ್ನು ಉಂಟುಮಾಡುವಲ್ಲಿ ಸಕ್ಕರೆಯದ್ದು ಎತ್ತಿದ ಕೈ ಎನಿಸಿಕೊಂಡಿದೆ. ಇದೇ ಕಾರಣಕ್ಕೆ, ಸಕ್ಕರೆಯನ್ನು ಕಡಿಮೆ ಮಾಡುವುದು ಅತಿ ಮುಖ್ಯ ಎನ್ನಬಹುದು.
ಮಧುಮೇಹಿಗಳು ಮಾತ್ರವಲ್ಲದೇ ಆರೋಗ್ಯವಂತರೂ ಕೂಡ ಸಕ್ಕರೆಯನ್ನು ಆದಷ್ಟು ಕಡಿಮೆ ತಿನ್ನಬೇಕು.
ಆರೋಗ್ಯವನ್ನು ಕಾಪಾಡಿಕೊಳ್ಳಲು ನಿರ್ದಿಷ್ಟ ರೀತಿಯ ಆಹಾರ ಸೇವಿಸುವುದು ಅತಿ ಮುಖ್ಯ. ಆರೋಗ್ಯ ಕಾಪಾಡಿಕೊಳ್ಳಬೇಕಿದ್ದರೆ ಸಕ್ಕರೆಯ ಬಗ್ಗೆ ವಿಶೇಷ ಗಮನವಿಟ್ಟುಕೊಳ್ಳಬೇಕು. ಒಂದು ವೇಳೆ ಸಕ್ಕರೆ ಸೇವನೆ ಮಾಡದೇ ಇದ್ದರೆ ಇನ್ನೂ ಒಳ್ಳೆಯದು. ನೈಸರ್ಗಿಕ ಸಕ್ಕರೆಗಳು ಈಗಾಗಲೇ ತರಕಾರಿಗಳು, ಹಣ್ಣುಗಳು ಮತ್ತು ಡೈರಿ ಉತ್ಪನ್ನಗಳಂತಹ ಆಹಾರಗಳಲ್ಲಿ ಕಂಡುಬರುತ್ತವೆ, ಅದರಲ್ಲಿ ಸಿಗುವ ಸಕ್ಕರೆಯ ಪ್ರಮಾಣ ನಮ್ಮ ದೇಹಕ್ಕೆ ಸಾಕಾಗುತ್ತದೆ.
ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ವಿಶೇಷವಾಗಿ ನೀವು ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ನಿಂದ ತುಂಬಿದ ಆಹಾರವನ್ನು ಸೇವಿಸಬೇಕಾಗುತ್ತದೆ. ನೀವು ಸಕ್ಕರೆಯನ್ನು ಸೇವಿಸಿದಾಗ, ಇದು ನಿಮ್ಮ ಅಂಗಗಳ ಸುತ್ತಲೂ ಅಂಟಿಕೊಳ್ಳುವ ಒಳಾಂಗಗಳ ಕೊಬ್ಬನ್ನು ಹೆಚ್ಚಿಸುತ್ತದೆ,
ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದಂತಹ ವಿವಿಧ ಕಾಯಿಲೆಗಳು ಸಕ್ಕರೆ ಭರಿತ ಆಹಾರದಿಂದ ಬರುತ್ತದೆ.
ಹಾಗಿದ್ದರೆ ಇನ್ನೇಕೆ ತಡ, ಸಕ್ಕರೆಯಿಂದ ದೂರವಿದ್ದು, ಉತ್ತಮ ಆರೋಗ್ಯ ಪಡೆದುಕೊಳ್ಳಿ. ಸಕ್ಕರೆಯ ಬದಲು ಬೆಲ್ಲವನ್ನು ಉಪಯೋಗಿಸಬಹುದು ಅದರಿಂದ ಅಷ್ಟೇನು ಹಾನಿಕಾರಕವಿಲ್ಲ.