ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಫೈನಲ್ನಲ್ಲಿ 209 ರನ್ಗಳ ಹೀನಾಯ ಸೋಲುಂಡ ಟೀಮ್ ಇಂಡಿಯಾ, ಒಂದು ತಿಂಗಳ ವಿರಾಮದ ಬಳಿಕ ಟೀಮ್ ಇಂಡಿಯಾ ಮತ್ತೆ ಕ್ರಿಕೆಟ್ ಅಂಗಣಕ್ಕೆ ಮರಳಲು ಸಜ್ಜಾಗಿದೆ.
ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡು ಒಂದು ವಾರ ಮುಂಚಿತವಾಗಿ ಕೆರಿಬಿಯನ್ ನಾಡಿಗೆ ತೆರಳಿರುವ ಟೀಮ್ ಇಂಡಿಯಾ 2 ಪಂದ್ಯಗಳ ಟೆಸ್ಟ್ ಕ್ರಿಕೆಟ್, 3 ಪಂದ್ಯಗಳ ಒಡಿಐ ಕ್ರಿಕೆಟ್ ಮತ್ತು 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಮೊದಲಿಗೆ ಟೆಸ್ಟ್ ಸರಣಿ ನಡೆಯಲಿದ್ದು, ಜುಲೈ 12ರಂದು ಪ್ರಥಮ ಪಂದ್ಯ ಶುರುವಾಗಲಿದೆ.
ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡ ಅಭ್ಯಾಸ ಪಂದ್ಯ ಆಡಲಿದೆ. ಜುಲೈ 6 ರಂದು ವೆಸ್ಟ್ ಇಂಡೀಸ್ ತಂಡದ ವಿರುದ್ಧ ಟೀಮ್ ಇಂಡಿಯಾ ಅಭ್ಯಾಸ ಪಂದ್ಯವನ್ನಾಡಲಿದ್ದು, ಈ ಮೂಲಕ ಕೆರಿಬಿಯನ್ ಪರಿಸ್ಥಿತಿಗೆ ಹೊಂದಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ಅಲ್ಲಿನ ಕಾಲಮಾನದ ಪ್ರಕಾರ ಬೆಳಗ್ಗೆ 10 ಗಂಟೆಗೆ ಶುರುವಾಗಲಿದೆ. ಆದರೆ, ಇದು ಭಾರತೀಯ ಕಾಲ ಮಾನದ ಪ್ರಕಾರ ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ. ಏಕದಿನ ಪಂದ್ಯ ಭಾರತೀಯ ಕಾಲ ಮಾನದ ಪ್ರಕಾರ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಅಂತೆಯೆ ಐದು ಟಿ20 ಪಂದ್ಯಗಳು ಭಾರತೀಯ ಕಾಲ ಮಾನದ ಪ್ರಕಾರ ರಾತ್ರಿ 8 ಗಂಟೆಗೆ ಶುರುವಾಗಲಿದೆ.
ಭಾರತ ಟೆಸ್ಟ್ ತಂಡ :
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.
ಭಾರತದ ಒಡಿಐ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದುಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಯದೇವ್ ಉನದ್ಕಟ್, ಮೊಹಮ್ಮದ್. ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ನೇರ ಪ್ರಸಾರ ವಿವರ:
ಟೆಸ್ಟ್ ಸರಣಿಯ ಮೊದಲ ಪಂದ್ಯ ಡೊಮಿನಿಕಾದಲ್ಲಿ ಜುಲೈ 12ರಿಂದ 16ರವರೆಗೆ ನಡೆಯಲಿದೆ. ಟ್ರಿನಿಡಾಡ್ನಲ್ಲಿ ದ್ವಿತೀಯ ಟೆಸ್ಟ್ ಜುಲೈ 20ರಿಂದ 24ರವರೆಗೆ ಆಯೋಜನೆ ಆಗಲಿದೆ. ಈ ಎರಡೂ ಟೆಸ್ಟ್ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಶುರುವಾಗಲಿವೆ. ಬಳಿಕ ಏಕದಿನ ಕ್ರಿಕೆಟ್ ಸರಣಿ ಶುರುವಾಗಲಿದ್ದು, ಮೊದಲ ಎರಡು ಪಂದ್ಯಗಳು ಬಾರ್ಬೆಡೋಸ್ನಲ್ಲಿ, ಜುಲೈ 27 ಮತ್ತು 29ರಂದು ನಡಡೆಯಲಿವೆ. ಅಂತಿಮ ಒಡಿಐ ಪಂದ್ಯ ಟ್ರಿನಿಡಾಡ್ನಲ್ಲಿ ಆಗಸ್ಟ್ 1ರಂದು ನಡೆಯಲಿದೆ. ಟಿ20 ಸರಣಿಯ 5 ಪಂದ್ಯಗಳು ಆಗಸ್ಟ್ 3ರಿಂದ 13ರವರೆಗೆ ನಡೆಯಲಿವೆ. ಒಡಿಐ ಪಂದ್ಯಗಳು ಭಾರತೀಯ ಕಾಲಮಾನ 7:30ಕ್ಕೆ ಶುರುವಾದರೆ, ಟಿ20 ಪಂದ್ಯಗಳು ರಾತ್ರಿ 11:30ಕ್ಕೆ ಆರಂಭವಾಗಲಿವೆ. ಎಲ್ಲ ಪಂದ್ಯಗಳ ನೇರ ಪ್ರಸಾರ (ಲೈವ್ ಸ್ಟ್ರೀಮಿಂಗ್) ದೂರದರ್ಶನ್ ನೆಟ್ವರ್ಕ್ನ ಡಿಡಿ ಸ್ಪೋರ್ಟ್ಸ್ನಲ್ಲಿ ಮಾತ್ರ ನೇರಪ್ರಸಾರ ಕಾಣಲಿದೆ. ಅದುಬಿಟ್ಟರೆ ಆನ್ಲೈನ್ನಲ್ಲಿ ವೀಕ್ಷಿಸುವವರು ಜಿಯೋ ಸಿನಿಮಾ ಮತ್ತು ಫ್ಯಾನ್ಕೋಡ್ ಆ್ಯಪ್ ಮೂಲಕ ನೋಡಬಹುದು.