ನಮ್ಮ ಬಾಯಿ ವಾಸನೆ ಬರುತ್ತಿರುತ್ತದೆ ಆದರೆ ಅದರ ಬಗ್ಗೆ ನಮಗೆ ಗೊತ್ತೆಇರುವುದಿಲ್ಲ. ಆದರೆ, ನಮ್ಮ ಸುತ್ತಮುತ್ತಲಿರುವವರಿಗೆ ನಮ್ಮಿಂದ ಕಷ್ಟವಾಗುತ್ತಿರುತ್ತದೆ. ಇದನ್ನು ಹೇಳಲು ಅವರು ಪರದಾಡುತ್ತಿರುತ್ತಾರೆ. ಕೆಲವೊಂದು ಬಾರಿ ನೇರವಾಗಿ ಹೇಳಿಬಿಡುತ್ತಾರೆ. ಇದರಿಂದ ನಮಗೆ ಬೇಸರ ಆಗುವ ಸಾಧ್ಯತೆ ಕೂಡ ಇರುತ್ತದೆ.
ಇನ್ನೂ ಕೆಲವರಿಗೆ ಬಾಯಿ ದುರ್ಗಂಧ ಬರುವ ಸಮಸ್ಯೆ ಗೊತ್ತಿಇರುತ್ತದೆ. ಇದರಿಂದ ಮತ್ತೊಬ್ಬರ ಬಳಿ ಮಾತನಾಡಲು ಕೂಡ ಅವರಿಗೆ ಹಿಂಜರಿಯುಂಟಾಗುತ್ತದೆ. ಅಷ್ಟೇ ಅಲ್ಲ ಬಾಯಿ ದುರ್ವಾಸನೆ ಬರುತ್ತಿದ್ದವರೊಂದಿಗೆ ಸಮೀಪದಲ್ಲಿ ನಿಂತು ಮಾತನಾಡಲು ಇತರರಿಗೂ ಹಿಂಸೆ ಆಗುತ್ತದೆ. ಹಾಗಾಗಿ ಇದೊಂದು ಹೇಳಿಕೊಳ್ಳಲಾಗದ ದೊಡ್ಡ ಸಂಕಟವಾಗಿ ಬಿಡುತ್ತದೆ.
ಇದಕ್ಕೆ ಮುಖ್ಯ ಕಾರಣ ಹಲ್ಲು ಮತ್ತು ಬಾಯಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು. ವೈದ್ಯರು ಸಾಮಾನ್ಯವಾಗಿ ದಿನಕ್ಕೆ 2 ಬಾರಿ ಹಲ್ಲುಜ್ಜಲು ತಿಳಿಸಿರುತ್ತಾರೆ. ಆದರೆ ಅನೇಕ ಮಂದಿ ಈ ಕ್ರಮವನ್ನು ಅನುಸರಿಸುವುದಿಲ್ಲ. ಬೆಳಿಗ್ಗೆ ಮಾತ್ರ ಬ್ರಷ್ ಮಾಡಿ ಸುಮ್ಮನೆ ಆಗುತ್ತಾರೆ ಅಲ್ಲದೆ ಯಾವುದೇ ಆಹಾರ ಪದಾರ್ಥಗಳನ್ನು ತಿಂದಾದ ಮೇಲೆ ಬಾಯಿಯನ್ನು ನೀರಿನಿಂದ ಮುಕ್ಕಳಿಸದೆ ಹಾಗೆ ಬಿಡುತ್ತಾರೆ. ಈ ಕಾರಣದಿಂದ ಬ್ಯಾಕ್ಟೀರಿಯಾವು ಬಾಯಿಯಲ್ಲಿ ಬೆಳೆಯಲು ಪ್ರಾರಂಭವಾಗುತ್ತದೆ. ನಂತರ ಅವರ ಬಾಯಿಯಲ್ಲಿ ಕಟುವಾದ ವಾಸನೆ ಬರಲು ಪ್ರಾರಂಭವಾಗುತ್ತದೆ.
ಬಾಯಿ ದುರ್ವಾಸನೆಯು ಬರುವುದು ಕೇವಲ ಈ ಕಾರಣಕ್ಕೆ ಅಷ್ಟೇ ಅಲ್ಲ. ಇದರ ಹೊರತಾಗಿ ಇತರ ಹಲವು ಕಾರಣಗಳಿಂದ ಕೂಡ ಉಂಟಾಗುತ್ತದೆ ನಿಮ್ಮ ಅಂಗಗಳಲ್ಲಿನ ಸಮಸ್ಯೆಗಳು ಕೂಡ ಕೆಟ್ಟ ಉಸಿರಾಟವನ್ನು ಉಂಟುಮಾಡಬಹುದಾದ ಸಾಧ್ಯತೆ ಇರುತ್ತದೆ.
ನಮ್ಮ ದೇಹದಲ್ಲಿರುವ ಶ್ವಾಸಕೋಶದ ಸೋಂಕಿನಿಂದಾಗಿ ಕೆಟ್ಟ ಉಸಿರು ಹೊರಬರವ ಸಾಧ್ಯತೆ ಕೂಡ ಇರುತ್ತದೆ. ವಾಸ್ತವವಾಗಿ, ಶ್ವಾಸಕೋಶದಲ್ಲಿ ಯಾವುದೇ ಸೋಂಕು ಉಂಟಾದಾಗ, ಲೋಳೆಯು ಹಾಗೆ ಹೊರಬರಲು ಪ್ರಾರಂಭವಾಗಿ ದುರ್ವಾಸನೆ ಬೀರುತ್ತದೆ. ಇದರಿಂದ ಬಾಯಿಯಲ್ಲಿ ದುರ್ವಾಸನೆ ಉಂಟಾಗುತ್ತದೆ.
ಅಲ್ಲದೆ ಕೆಲವು ಸಲ ಪಿತ್ತಜನಕಾಂಗದ ಕಾಯಿಲೆಯು ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು. ಯಕೃತ್ತು ನಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಆದರೆ ಇದು ಸಂಭವಿಸದಿದ್ದಾಗ, ರಕ್ತದಲ್ಲಿ ವಿಷಗಳು ಸಂಗ್ರಹವಾಗುತ್ತವೆ. ಇದರಿಂದ ಬಾಯಿಯಿಂದ ದುರ್ವಾಸನೆ ಬರಲಾರಂಭಿಸಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಕಿಡ್ನಿ ಕಾಯಿಲೆ ಇದ್ದರೆ, ಈ ಸಮಯದಕ್ಕಿ ಬಾಯಿ ಒಣಗುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಕಿಡ್ನಿಗಳು ಉತ್ತಮ ಆರೋಗ್ಯದಲ್ಲಿರುವಾಗ ಯೂರಿಯಾವನ್ನು ಸುಲಭವಾಗಿ ಫಿಲ್ಟರ್ ಮಾಡುತ್ತವೆ. ಆದರೆ ಯಾವುದೇ ರೀತಿಯ ಮೂತ್ರಪಿಂಡದ ಸಮಸ್ಯೆಯು ಯೂರಿಯಾವನ್ನು ಫಿಲ್ಟರ್ ಮಾಡಲು ಅಸಮರ್ಥತೆಯಿಂದ ಬಾಯಿಯ ದುರ್ವಾಸನೆ ತರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ನಾವು ಬಾಯಿ ವಾಸನೆ ಎಂದು ತಿಳಿದು ಕೂಡಲೇ ಮುಜುಗರ ಪಡದೇ ವೈದ್ಯರನ್ನು ಸಂಪರ್ಕಿಸಿ, ಅದಕ್ಕೆ ಬೇಕಾದಂತ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಮುಂದೆಾಗುವ ಅನಾಹುತವನ್ನು ತಪ್ಪಿಸಬಹುದು.