ಮನಸ್ಸಿಗೆ ಕಿರಿಕಿರಿ, ನೆನಪಿನ ಶಕ್ತಿಯ ಸಮಸ್ಯೆಗಳು, ವಿವರಿಸಲಾಗದ ನೋವು ಮತ್ತು ಯಾತನೆ ಮತ್ತು ಪ್ರತ್ಯೇಕತೆಯ ಭಾವನೆಗಳು ಕಂಡುಬಂದರೆ ಇವುಗಳೆಲ್ಲ ಆಯಾಸದ ಸೂಚನೆಗಳಾಗಿವೆ. ಈ ಆಯಾಸಕ್ಕೆ ಕಾರಣಗಳು ತುಂಬಾ ಇದ್ದರು, ಬದಲಿಸಬೇಕಾದ ಜೀವನಶೈಲಿ ಅಂಶಗಳ ಬಗ್ಗೆ ಗಮನ ನೀಡಬೇಕಾಗಿದೆ.
ಉತ್ತಮ ನಿದ್ರೆಯನ್ನು ಪಡೆಯಲು ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಪ್ರೀತಿಪಾತ್ರರ ಜೊತೆ ತೊಡಗಿ ಮಾತನಾಡಿ, ಕೆಲವು ಪುಸ್ತಕಗಳನ್ನು ಓದಿ ಮತ್ತು ಯೋಗ ನಿದ್ರಾದಂತಹ ಕೆಲವು ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಮಲಗುವ ಕೋಣೆಯಲ್ಲಿ ಪರಿಪೂರ್ಣ ಕತ್ತಲೆಯ ಪರಿಸರವನ್ನು ರಚಿಸಿ ಮತ್ತು ಉತ್ತಮ ಗುಣಮಟ್ಟದ ಹಾಸಿಗೆಯನ್ನು ಉಪಯೋಗಿಸಿದರ ಆಯಾಸವನ್ನು ಸ್ವಲ್ಪಮಟ್ಟಿಗೆ ದೂರ ಮಾಡಬಹುದು. ಅಲ್ಲದೆ ರಾತ್ರಿಯಲ್ಲಿ ಉತ್ತಮವಾಗಿ ನಿದ್ರೆ ಮಾಡಲು ದಿನವಿಡೀ ಇತರೆ ಕಾರ್ಯಗಳಲ್ಲಿ ತೊಡಗಿಕೊಂಡರೆ ಉತ್ತಮ.
ನಿಮ್ಮಿಷ್ಟದ ಹವ್ಯಾಸದಲ್ಲಿ ರೂಡಿಸಿಕೊಂಡು, ಪ್ರಕೃತಿಯ ನಡುವೆ ವಾಕಿಂಗ್, ವ್ಯಾಯಾಮ ಅಥವಾ ಧ್ಯಾನ ಮಾಡುವ ಮೂಲಕ ವಿಶ್ರಾಂತಿ ಪಡೆಯಲು ಸಮಯ ತೆಗೆದುಕೊಂಡರೆ ಮನಸ್ಸು ಶಾಂತವಾಗಿರುತ್ತದೆ.
ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ನಟ್ಸ್, ಸೀಡ್ಸ್ಗಳೊಂದಿಗೆ ನಿಮ್ಮ ಆಹಾರವು ಪೋಷಕಾಂಶಗಳಿಂದ ಕೂಡಿದೆಯೇ? ಅಥವಾ ಇದು ಅಲ್ಟ್ರಾ-ಸಂಸ್ಕರಿಸಿದ ಮತ್ತು ಸಕ್ಕರೆಯ ಅಂಶಗಳನ್ನು ಒಳಗೊಂಡಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಆರೋಗ್ಯಕರ ಕಾರ್ಬೋಹೈಡ್ರೇಟ್ಗಳು, ಕೊಬ್ಬುಗಳು, ಪ್ರೋಟೀನ್ಗಳು, ಕಡಿಮೆ ಮಟ್ಟದ ವಿಟಮಿನ್ ಬಿ 12 ಮತ್ತು ಡಿ ಸಹ ಬಳಲಿಕೆಗೆ ಕಾರಣವಾಗಬಹುದು.
ಊಟದ ಸಮಯವೂ ಕೂಡ ಮಹತ್ವದ ಆಗಿರುತ್ತದೆ. ಆದಷ್ಟು ನೀವು ಮಲಗುವ ಮತ್ತು ಊಟ ಮಾಡುವ ನಡುವೆ ಸಾಕಷ್ಟು ಸಮಯದ ಅಂತರವಿರುವಂತೆ ನೋಡಿಕೊಳ್ಳಿ. ಮಲಗುವ ಮುನ್ನ ಊಟ ಮಾಡಿದರೆ, ನಿಮ್ಮ ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ಸಿಗುವುದಿಲ್ಲ. ಇದರಿಂದ, ಮರುದಿನ ನಿಮಗೆ ಭಾರವಾದ ಮತ್ತು ಆಲಸ್ಯ ಉಂಟುಮಾಡಬಹುದು.
ಸಾಕಷ್ಟು ನೀರು ಕುಡಿಯುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ಅಧಿಕ ತೂಕ ಅಥವಾ ಬೊಜ್ಜು ನಿದ್ರೆ ಮತ್ತು ಇತರ ಆರೋಗ್ಯದ ಅಪಾಯಗಳನ್ನು ಹೆಚ್ಚಿಸಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ನೀವು ಅದನ್ನು ಹೇಗೆ ಮಾಡುತ್ತೀರಿ ಎಂಬುದು ಅಷ್ಟೇ ಮುಖ್ಯ. ತುಂಬಾ ತಡವಾಗಿ ವ್ಯಾಯಾಮ ಮಾಡುವುದು ಅಥವಾ ಅತಿಯಾದ ತರಬೇತಿ ಪಡೆಯುವುದು ಸರಿಯಲ್ಲ. ವ್ಯಾಯಾಮಗಳು ನಿಮಗೆ ಚೈತನ್ಯವನ್ನುಂಟುಮಾಡುವ ಹಾಗೆ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು.
ಟೈಪ್ 2 ಡಯಾಬಿಟಿಸ್, ಥೈರಾಯ್ಡ್ ಸಂಬಂಧಿತ ಸಮಸ್ಯೆಗಳು, ನಿದ್ರೆಯ ವೇಳೆ ಉಸಿರಾಟದ ತೊಂದರೆ, ನಿದ್ರಾಹೀನತೆ, ಮೂತ್ರಪಿಂಡದ ಸಮಸ್ಯೆಗಳು, ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಗಳು ಹೀಗೆ ಹಲವಾರು ಆರೋಗ್ಯ ಸಮಸ್ಯೆಗಳು ಆಯಾಸಕ್ಕೆ ಕಾರಣವಾಗಬಹುದು. ಯಾವದರಿಂದ ನಿಮಗೆ ತೊಂದರೆ ಆಗುತ್ತಿದೆ ಎಂಬುದನ್ನು ನಿರ್ಧರಿಸಲು ವೈದ್ಯರ ಸಲಹೆ ಪಡೆದು ಅದರಂತೆ ನಡೆದುಕೊಳ್ಳುವುದು ಉತ್ತಮ.