ಮಂಗಳೂರು: ಹಿಂದೂ ಜಾಗರಣ ವೇದಿಕೆಯು ಸುಮಾರು 40 ವರುಷಗಳಿಂದ ಕರ್ನಾಟಕದಾದ್ಯಂತ ಹಿಂದು ಧರ್ಮದ ರಕ್ಷಣೆ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಹಾಗೂ ಹಿಂದು ಧರ್ಮದ ರಕ್ಷಣೆಗೋಸ್ಕರ ನಿರಂತರವಾದ ಹೋರಾಟವನ್ನು ನಡೆಸಿಕೊಂಡು ಬಂದಿದೆ ಎಂದು ಹಿಂದು ಜಾಗರಣ ವೇದಿಕೆ ಸಹ ಸಂಯೋಜಕ ಮಹೇಶ್ ಕಡಗದಾರು ಹೇಳಿದರು.
ನಗರದ ವಿಶ್ವಹಿಂದೂ ಪರಿಷತ್ ನ ವಿಶ್ವಶ್ರೀಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದು ವಿರೋಧಿ ನೀತಿಯನ್ನು ತನ್ನ ಕಾರ್ಯಸೂಚಿಯಲ್ಲಿ ಅಳವಡಿಸಿಕೊಂಡಿದ್ದು ಇದರ ಮುಂದುವರಿದ ಭಾಗವಾಗಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಹಿಂದು ಕಾರ್ಯಕರ್ತರನ್ನು ಹಾಗೂ ಹಿಂದು ಸಮಾಜವನ್ನು ಗುರಿಯಾಗಿಸಿಕೊಂಡು ಹಲವಾರು ಹಿಂದು ವಿರೋಧಿ ಕೆಲಸಗಳನ್ನು ಮಾಡಿದೆ.
ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿರುತ್ತದೆ, ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಹಿಂದು ಕಾರ್ಯಕರ್ತರ ಮೇಲೆ ಮುಸಲ್ಮಾನ ಪುಂಡರಿಂದ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದ್ದು, ಹಿಂದು ಹೆಣ್ಣು ಮಕ್ಕಳ ಹತ್ಯೆ ಹಾಗೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದೆ.
ಹಿಂದು ಹೆಣ್ಣು ಮಕ್ಕಳ ಮೇಲೆ ಮುಸಲ್ಮಾನ ಯುವಕರಿಂದ ಕಿರುಕುಳ, ಉಗ್ರಗಾಮಿಗಳಿಗೆ ಸಹಾಯ, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದಂತಹ ಮತಾಂದ ಮುಸಲ್ಮಾನ ಯುವಕರ ಮೇಲೆ ಯಾವುದೇ ಕೇಸು ಮಾಡದಿರುವುದು. ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವಂತಹ ಅಕ್ರಮ ಗೋಸಾಘಾಟಿ, ಗಾಂಜಾ ಮಾಫಿಯ, ಮತಾಂತರ ಹಾಗೂ ಇನ್ನೀತರ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಣ ಮಾಡದಿರುವುದು ಹಾಗೂ ಕಾಂಗ್ರೇಸ್ ಸರಕಾರದಲ್ಲಿರುವಂತಹ ಸಚಿವರುಗಳು ನಿರಂತರವಾಗಿ ಹಿಂದು ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ವಿಚಾರಗಳು ಜಗಜ್ಜಾಹಿರವಾಗಿವೆ.
ರಾಜ್ಯದ ಮುಖ್ಯ ಮಂತ್ರಿಗಳು ಓಟ್ ಬ್ಯಾಂಕಿಗಾಗಿ ಶುದ್ದೀಕರಣದ ರಾಜಕೀಯವನ್ನು ಮಾಡುತ್ತಿದ್ದಾರೆ. ಕಾಂಗ್ರೇಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಹಿಂದು ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿಕೆಯನ್ನು ನೀಡಿದ್ದು ಈ ಹೇಳಿಕೆಯನ್ನು ಸಮರ್ಥಿಸಿ ರಾಜ್ಯ ಸರಕಾರವು ಹಿಂದು ಸಂಘಟನೆಗಳ ಕಾರ್ಯಕರ್ತರಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿದರೆ ರಾಜ್ಯ ಸರಕಾರವು ಕಾನೂನಿನ ಎಲ್ಲಾ ವಿಚಾರಗಳನ್ನು ಗಾಳಿಗೆ ತೂರಿ ಹಿಂದು ವಿರೋಧಿ ಕೆಲಸವನ್ನು ಮಾಡುತ್ತಿದೆ. ಹಿಂದುತ್ವಕ್ಕೋಸ್ಕರ, ಧರ್ಮಕ್ಕೋಸ್ಕರ ಕೆಲಸವನ್ನು ಮಾಡುತ್ತಿರುವಂತಹ ಹಿಂದು ಸಂಘಟನೆಯ ಕಾರ್ಯಕರ್ತರನ್ನು, ಮುಖಂಡರನ್ನು ಮತ್ತು ಪ್ರಮುಖರನ್ನು ಗುರಿಯಾಗಿಸಿಕೊಂಡು ಅವರ ಮನಸ್ಥಿತಿಯನ್ನು ಹಾಗೂ ಮಾನಸಿಕ ಧೈರ್ಯವನ್ನು ರಾಜ್ಯ ಸರಕಾರವು ತನ್ನ ಆಡಳಿತ ಯಂತ್ರವನ್ನು ಉಪಯೋಗಿಸಿಕೊಂಡು ಕೆಲಸವನ್ನು ನಿರ್ವಹಿಸುತ್ತಿದೆ.
ಹಿಂದು ಕಾರ್ಯಕರ್ತರ ಮನೆಗಳಿಗೆ ಮದ್ಯರಾತ್ರಿ ವೇಳೆಯಲ್ಲಿ ಪೋಲಿಸರು ಮನೆಗೆ ಬಂದು ಮನೆಯ ಬಾಗಿಲನ್ನು ಬಡಿಯುವಂತಹ ಕೆಲಸ, ಹಿಂದು ಕಾರ್ಯಕರ್ತರ ಮೇಲೆ ಅನಾವಶ್ಯಕವಾಗಿ ಭಾರತೀಯ ದಂಡ ಸಂಹಿತೆಯ ಕಲಂ 107 ಮತ್ತು 110 ರಂತೆ ಪ್ರಕರಣಗಳನ್ನು ವಿನಾಕಾರಣ ದಾಖಲಿಸಿ ಮಾನಸಿಕ ಹಿಂಸೆಯನ್ನು ನೀಡುವುದು, ಗಡಿಪಾರು ಮಾಡುವುದು ಹಾಗೂ ಹಿಂದು ಕಾರ್ಯಕರ್ತರನ್ನು ಗಡಿಪಾರು ಮಾಡುವಂತಹ ಹೀನ ಕೆಲಸವನ್ನು ರಾಜ್ಯ ಸರಕಾರ ನಡೆಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತವು ಹಿಂದು ಜಾಗರಣ ವೇದಿಕೆಯ ಮುಖಂಡರುಗಳಾದಂತರ ಮತ್ತೂರಿನ ದಿರೇಶ್ ,ಯಶೋಧರ ಬಳಾಲು, ಅವಿನಾಶ್ ಮರುಷರ ಕಟ್ಟೆ, ಪ್ರವೇಶ್ ಹಾಗೂ ವಿಟ್ಲದ ಹಾಗೂ ಅಶ್ಚಯ ರಜಪೂತ್ ರವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿರುತ್ತದೆ. ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗವು ದಕ್ಷಿಣ ಕನ್ನಡ ಜಿಲ್ಲಾಡಳಿತದ ಕ್ರಮವನ್ನು ಉಗ್ರವಾಗಿ ಖಂಡಿಸುತ್ತದೆ.
ಹಿಂದು ಜಾಗರಣ ವೇದಿಕೆ ತನ್ನ 40 ವರ್ಷಗಳ ಹೊರಾಟದಲ್ಲಿ ತನ್ನ ಕಾರ್ಯಕರ್ತರ ಮೇಲೆ ಹಾಕಿದಂತಹ ಕೇಸುಗಳು, ನೀಡಿದಂತಹ ಮಾನಸಿಕ ಹಿಂಸೆಗಳನ್ನು ಮೆಟ್ಟಿ ನಿಂತು ಕಾರ್ಯಕರ್ತರನ್ನು ರಕ್ಷಿಸಿರುವ ಸಂಘಟನೆಯಾಗಿರುತ್ತದೆ. ಹಾಗೂ ಇಂತಹ ಗೊಡ್ಡು ಬೆದರಿಕೆಗಳಿಗೆ ಯಾವುದೇ ರೀತಿಯಲ್ಲಿ ಹೆದರುವಂತಹ ಸಂಘಟನೆಯಾಗಿರುವುದಿಲ್ಲ. ಒಂದು ಜಾಗರಣ ವೇದಿಕೆಯು ತನ್ನ ಕಾರ್ಯಕರ್ತರನ್ನು ಗಡಿಪಾರು ಮಾಡಿದಂತಹ ವಿಚಾರವನ್ನು ಜನರ ಮುಂದೆ ಇಟ್ಟು ಅಂದೋಲನವನ್ನು ನಡೆಸುತ್ತದೆ ಹಾಗೂ ಜಾಗರಣ ವೇದಿಕೆಯ ಕಾರ್ಯಕರ್ತರ ಮೂಲಭೂತ ಹಕ್ಕುಗಳನ್ನು ಹರಣ ಮಾಡಿ ಗಡಿವಾರು ಮಾಡಿದಂತಹ ಜಿಲ್ಲಾಡಳಿತದ ಆದೇಶವನ್ನು ಪ್ರಶ್ನಿಸಿ ಕಾನೂನಿನಡಿಯಲ್ಲಿ ಹೋರಾಟವನ್ನು ಮಾಡಲಿದೆ.
ಈ ಸಂದರ್ಭ ಹಿಂದುಜಾಗರಣ ವೇದಿಕೆಯ ರವಿರಾಜ್ ಶೆಟ್ಟಿ, ಹರೀಶ್ ಶಕ್ತಿನಗರ, ಹರ್ಷಿತ್ ಮಂಗಳೂರು, ನರಸಿಂಹ ಮಾಣಿ ಉಪಸ್ಥಿತರಿದ್ದರು.