ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಈ ವೇಳೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿದೆ. ಇಂದಿನ ರಾಜಕೀಯ, ವಿದೇಶ, ಕ್ರೀಡೆ, ಹವಾಮಾನ ವರದಿಗಳ ಸಣ್ಣ ಜಲಕ್ ಇಲ್ಲಿದೆ.
ಉಭಯ ಪಕ್ಷಗಳಿಂದ ಭರ್ಜರಿ ರೋಡ್ ಶೋ, ಸಭೆ, ಸಾರ್ವಜನಿಕ ಸಮಾವೇಶಗಳ ನಡುವೆ ಇಂದು ಕಾಂಗ್ರೆಸ್ ತನ್ನ ʼಆರನೇ ಗ್ಯಾರಂಟಿʼಯನ್ನು ಘೋಷಣೆ ಮಾಡಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ., ಆಶಾ ಕಾರ್ಯಕರ್ತರಿಗೆ 8 ಸಾವಿರ ರೂ., ಬಿಸಿಯೂಟ ನೌಕರರಿಗೆ 5 ಸಾವಿರ ರೂ. ವೇತನ ನೀಡುವುದಾಗಿ ತಿಳಿಸಿದೆ.
ಚುನಾವಣೆ ಜಟಾಪಟಿ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಷಪೂರಿತ ಹಾವು’ ಎಂದು ವಾಗ್ದಾಳಿ ನಡೆಸಿದ ಬೆನ್ನಲ್ಲೇ ಅವರ ಪುತ್ರ ಹಾಗೂ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಮೋದಿ ಅವರನ್ನು ಪರೋಕ್ಷವಾಗಿ ‘ನಾಲಾಯಕ್’ ಎಂದು ಕರೆದಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ದ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ದಾಖಲು ಮಾಡಿದೆ.
ರಾಜಕೀಯ ಕಿತ್ತಾಟಗಳ ನಡುವೆ ಭಾರತ ಕಲಹ ಪೀಡಿತ ಸುಡಾನ್ ರಾಷ್ಟ್ರದ ಪ್ರಜೆಗಳಿಗೆ ಸಹಾಯಹಸ್ತ ಚಾಚಿದೆ. ಕಲಹ ಪೀಡಿತ ರಾಷ್ಟ್ರದಿಂದ ಇಂದು ಒಟ್ಟು 186 ಭಾರತೀಯರನ್ನು ಆಪರೇಷನ್ ಕಾವೇರಿ ಅಡಿಯಲ್ಲಿ ಕೊಚ್ಚಿಗೆ ಕರೆತರಲಾಗಿದೆ. ಆಪರೇಷನ್ ಕಾವೇರಿ ಅಡಿಯಲ್ಲಿ ಭಾರತ ಸರ್ಕಾರವು ಸುಮಾರು 2500 ಭಾರತೀಯ ಮೂಲದ ಪ್ರಯಾಣಿಕರನ್ನು ಸುಡಾನ್ನಿಂದ ಸ್ಥಳಾಂತರಿಸಲಾಗಿದೆ.
Operation Kaveri: 2,500 Indians Rescued From Sudan – Including a 102-Year-Old https://t.co/AoGI1QFWQt
— Sputnik India (@Sputnik_India) May 1, 2023
ಇಷ್ಟೆಲ್ಲದರ ನಡುವೆ ದೇಶದಲ್ಲಿ ಜಿಎಸ್ ಟಿ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಅತಿಹೆಚ್ಚು ಮೊತ್ತ ಸಂಗ್ರಹವಾಗಿದೆ ಎಂದು ಕೇಂದ್ರೀಯ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. 2023ರ ಏಪ್ರಿಲ್ ನಲ್ಲಿ ದಾಖಲೆಯ 1.87 ಲಕ್ಷ ಕೋಟಿ ರೂ. ಜಿಎಸ್ ಟಿ ಹಣ ಸಂಗ್ರಹವಾಗಿದೆ. ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 23ರಷ್ಟು ಜಿಎಸ್ ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ. ಎಲ್ಲಾ ರಾಜ್ಯಗಳ ಪೈಕಿ ಈ ಬಾರಿಯೂ ಮಹಾರಾಷ್ಟ್ರದಿಂದ ಹೆಚ್ಚಿನ ಮೊತ್ತ ಸಂಗ್ರಹವಾಗಿದೆ. ಕಳೆದ ವರ್ಷ 27,495 ಕೋಟಿ ರೂ. ಸಂಗ್ರಹವಾಗಿದ್ದು, ಈ ಬಾರಿ 33,196 ಕೋಟಿ ರೂ. ಸಂಗ್ರಹವಾಗಿದೆ.
👉 #GST revenue collection for April 2023 highest ever at ₹1.87 lakh crore
👉 Gross #GST collection in April 2023 is all time high, ₹19,495 crore more than the next highest collection of ₹1,67,540 crore, in April 2022
Read more ➡️ https://t.co/KGeb6ZLf0D
(1/2) pic.twitter.com/4RmDWG4cJB
— Ministry of Finance (@FinMinIndia) May 1, 2023
ಇನ್ನು ಕ್ರೀಡಾಪ್ರೇಮಿಗಳನ್ನು ಹುಚ್ಚೆಬ್ಬಿಸಿ ಕುಣಿಸುತ್ತಿರುವ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಆಟಗಾರರ ಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಗಾಯಾಳು ಡೇವಿಡ್ ವಿಲ್ಲೀ ಅವರನ್ನು ತಂಡದಿಂದ ಕೈಬಿಟ್ಟಿದ್ದು, ಅವರ ಜಾಗಕ್ಕೆ ಆಲ್ ರೌಂಡರ್ ಕೇದಾರ್ ಜಾಧವ್ ಸೇರಿಕೊಂಡಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಘೋಷಣೆ ಮಾಡಿದೆ.
TWITTER LINK
🔊 ANNOUNCEMENT 🔊
Indian all-rounder Kedar Jadhav replaces injured David Willey for the remainder of #IPL2023.
Welcome back to #ನಮ್ಮRCB, Kedar Jadhav! 🙌#PlayBold @JadhavKedar pic.twitter.com/RkhI9Tvpi1
— Royal Challengers Bengaluru (@RCBTweets) May 1, 2023
ಕ್ರಿಕಟ್ ಸಂಭ್ರಮದ ನಡುವೆ ಸದ್ದಿಲ್ಲದೆ ಭಾರತೀಯ ಅಥ್ಲೀಟ್ ಫೆಡರೇಶನ್ ಆಶ್ರಯದಲ್ಲಿ ತಮಿಳುನಾಡಿನಲ್ಲಿ ನಡೆದ 21ನೇ ರಾಷ್ಟೃೀಯ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಶಿರಸಿಯ ರಕ್ಷಿತ್ ರವೀಂದ್ರ ನಾಯ್ಕ 400 ಮೀ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ ಬಾಚಿಕೊಂಡಿದ್ದಾರೆ. ರಕ್ಷಿತ್ ರವೀಂದ್ರ 400 ಮೀ. ಹರ್ಡಲ್ಸ್ ಅನ್ನು ಕೇವಲ 52.51 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸುವ ಮೂಲಕ ಬೆಳ್ಳಿ ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಕೀಯ ಕಿತ್ತಾಟ, ಕ್ರಿಕೆಟ್ ಆಟಗಳ ನಡುವೆ ದೇಶದಲ್ಲಿ ಮಳೆಯ ಆರ್ಭಟವು ಹೆಚ್ಚಾಗಿದ್ದು, ಮೇ.3ರವರೆಗೆ ದೇಶದ ಹಲವೆಡೆ ಆಲಿಕಲ್ಲಿನ ಸಹಿತ ಭಾರಿ ಮಳೆಯಾಗಲಿದೆ. ರಾಜ್ಯದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ರಾಯಚೂರು, ದಾವಣಗೆರೆ, ಚಾಮರಾಜನಗರ, ರಾಮನಗರ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ತುಮಕೂರು, ಹಾಸನ, ಕೋಲಾರ, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.