ಹೀಟ್ ಸ್ಟ್ರೋಕ್ ಉಂಟಾದರೆ, ಅದರಿಂದ ನಮಗೆ ಗೊಂದಲ, ತಲೆತಿರುಗುವಿಕೆ, ಕಿರಿಕಿರಿ ಮತ್ತು ರೋಗಗ್ರಸ್ತವಾಗುವಿಕೆ ಲಕ್ಷಣಗಳು ಕಾಣಿಸುತ್ತವೆ. ಹಾಗಾದರೆ ಇದನ್ನು ತಡೆಯುವುದು ಹೇಗೆ?
ಹೀಟ್ ಸ್ಟ್ರೋಕ್ ಒಂದು ಗಂಭೀರ ವೈದ್ಯಕೀಯ ಸ್ಥಿತಿಯಾಗಿದೆ. ಇದು ತೀವ್ರವಾದ ಶಾಖದ ಸ್ಥಿತಿಗೆ ದೀರ್ಘಕಾಲ ದೇಹವನ್ನು ಒಡ್ಡಿಕೊಳ್ಳುವುದರಿಂದ, ಅತಿಯಾದ ತಾಪಮಾನದಲ್ಲಿ ತೀವ್ರವಾದ ದೈಹಿಕ ಚಟುವಟಿಕೆ ನಡೆಸುವುದರಿಂದ ಉಂಟಾಗುತ್ತದೆ. ಇದರ ಅಪಾಯಕಾರಿ ಆರೋಗ್ಯ ತೊಡಕುಗಳನ್ನು ತಡೆಗಟ್ಟಲು ತಕ್ಷಣ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯ.
ಅದಕ್ಕೂ ಮೊದಲು ಹೀಟ್ ಸ್ಟ್ರೋಕ್ನ ಲಕ್ಷಣಗಳನ್ನು ತಿಳಿಯುವುದು ಮುಖ್ಯ. ಹೀಟ್ ಸ್ಟ್ರೋಕ್ನ ಪ್ರಾಥಮಿಕ ಲಕ್ಷಣವೆಂದರೆ ದೇಹದ ಉಷ್ಣತೆಯಲ್ಲಿ ಹೆಚ್ಚಳವಾಗುವುದು.
ಹೀಟ್ ಸ್ಟ್ರೋಕ್ನಿಂದ ಹೃದಯ ಬಡಿತ ಹೆಚ್ಚಳವಾಗಿ ತ್ವರಿತ ಉಸಿರಾಟ ಲಕ್ಷಣ ಕಾಣಿಸಿಕೊಳ್ಳುತ್ತದೆ. ಶಾಖದಿಂದಾಗಿ ಚರ್ಮವು ಸಾಮಾನ್ಯವಾಗಿ ಬೆವರುತ್ತದೆ. ಶಾಖದ ಹೊಡೆತದಿಂದ ಚರ್ಮವು ಬಿಸಿಯಾಗುತ್ತದೆ, ಒಣಗುತ್ತದೆ. ಇದು ವಾಕರಿಕೆ, ಬದಲಾದ ಮನಸ್ಥಿತಿ, ವಾಂತಿ ಮತ್ತು ಅತಿಸಾರ, ಜಠರಗರುಳಿನ ರೋಗ ಲಕ್ಷಣ ಉಂಟು ಮಾಡುತ್ತದೆ. ತೀವ್ರ ತಲೆನೋವು, ತಲೆತಿರುಗುವಿಕೆ ಉಂಟಾಗುತ್ತದೆ. ಶಾಖದ ಹೊಡೆತವು ಸ್ನಾಯು ಸೆಳೆತ, ದೌರ್ಬಲ್ಯ ಮತ್ತು ಆಯಾಸ ಉಂಟು ಮಾಡುತ್ತದೆ.
ಹೀಟ್ ಸ್ಟ್ರೋಕ್ ಸಮಸ್ಯೆಯನ್ನು ದೂರ ಮಾಡಲು. ಹೀಟ್ ಸ್ಟ್ರೋಕ್ ಪೀಡಿತ ವ್ಯಕ್ತಿಯನ್ನು ಹವಾನಿಯಂತ್ರಿತ ಸ್ಥಳಕ್ಕೆ ಕರೆದೊಯ್ಯಬೇಕು. ತಂಪಾದ ವಾತಾವರಣಕ್ದಲ್ಲಿ ಇರುವ ಹಾಗೆ ನೋಡಿಕೊಳ್ಳಿ. ದೇಹದ ಉಷ್ಣತೆ ಕಡಿಮೆ ಮಾಡಲು ನೀರು ಕುಡಿಯಿರಿ. ಒದ್ದೆ ಬಟ್ಟೆಯಿಂದ ಮೈಯನ್ನು ಒರೆಸುತ್ತಾ ಇರಬೇಕು. ದೇಹವನ್ನು ಸಾಧ್ಯವಾದಷ್ಟು ತಂಪಾಗಿಸುವುದು. ಹೆಚ್ಚುವರಿ ಬಟ್ಟೆಗಳನ್ನು ಉಪಯೋಗಿಸದೆ ಇರುವುದು. ತೆಳುವಾದ ಹತ್ತಿ ಬಟ್ಟೆ ಧರಿಸಿ, ತಂಪು ಗಾಳಿ ದೇಹವನ್ನು ತಾಗುವಂತೆ ನೋಡಿಕೊಳ್ಳಿ. ತಣ್ಣೀರು ಬಳಸುತ್ತಾ ಚರ್ಮವನ್ನು ತಂಪಾದ ನೀರಿನಿಂದ ಒರೆಸಬೇಕು.
ಆ ಸಮಯಕ್ಕೆ ಫ್ಯಾನ್ ಅಥವಾ ಹವಾನಿಯಂತ್ರಣದ ಬಳಕೆ ಮಾಡುವುದು. ಇದು ದೇಹದ ಉಷ್ಣತೆಯನ್ನು ತ್ವರಿತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ವ್ಯಕ್ತಿಯ ಕುತ್ತಿಗೆ, ತೊಡೆಸಂದು ಪ್ರದೇಶಕ್ಕೆ ಐಸ್ ಪ್ಯಾಕ್ ಅಥವಾ ಕೋಲ್ಡ್ ಕಂಪ್ರೆಸ್ ಮಾಡಿ. ದೇಹವನ್ನು ಚೆನ್ನಾಗಿ ಹೈಡ್ರೇಟ್ ಮಾಡಿ. ಹೈಡ್ರೇಟ್ ಮಾಡಲು ವ್ಯಕ್ತಿಗೆ ನೀರು ಅಥವಾ ಪಾನೀಯ ಕುಡಿಸುತ್ತಾ ಇರಬೇಕು, ಆಲ್ಕೊಹಾಲ್ಯುಕ್ತ, ಕೆಫೀನ್ ಪದಾರ್ಥಗಳಿಂದ ದೂರ ಇಡುವುದು.