ರಾಜಕಾರಣಿಗಳು ಸೇನೆಯ ಬಗ್ಗೆ ಭಾಷಣ ಮಾಡುತ್ತಾರೆ ಹೊರೆತು, ಯಾರೂ ಕೂಡ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸುವುದಿಲ್ಲ ಎಂದು ಟೀಕೆಗಳು ಸದಾ ಕೇಳಿ ಬರುತ್ತಿದ್ದವು. ರಾಜಕಾರಣಿಗಳಲ್ಲದೆ, ಸಿನಿಮಾ ನಟರಿಗೂ ಕೂಡ ಇದು ಅನ್ವಯವಾಗುತ್ತಿತ್ತು. ಸೇನೆಗೆ ಸೇರುವರೆಲ್ಲ ಬಡವರ ಮಕ್ಕಳು ಎಂಬ ಸುದ್ದಿ ಇದೆ ಆದರೆ ಇಲ್ಲೊಬ್ಭ ರಾಜಕಾರಣಿ ಮಗಳನ್ನು ಸೇನೆಗೆ ಸೇರಿಸಿ ಈ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ಇದೀಗ ಸಿನಿಮಾದಿಂದ ರಾಜಕೀಯಕ್ಕೆ ಬಂದಿರುವ ಬಿಜೆಪಿ ಸಂಸದ ರವಿ ಕಿಶನ್ ತಮ್ಮ ಮಗಳನ್ನು ಸೇನೆಗೆ ಸೇರಿಸಿ ಅಂತಹ ಮಾತಿಗೆ ತಿರುಗೇಟು ನೀಡಿದ್ದಾರೆ. ರವಿ ಕಿಶನ್ ಪುತ್ರಿ ಇಶಿತಾ ಶುಕ್ಲಾ ಅವರು ಈ ಹಿಂದೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಯ ಭಾಗವಾಗಿದ್ದರು.
ಈ ಬಗ್ಗೆ ಬೋಜ್ಪುರಿ ನಟ ಇನ್ಸ್ಟಾಗ್ರಾಮ್ ಮೂಲಕ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.ರವಿ ಕಿಶನ್ ಮಗಳು ಇಶಿತಾಗೆ ಕೇವಲ 21 ವರ್ಷ. ಸೆಲೆಬ್ರೆಟಿಗಳು ತಮ್ಮ ಮಕ್ಕಳ ಲೈಫ್ ಸೆಟ್ಲ್ ಮಾಡಲು ಬಯಸುವಾಗ ರವಿ ಕಿಶನ್ ಅವರು ತಮ್ಮ ಮಗಳಿಗೆ ಸೇನೆಗೆ ಸೇರಿಸಿ ಅವರನ್ನು ದೇಶ ಸೇವೆ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ. ನಿಮ್ಮಿಬ್ಬರ ಬಗ್ಗೆ ನಮಗೆ ಹೆಮ್ಮೆ ಇದೆ. ನೀವು ಇತರೆ ನಾಯಕರಿಗೆ ಮಾದರಿಯಾಗಿದ್ದೀರಾ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಇಶಿತಾಗೆ ಸ್ವತಃ ಸೇನೆಗೆ ಸೇರುವ ಇಚ್ಛೆಯಿದ್ದು, ಅವರು ಯಾರ ಒತ್ತಾಯಕ್ಕೂ ಸೇನೆಯನ್ನು ಸೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಜನವರಿ 26 ರಂದು ಪರೇಡ್ನಲ್ಲಿ ಭಾಗವಹಿಸಿದ್ದರು. ಎನ್ಸಿಸಿಯಿಂದ ಪರೇಡ್ನಲ್ಲಿ ಭಾಗವಹಿಸಿದ್ದ 148 ಮಹಿಳೆಯರಲ್ಲಿ ಇಶಿತಾ ಶುಕ್ಲಾ ಕೂಡ ಒಬ್ಬರಾಗಿದ್ದರು. ಆಗ ರವಿ ಕಿಶನ್ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದರು.