ಅಮೆರಿಕದ ನ್ಯೂಯಾರ್ಕ್ನಲ್ಲಿ ದೀಪಾವಳಿ ಹಬ್ಬಕ್ಕೆ ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆ ನೀಡುವ ಮಹತ್ವದ ನಿರ್ಧಾರವನ್ನು ಸೋಮವಾರ ಪ್ರಕಟಿಸಲಾಗಿದೆ. ಹಿಂದೂ, ಸಿಖ್, ಜೈನರು ಹಾಗೂ ಬೌದ್ಧರು ಆಚರಿಸೋ ಈ ದೀಪಾವಳಿ ಹಬ್ಬವನ್ನು ನ್ಯೂಯಾರ್ಕ್ನ ಸುಮಾರು 2 ಲಕ್ಷ ನಗರವಾಸಿಗಳು ಆಚರಿಸುತ್ತಾರೆ. ಇದನ್ನು ಗುರುತಿಸಿಕೊಂಡು ನ್ಯೂಯಾರ್ಕ್ ನಗರದಲ್ಲಿ ಶಾಲಾ ರಜಾ ದಿನಗಳ ಪಟ್ಟಿಗೆ ದೀಪಾವಳಿ ಹಬ್ಬವನ್ನು ಸೇರಿಸಲಾಗಿದೆ ಎಂದು ಮೇಯರ್ ಎರಿಕ್ ಆಡಮ್ಸ್ ತಿಳಿಸಿದ್ದಾರೆ.
2021ರಲ್ಲಿ ಮೇಯರ್ ಹುದ್ದೆಗೆ ಸ್ಪರ್ಧಿಸಿದಾಗ ಆಡಮ್ಸ್ ದೀಪಾವಳಿಗೆ ಶಾಲೆಗಳಿಗೆ ಸಾರ್ವಜನಿಕ ರಜೆ ನೀಡುವ ಭರವಸೆ ನೀಡಿದ್ದರು. ನ್ಯೂಯಾರ್ಕ್ ರಾಜ್ಯ ಶಾಸಕಾಂಗ ನಗರದಲ್ಲಿ ದೀಪಾವಳಿಯನ್ನು ಸಾರ್ವಜನಿಕ ಶಾಲಾ ರಜೆಯನ್ನಾಗಿ ಮಾಡುವ ಮಸೂದೆಗೆ ಸಹಿ ಹಾಕಿದರೆ ಇದು ಅಧಿಕೃತವಾಗಲಿದೆ.
ಈ ವರ್ಷ ದೀಪಾವಳಿ ಹಬ್ಬ ನವೆಂಬರ್ 12 ರಂದು ಇದ್ದು ಆ ದಿನ ಭಾನುವಾರದ ರಜೆ ಇದೆ. ಹೀಗಾಗಿ ಇದರ ಲಾಭ 2024ರ ದೀಪಾವಳಿಗೆ ಅಲ್ಲಿನ ಜನರಿಗೆ ಲಭಿಸಲಿದೆ ಎಂದು ಮೇಯರ್ ಎರಿಕ್ ಆಡಮ್ಸ್ ತಿಳಿಸಿದ್ದಾರೆ.
“ದೀಪಾವಳಿಯಂದು ಶಾಲೆಗೆ ರಜೆ ನೀಡಲು ಹೋರಾಟದಲ್ಲಿ ಅಸೆಂಬ್ಲಿ ಸದಸ್ಯ ಜೆನಿಫರ್ರಾಜ್ಕುಮಾರ್ ಸಮುದಾಯದ ಮುಖಂಡರೊಂದಿಗೆ ನಿಂತಿದಕ್ಕಾಗಿ ನಾನು ತುಂಬಾ ಹೆಮ್ಮೆ ಪಡುತ್ತೇನೆ ಶುಭ ದೀಪಾವಳಿ” ಎಂದು ಮೇಯರ್ ಎರಿಕ್ ಆಡಮ್ಸ್ ಟ್ವೀಟ್ ಮಾಡಿದ್ದಾರೆ.
Starting this fall, @NYCSchools will recognize Diwali with an official school holiday! Our city’s strength is its diversity, and it’s important we celebrate and respect all communities.
It’s a bit early, but Shubh Diwali! 🎉 pic.twitter.com/sOHMr4YEtO
— NYC Mayor’s Office (@NYCMayorsOffice) June 26, 2023