ಇಸ್ಲಾಮಾಬಾದ್: ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಇಸ್ಲಾಮಿಕ್ ಭಯೋತ್ಪಾದಕನನ್ನು ಅಪರಿಚಿತ ಬಂದೂಕುಧಾರಿಗಳು ಪಾಕಿಸ್ಥಾನದ ನೆಲದಲ್ಲಿ ಹತ್ಯೆ ಮಾಡಿದ್ದಾರೆ. ಅಕ್ಟೋಬರ್ 20 ರ ಮುಂಜಾನೆ ಪಾಕಿಸ್ತಾನದ ಉತ್ತರ ವಜಿರಿಸ್ತಾನ್ನಲ್ಲಿ ದಾವೂದ್ ಮಲಿಕ್ನನ್ನು ಎಂಬ ಉಗ್ರನನ್ನು ಅಪರಿಚಿತ ಬಂಧೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇವನು ಲಷ್ಕರ್-ಎ-ಜಬ್ಬಾರ್ನ ಸಂಸ್ಥಾಪಕನಾಗಿದ್ದು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿರುವ ಜೈಶ್-ಎ-ಮೊಹಮ್ಮದ್ ನ ಕಮಾಂಡರ್ (ಜೆಇಎಂ) ಮೊಹಮ್ಮದ್ ಮಸೂದ್ ಅಜರ್ನ ನಿಕಟವರ್ತಿಯೂ ಆಗಿದ್ದ.
ಉತ್ತರ ವಜಿರಿಸ್ತಾನದ ಮಿರಾಲಿ ಪ್ರದೇಶದಲ್ಲಿ ಮುಸುಕುಧಾರಿ ಬಂದೂಕುಧಾರಿಗಳು ಈ ಉಗ್ರ ಬುಡಕಟ್ಟು ನಾಯಕನನ್ನು ಕೊಂದು ಹಾಕಿ ಪರಾರಿ ಆಗಿದ್ದಾರೆ. ಬೆಳಿಗ್ಗೆ ಸುಮಾರು 8 ಘಂಟೆಗೆ ಈ ಘಟನೆ ನಡೆದಿದ್ದು ಈತನು ಖಾಸಗಿ ಕ್ಲಿನಿಕ್ನಲ್ಲಿ ಕುಳಿತಿದ್ದಾಗ ಅಪರಿಚಿತ ಬಂದೂಕುಧಾರಿಗಳು ಹೊಂಚು ಹಾಕಿ ಕುಳಿತು ಅವನ ಮೇಲೆ ಗುಂಡಿನ ಸುರಿಮಳೆಗರೆದಿದ್ದಾರೆ. ಈ ಘಟನೆಯು ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳ ನಡುವೆ ಪರಸ್ಪರ ದ್ವೇಷದ ಕಾರಣದಿಂದ ನಡೆದಿದೆ ಎಂದು ಶಂಕಿಸಲಾಗಿದೆ.
ಲಷ್ಕರ್-ಎ-ಜಬ್ಬಾರ್ ಎಂಬ ಭಯೋತ್ಪಾದಕ ಸಂಗಟನೆಯನ್ನು ಹುಟ್ಟು ಹಾಕಿದ ಇವನನ್ನು ಪಾಕಿಸ್ಥಾನದ ಭದ್ರತಾ ಏಜೆಂಟರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಈತನ ಹತ್ಯೆ ಇವನ ಉಗ್ರಗಾಮಿಗಳ ದೊಡ್ಡ ಜಾಲಕ್ಕೆ ಗಂಭೀರವಾದ ಹೊಡೆತವನ್ನು ನೀಡಿದೆ. ಪಾಕಿಸ್ತಾನ ಮತ್ತು ಇತರ ರಾಷ್ಟ್ರಗಳಲ್ಲಿ ಭಾರತ ವಿರೋಧಿ ಭಯೋತ್ಪಾದಕರ ಹತ್ಯೆಗಳ ಸಂಖ್ಯೆ ಏರುತ್ತಿದೆ.
ಲಷ್ಕರ್-ಎ-ತೈಬಾದ (ಎಲ್ಇಟಿ) ಹಫೀಜ್ ಮುಹಮ್ಮದ್ ಸಯೀದ್ನ ಆತ್ಮೀಯ ಸ್ನೇಹಿತ ಮುಫ್ತಿ ಖೈಸರ್ ಫಾರೂಕ್ನನ್ನು ಇತ್ತೀಚೆಗೆ ಕರಾಚಿಯ ಹೃದಯ ಭಾಗದಲ್ಲಿ ಇದೇ ರೀತಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ ನಂತರ ಈ ಘಟನೆ ನಡೆದಿದೆ. ಇವನು ಜೈಶ್ ಎ ಮೊಹಮದ್ ಸಂಗಟನೆಯ ಭಯೋತ್ಪಾದಕರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದನು. ಇವನು ಮದ್ರಸಾದಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡುತಿದ್ದು ತನ್ನ ಮದ್ರಸಾ ವಿದ್ಯಾರ್ಥಿಗಳ ಗುಂಪಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಹತ್ಯೆ ಆಗಿದ್ದ. ಪಾಕಿಸ್ತಾನದ ಭದ್ರತಾ ಪಡೆಗಳ ವಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಈ ಘಟನೆ ಸೆರೆಯಾಗಿದೆ. ದ್ವಿಚಕ್ರವಾಹನ ಸವಾರಿ ಮಾಡುತ್ತಿದ್ದ ಇಬ್ಬರು ವೇಗವಾಗಿ ಗುಂಡು ಹಾರಿಸಿ ಆತನ ಪ್ರಾಣವನ್ನು ಕ್ಷಣಮಾತ್ರದಲ್ಲಿ ಅಂತ್ಯಗೊಳಿಸಿದ್ದಾರೆ.
ಮುಫ್ತಿ ಕೈಸರ್ ಫಾರೂಕ್ ನ ಹತ್ಯೆ ಪಾಕಿಸ್ತಾನ-ಕೆನಡಾ ದೇಶಗಳಲ್ಲಿ ಕಳೆದ ಹತ್ತೊಂಬತ್ತು ತಿಂಗಳುಗಳಲ್ಲಿ ಗುರುತಿಸಲಾಗದ ದಾಳಿಕೋರರಿಂದ ನಿರ್ಮೂಲನೆಯಾದ ಹದಿನಾರನೇ ಭಾರತ ವಿರೋಧಿ ಭಯೋತ್ಪಾದಕ ನ ಹತ್ಯೆ ಆಗಿದೆ. ಕಳೆದ ಸೆಪ್ಟೆಂಬರ್ 12 ರಂದು ಕರಾಚಿಯಲ್ಲಿ ಪ್ರಮುಖ ಎಲ್ಇಟಿ ಭಯೋತ್ಪಾದಕ ಮೌಲಾನಾ ಜಿಯಾವುರ್ ರೆಹಮಾನ್ ಹತ್ಯೆಯನ್ನು ಹೀಗೇ ಮಾಡಲಾಗಿತ್ತು.
IC-814 ಫ್ಲೈಟ್ನ ಅಪಹರಣಕಾರನಾಗಿದ್ದ ಜಾಹಿದ್ ಅಖೂಂಡ್ ಎಂದು ಕರೆಯಲ್ಪಡುವ ಜೆಇಎಂ ಸದಸ್ಯ ಮಿಸ್ತ್ರಿ ಜಹೂರ್ ಇಬ್ರಾಹಿಂ ಎಂಬಾತನನ್ನು ಅಪರಿಚಿತ ದುಷ್ಕರ್ಮಿಗಳು ಆತನ ತಲೆಗೆ ಸಮೀಪದಿಂದ ಎರಡು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಪಾಕಿಸ್ತಾನದ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್ (ISI) ಮತ್ತು ಕಾನೂನು ಜಾರಿ ಅಧಿಕಾರಿಗಳು ಈ ಹತ್ಯೆಗಳಿಂದ ತೀವ್ರವಾಗಿ ವಿಚಲಿತರಾಗಿದ್ದಾರೆ.
ಕಳೆದ ಜೂನ್ 18 ರಂದು ಖಲಿಸ್ಥಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕೆನಡಾದ ಸರ್ರೆಯ ಗುರುನಾನಕ್ ಗುರುದ್ವಾರ ಸಾಹಿಬ್ ಆವರಣದಲ್ಲಿ ಇಬ್ಬರು ದುಷ್ಕರ್ಮಿಗಳು ಹತ್ಯೆಗೈದ ನಾಲ್ಕು ದಿನಗಳ ನಂತರ ಮತ್ತೊಬ್ಬ ಖಲ್ಸಿತಾನಿ ಭಯೋತ್ಪಾದಕ ಮತ್ತು ನಿಷೇಧಿತ ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ಮುಖ್ಯಸ್ಥ ಲಂಡನ್ ಆಸ್ಪತ್ರೆಯಲ್ಲಿ ನಿಧನರಾದರು.
ಭಯೋತ್ಪಾದಕ ರಿಪುದಮನ್ ಸಿಂಗ್ ಮಲಿಕ್ ಎಂಬ ಖಲಿಸ್ಥಾನಿ ಬಯೋತ್ಪಾದಕ 15 ಜುಲೈ 2022 ರಂದು ಸರ್ರೆಯಲ್ಲಿ ಕೊಲ್ಲಲ್ಪಟ್ಟನು. ಇವನು 23 ಏಪ್ರಿಲ್ 1985 ರಂದು ಏರ್ ಇಂಡಿಯಾ ಫ್ಲೈಟ್ ಕನಿಷ್ಕಾ ಬಾಂಬ್ ದಾಳಿ ಸೇರಿದಂತೆ ಅನೇಕ ಭಯೋತ್ಪಾದಕ ದಾಳಿಗಳಿಗೆ ಸಂಪರ್ಕ ಹೊಂದಿದ್ದನು , ಇದು 329 ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡಿತು.
ಈ ಉದ್ದೇಶಪೂರ್ವಕ ಹತ್ಯೆಗಳು ಪಾಕಿಸ್ತಾನದ ಮಿಲಿಟರಿ ಕಾರಿಡಾರ್ಗಳಿಗೆ ಎಚ್ಚರಿಕೆಯನ್ನು ರವಾನಿಸಿವೆ ಮತ್ತು ISI ತನ್ನ ಹನ್ನೆರಡು ಪ್ರಮುಖ ‘ಆಸ್ತಿಗಳನ್ನು’ ಸುರಕ್ಷಿತ ಸ್ಥಳಗಳಿಗೆ ತ್ವರಿತವಾಗಿ ಸ್ಥಳಾಂತರಿಸಲು ಯೋಚಿಸಬೇಕಾಗಿದೆ. ಪಾಕಿಸ್ಥಾನವು ಇಂದು ಭಿಕಾರಿ ಆಗಿಯೇ ಗುರುತಿಸಿಕೊಂಡಿದ್ದರೂ ಮತಾಂಧತೆಯು ಮಾತ್ರ ಆಕಾಶದಷ್ಟಿದೆ. ಭಯೋತ್ಪಾದನೆಗೂ ತನಗೂ ಸಂಬಂಧ ಇಲ್ಲ ಎಂದು ಹೇಳುವ ಪಾಕಿಸ್ಥಾನ ಅನೇಕ ಭಯೋತಾದಕ ಸಂಘಟನೆಗಳನ್ನು ಬೆಳೆಸಿಕೊಂಡು ಭಾರತದ ಮೇಲೆ ಛೂ ಬಿಡುತ್ತಿದೆ. ಈ ಎಲ್ಲಾ ಸಂಘಟನೆಗಳು ಕುಖ್ಯಾತ ಐಎಸ್ಐ ಜತೆ ನಿಕಟ ಸಂಪರ್ಕ ಹೊಂದಿದ್ದು , ಪಾಕ್ ಸೇನೆಯ ನೆರವಿನಿಂದ ಭಾರತದಲ್ಲಿ ಇರುವ ದೇಶದ್ರೋಹಿಗಳ ಬೆಂಬಲದಿಂದ ಬಾರತದೊಳಗೆ ನುಸುಳಿ ಅಮಾಯಕರ ಹತ್ಯೆ ಮಾಡುತ್ತಿವೆ.