ಇಂದಿನ ಪರಿಸ್ಥಿಯಲ್ಲಿ ಗಂಡ ಹೆಂಡ್ತಿ ಇಬ್ಬರು ದುಡುಯುವುದು ಅನಿವಾರ್ಯವಾಗಿದೆ. ಕೈಗೆಟಕದ ಸಾಮಾಗ್ರಿಗಳು, ಕೈಯಲ್ಲಿ ನಿಲ್ಲದ ಕಾಸು. ಉಳಿತಾಯ ಎಂಬುವುದು ಬರೇಯ ಕನಸಾಗಿದೆ. ಬದುಕು ಕೇವಲ ಲೆಕ್ಕಚಾರದ ಬದುಕು ಆಗಿದೆ. ಹಾಗಾಗಿ ಮನೆಯ ಖರ್ಚು ವೆಚ್ಚಗಳಲ್ಲಿ ಗಂಡ ಹೆಂಡ್ತಿ ಇಬ್ಬರು ಸರಿದೂಗಿಸಬೇಕಾದ ಪರಿಸ್ಥಿತಿ ಬಂದಿದೆ.
ಹೊರಗೆ ಹೋಗಿ ದುಡಿಯುವ ದಂಪತಿಗಳು ತಮ್ಮ ಪುಟ್ಟ ಕಂದಮ್ಮನನ್ನು ಯಾವೊದೋ ಪ್ಲೇ ಸ್ಕೂಲ್ಗೆ ಸೇರಿಸುತ್ತಾರೆ. ಇಲ್ಲಿ ನಮ್ಮ ಮಗು ಸುರಕ್ಷಿತ ಎಂಬ ನಂಬಿಕೆಯಲ್ಲಿ ಕೆಲಸಕ್ಕೆ ಹೋಗುತ್ತಾರೆ.
ಇತೀಚೆಗಷ್ಟೇ ಡೇ ಕೇರ್ ಸೆಂಟರ್ ನಲ್ಲಿ ನಡೆದ ಪುಟ್ಟ ಮಕ್ಕಳ ಗಲಾಟೆಯ ದೃಶ್ಯದ ವಿಡಿಯೋ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗುತ್ತಿದೆ. ಒಂದು ಮಗು ಇನ್ನೊಂದು ಮಗುಗೆ ಹಿಗ್ಗಮುಗ್ಗವಾಗಿ ಹೊಡೆಯುವ ದೃಶ್ಯ ನಡುಕ ಹುಟ್ಟಿಸುವಂತದ್ದು.
ಆ ಸೆಂಟರ್ನ ತರಗತಿ ರೂಂನಲ್ಲಿ ಮಕ್ಕಳು ಮಾತ್ರ ಇದ್ದು, ಯಾವುದೇ ಕೇರ್ ಟೇಕರ್ ಇಲ್ಲದಿರುವುದು ಗಮನಿಸಬಹುದು. ಎಲ್ಲ ಮಕ್ಕಳನ್ನು ಒಂದೆಡೆ ಕೂಡಿ ಹಾಕಿದಂತಿದೆ ಕೋಣೆಯ ಪರಿಸ್ಥಿತಿ. ಬಳಿಕ ಒಂದು ಹೆಣ್ಣು ಮಗುವನ್ನು ಅಲ್ಲಿಯೇ ಇದ್ದ ಮತ್ತೊಂದು ಗಂಡು ಮಗು ತನ್ನ ಮನಬಂದಂತೆ ಹೊಡೆದು, ಒದ್ದು ಥಳಿಸಿದ್ದಾನೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತಂದೆ- ತಾಯಿ ಈ ವಿಡಿಯೋ ನೋಡಿ ದಿಗ್ಬ್ರಮೆಗೊಳಗಾಗಿದ್ದಾರೆ.
https://www.facebook.com/100001213583154/videos/947009199842488/
ಈ ಹಿಂದೆ ಪ್ಲೇ ಸ್ಕೂಲ್ ಒಂದರಲ್ಲಿ ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಟು ಮಲಗಿಸುವ ಅಘಾತಕಾರಿ ಘಟನೆಯೊಂದು ನಡೆದಿತ್ತು. ಈ ಘಟನೆಯು ಕೂಡ ಅಷ್ಟೇ ಅಪಯಾಕಾರಿಯಾಗಿದೆ. ಡೇ ಕೇರ್ ಸೆಂಟರ್ ನ ಕೇರ್ ಹೇಗಿದೆ ಅನ್ನುವುದನ್ನು ಸ್ಪಷ್ಟವಾಗಿ ಅರಿವಾಗುತ್ತಿದೆ.
ಹೆತ್ತವರು ಮಕ್ಕಳನ್ನು ಕೇರ್ ಸೆಂಟರ್ ಗೆ ಸೇರಿಸುವ ಮೊದಲು ಯೋಚಿಸಲೇಬೇಕು. ಇವು ನಮ್ಮ ಮಕ್ಕಳಿಗೆ ಎಷ್ಟು ಸುರಕ್ಷಿತ ಎಂದು ಅರಿಯಬೇಕು. ಕೇರ್ ಸೆಂಟರ್ನಿಂದ ಮಕ್ಕಳನ್ನು ಮನೆಗೆ ಕರೆ ತಂದ ಮೇಲೆ ಮಕ್ಕಳನ್ನು ಗಮನಿಸುವುದು ಅವಶ್ಯಕ. ಅವರ ವರ್ತನೆಯಲ್ಲಿ ಸ್ವಲ್ಪ ವ್ಯತ್ಯಸ ಕಂಡುಬಂದರು ಅದನ್ನು ಪ್ರಮುಖವಾಗಿ ಪರಿಗಣಿಸಬೇಕು.
ಒಂದು ಕಾಲದಲ್ಲಿ ಮಕ್ಕಳು ಅಜ್ಜ ಅಜ್ಜಿಯ ಸುರಕ್ಷತೆಯಲ್ಲಿ ಬೆಳೆಯುತ್ತಿದ್ದರು. ಇಂದು ಆ ದೃಶ್ಯ ಸನ್ನೀವೇಶಗಳು ಬದಲಾಗಿದೆ. ಮನೆಯವರ ಪ್ರೀತಿ ಆರೈಕೆಯಲ್ಲಿ ಬೆಳೆಯ ಬೇಕಾದ ಮಕ್ಕಳು ಯಾವುದೋ ಕೇರ್ ಸೆಂಟರ್ ನಲ್ಲಿ ಗರುತು ಪರಿಚಯ ಇಲ್ಲದಿರುವ ಮಧ್ಯೆ ಸುರಕ್ಷತೆಯಿಲ್ಲದೆ ಬೆಳೆಯುತ್ತಿದೆ.