ನಮಗೆ ಯಾವುದೇ ಕೆಲಸ ಮಾಡಬೇಕೆಂದರೂ ಅದು ವೇಗವಾಗಿ ಆಗಿಬಿಡಬೇಕೆಂದು ನಾವು ಬಯಸುತ್ತೇವೆ. ಅದೇ ರೀತಿ ತೂಕ ಹೆಚ್ಚಿಸಿಕೊಳ್ಳುವಲ್ಲಿಯೂ ಸಹ ಅದೇ ನಿಯಮವನ್ನು ಪಾಲಿಸಲು ಮುಂದಾಗಿ, ಅತಿ ಕಡಿಮೆ ದಿನಗಳಲ್ಲಿ ಬೇಗ ತೂಕವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ದಾರಿಯನ್ನು ಹುಡುಕುತ್ತಿರುತ್ತೇವೆ. ಆದರೆ ವೇಗದ ಮಾರ್ಗವನ್ನು ಹುಡುಕದೆ ನಿಧಾನ ಗತಿಯಲ್ಲಿ ತೂಕವನ್ನು ಹೆಚ್ಚಿಸಿಕೊಳ್ಳುವಂತೆ ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ.
ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಸರಿಯಾದ ಪ್ರಮಾಣದ ಕ್ಯಾಲೊರಿಗಳನ್ನು ತಿನ್ನುವುದು ಮತ್ತು ಅಗತ್ಯವಿರುವ ಸಾಕಷ್ಟು ಪೋಷಕಾಂಶಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿರುತದೆ.
ಮನೆಯಲ್ಲಿ ನೈಸರ್ಗಿಕವಾಗಿ ತೂಕವನ್ನು ಹೆಚ್ಚಿಸಿಕೊಳ್ಳಲು ಸಿದ್ಧರಿರುವ ವ್ಯಕ್ತಿಗಳು ಕಾರ್ಬೋಹೈಡ್ರೇಟ್ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್ಗಳ ಸಮೃದ್ಧ ಮೂಲವಾಗಿರುವ ಆಹಾರವನ್ನು ಸೇವಿಸಬೇಕು.
ಹಾಗಾದರೆ ಅಂತಹ ಆಹಾರಗಳು ಯಾವುದೆಂದು ನಾವು ಇಲ್ಲಿ ನೋಡೋಣ:
ಪನೀರ್ ಅಥವಾ ಕಾಟೇಜ್ ಚೀಸ್: ಇದರ ಹೆಚ್ಚಿನ ಕ್ಯಾಲೋರಿ ಮತ್ತು ಪ್ರೋಟೀನ್ ಅಂಶವು ನಿಮ್ಮ ತೂಕವನ್ನು ಸುಲಭವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ವಾರದಲ್ಲಿ ಎರಡರಿಂದ ಮೂರು ಬಾರಿ ಈ ಪನೀರ್ ನ್ನು ಉಪಯೋಗಿಸಿ.
ತುಪ್ಪ: ತೂಕ ಹೆಚ್ಚಿಸಿಕೊಳ್ಳಲು ಇಚ್ಚಿಸುವವರು ತಮ್ಮ ಎಲ್ಲಾ ಆಹಾರ ಪದಾರ್ಥಗಳಲ್ಲಿ ತುಪ್ಪವನ್ನು ಹೇರಳವಾಗಿ ಉಪಯೋಗಿಸಬೇಕು ಬೆಳಗಿನ ಉಪಹಾರಗಳಲ್ಲಿಯೂ ಕೂಡ ತುಪ್ಪವನ್ನು ಹಾಕಿ ಸೇವಿಸಬಹುದು.
ಹಣ್ಣುಗಳು ಮತ್ತು ತರಕಾರಿಗಳು: ತೂಕವನ್ನು ಹೆಚ್ಚಿಸಲು ಉತ್ತಮವಾದ ಕಾರ್ಬೋಹೈಡ್ರೇಟ್ಗಳು ಮತ್ತು ಆಹಾರದ ಫೈಬರ್ಗಳು ಅವಶ್ಯಕ ಅದನ್ನು ನಾವು ಈ ಪದಾರ್ಥಗಳಲ್ಲಿ ಪಡೆದುಕೊಳ್ಳುವುದರಿಂದ ನಾವು ಇದರ ಸೇವೆಯನ್ನು ಅತಿಯಾಗಿ ಮಾಡುವುದು ಉತ್ತಮ.
ಚಿಕನ್ ಅಥವಾ ಮಟನ್: ಮಾಂಸಭರಿತ ಭಕ್ಷ್ಯವು ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್ಗಳ ಉತ್ತಮ ಮೂಲವಾಗಿದೆ. ಇದು ತೂಕ ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ.
ಬ್ರೆಡ್ ಪೀನಟ್ ಬಟರ್: ಇದು ತೂಕ ಹೆಚ್ಚಿಸಲು ಉತ್ತಮ ಆಹಾರ ಪದಾರ್ಥವಾಗಿದೆ.
ಮೊಟ್ಟೆಗಳು: ತೂಕ ಹೆಚ್ಚಿಸಲು ನಿಮ್ಮ ಆಹಾರ ಯೋಜನೆಯಲ್ಲಿ ದಿನಾಲು ಒಂದು ಮೊಟ್ಟೆಯನ್ನು ಸೇವಿಸಿ.
ಚಿಕ್ಕು ಅಥವಾ ಬಾಳೆಹಣ್ಣು ಶೇಕ್ಸ್: ಇದು ಫ್ರಕ್ಟೋಸ್ ಮತ್ತು ಸುಕ್ರೋಸ್ನಲ್ಲಿ ಸಮೃದ್ಧವಾಗಿರುವ ಕಾರಣ ನಿಮ್ಮ ದೇಹಕ್ಕೆ ಸಂಪೂರ್ಣ ಶಕ್ತಿಯನ್ನು ಒದಗಿಸುತ್ತದೆ. ಜೇನುತುಪ್ಪ ಮತ್ತು ಹಾಲನ್ನು ಮಿಶ್ರಣ ಮಾಡಿ ಈ ಮಿಲ್ಕ್ ಶೇಕ್ ಅನ್ನು ಮಾಡಿ ಕುಡಿಯಿರಿ ಅತ್ಯಂತ ವೇಗವಾಗಿ ನಿಮ್ಮ ತೂಕ ಹೆಚ್ಚು ಆಗುವುದು.
ಡ್ರೈ ಫ್ರೂಟ್ಸ್ ಗಳು: ಗೋಡಂಬಿ, ವಾಲ್ನಟ್ಸ್, ಬಾದಾಮಿ ಮತ್ತು ಒಣದ್ರಾಕ್ಷಿಗಳು ತೂಕ ಹೆಚ್ಚಳಕ್ಕೆ ಸಹಾಯಕ. ಒಂದು ಲೋಟ ಹಾಲಿನೊಂದಿಗೆ ಇವುಗಳ ಪುಡಿ ಹಾಕಿಕೊಂಡು ಸೇವಿಸಿ. ಇದು ಉತ್ತಮ ಕೊಬ್ಬನ್ನು ಹೊಂದಿದ್ದು, ತೂಕವನ್ನು ಹೆಚ್ಚಿಸಲು ಆಹಾರಕ್ಕೆ ಹೆಚ್ಚುವರಿ ಕ್ಯಾಲೊರಿಗಳನ್ನು ನೀಡುವಲ್ಲಿ ಅನುಮಾನವಿಲ್ಲ