ಕರಾಚಿ : ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ನಾಲ್ವರು ಭಾರತೀಯ ಯೋಧರ ಹತ್ಯೆ ಮಾಡಿರುವ ಬೆನ್ನಲ್ಲೇ ಪಾಕಿಸ್ತಾನದ ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡುತಿದ್ದ ವ್ಯಕ್ತಿ ಸೇರಿ ಮೂವರನ್ನು ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಕ್ಕೆ ಹಣಕಾಸು ನೆರವು ನೀಡುತಿದ್ದ ಉಗ್ರ ಹಾಜಿ ಉಲ್ಮರ್ ಗುಲ್ ಎಂಬಾತನನ್ನು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಈತನು ತನ್ನ ಸಹಚರರೊಂದಿಗೆ ಸಮಾಲೋಚನೆ ನಡೆಸುತಿದ್ದಾಗಲೇ ಗುಂಡಿನ ಧಾಳಿ ನಡೆಸಿದ ಅಪರಿಚಿತರು ಹತ್ಯೆ ಮಾಡಿದ್ದಾರೆ. ಈ ಘಟನೆ ಪಾಕಿಸ್ತಾನದ ಟಂಕ್ ಎಂಬಲ್ಲಿ ನಡೆದಿದೆ.
ಪಾಕಿಸ್ಥಾನದ ಭಯೋತ್ಪಾದಕ ಸಂಗಟನೆಗಳೊಂದಿಗೆ ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್ಐ ನಿಕಟ ಸಂಪರ್ಕ ಬೆಂಬಲ ನೀಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. ಈ ಹತ್ಯೆಯಿಂದ ಐಎಸ್ಐ ನ ಉಗ್ರ ಬೆಂಬಲಕ್ಕೆ ಭಾರಿ ಹಿನ್ನೆಡೆ ಆಗಿದೆ. ಹಾಜಿ ಉಲ್ಮನ್ ಗುರ್ ಪಾಕಿಸ್ತಾನಿಗಳಿಂದ ಭಾರೀ ತೆರಿಗೆಯನ್ನು ಸಂಗ್ರಹಿಸುತ್ತಿದ್ದ ಎನ್ನಲಾಗಿದ್ದು ಜಿಹಾದ್ ಹೆಸರಿನಲ್ಲಿ ಭಯೋತ್ಪಾದಕರಿಗೆ ದೊಡ್ಡ ಪ್ರಮಾಣದ ನೆರವು ನೀಡುತಿದ್ದ. ಇದರಿಂದ ಉಗ್ರ ಆರ್ಥಿಕತೆಗೆ ನೇರ ಹೊಡೆತ ಬಿದ್ದಂತಾಗಿದೆ.
ಇನ್ನೊಂದೆಡೆ, ಅಪರಿಚಿತ ವ್ಯಕ್ತಿಗಳು ಈ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಭಾರತ ವಿರೋಧೀ ಶಕ್ತಿಗಳು ವಿವಿಧ ದೇಶಗಳಲ್ಲಿ ಅಪರಿಚಿತರಿಂದ ಹತ್ಯೆ ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಪಾಕಿಸ್ತಾನದ ಭಯೋತ್ಪಾದಕರು ಸಹ ಅಪರಿಚಿತರಿಗೆ ತುಂಬಾ ಹೆದರುತ್ತಿದ್ದಾರೆ. ಈಗಾಗಲೇ ಪಾಕಿಸ್ತಾನದಲ್ಲಿ ಕಳೆದ ಮೂರು ತಿಂಗಳಿನಲ್ಲಿ 12 ಕ್ಕೂ ಹೆಚ್ಚು ಉಗ್ರರು ಅಪರಿಚಿತರ ಗುಂಡಿನ ಧಾಳಿಗೆ ಬಲಿಯಾಗಿದ್ದಾರೆ. ಪಾಕಿಸ್ತಾನ ಸರ್ಕಾರದ ಭದ್ರತಾ ಏಜೆನ್ಸಿಗಳಿಗೆ ಗೆ ಈ ಅಪರಿಚಿತರ ಬಗ್ಗೆ ಸುಳಿವು ಕೂಡ ಸಿಗುತ್ತಿಲ್ಲವಾದ್ದರಿಂದ ಬಹುತೆಕ ಪ್ರಕರಣಗಳಲ್ಲಿ ಬಂಧನವೇ ನಡೆದಿಲ್ಲ. ಜೈಲಿನೊಳಗೂ ಅವರು ಹತ್ಯೆ ನಡೆಸುತ್ತಿರುವುದು ಅಪರಿಚಿತರ ಶಕ್ತಿ ಸಾಮರ್ಥ್ಯ ಪ್ರದರ್ಶನ ಮಾಡಿದೆ.
ಇತ್ತೀಚೆಗೆ ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂನನ್ನು ಅಪರಿಚಿತ ವ್ಯಕ್ತಿಗಳು ವಿಷ ಪ್ರಾಶನ ಮಾಡಿದ್ದಾರೆ ಮತ್ತು ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಇವನು ಮರಣ ಹೊಂದಿದ್ದ ಎಂದೂ ಸುದ್ದಿಯಾಗಿತ್ತು. ಆದರೆ, ಇದೆಲ್ಲವೂ ಸುಳ್ಳು ಎಂದು ನಂತರ ತಿಳಿದುಬಂದಿತ್ತು. ಅಪರಿಚಿತರಿಂದ ನಡೆಯುತ್ತಿರುವ ಹತ್ಯೆಗಳು ಮತ್ತಷ್ಟು ಮುಂದುವರಿಯಲಿ ಎಂದು ದೇಶದ ಸಾಮಾಜಿಕ ತಾಣಗಳಲ್ಲಿ ಬೆಂಬಲ ವ್ಯಕ್ತವಾಗಿದೆ.