ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕೇಂದ್ರೀಯ ಬ್ರಾಂಕ್ ನ ಕ್ಲೀನ್ ನೋಟದ ನೀತಿಯ ಅನುಸಾರವಾಗಿ ಚಲಾವನೇಯಲ್ಲಿರುವ 2000 ರೂ. ಮುಖಬೆಲೆಯ ನೋಟನ್ನು ಹಿಂಪಡೆಯಲು ನಿರ್ಧರಿಸಿತು.
500 ಮತ್ತು 1000 ರೂ. ಬ್ಯಾಂಕ್ ನೋಟುಗಳ ಚಲಾವಣೆಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ 2016ರಲ್ಲಿ ಆರ್ಥಿಕ ಅಗತ್ಯತೆಗೆ ತ್ವರಿತವಾಗಿ ಪೂರೈಸಲು ಆರ್ ಬಿಐ 2000 ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸಿತ್ತು.
ಈ ಬಗ್ಗೆ ಆರ್ ಬಿಐ ಹೇಳಿದ್ದೇನು?
ಬಳಿಕ ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ನಂತರ 2000 ರೂ. ಬ್ಯಾಂಕ್ ನೋಟುಗಳನ್ನು ಮುದ್ರಣ ಮಾಡುವುದನ್ನು ನಿಲ್ಲಿಸಲಾಯಿತು ಎಂದು ಆರ್ ಬಿಐ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಕಾಲಕ್ರಮೇಣ 2000 ರೂ. ನೋಟುಗಳ ಬಳಕೆಯನ್ನು ನಿಧಾನವಾಗಿ ಸ್ಥಗಿತಗೊಳಿಸುತ್ತಾ ಬಂದಿದೆ. ಅಂಕಿ ಅಂಶಗಳ ಪ್ರಕಾರ 2017ಕ್ಕೂ ಮುನ್ನ ಒಟ್ಟು 6.73 ಲಕ್ಷ ಕೋಟಿ ರೂ. ಚಲಾವಣೆಯಲ್ಲಿತ್ತು. ನಂಯತರ 2018ರ ವೇಳೆಗೆ ಅದು 3.62 ಲಕ್ಷ ಕೋಟಿ ಗೆ ಕುಸಿದಿದೆ. ಈಗ ಕೇವಲ 10.8ರಷ್ಟು ಮಾತ್ರ ಚಲಾವಣೆಯಲ್ಲಿದೆ ಎಂದಿದೆ.
2000 ರೂ. ಮುಖಬೆಲೆಯ ನೋಟು ಸಾಮಾನ್ಯ ವಹಿವಾಟುಗಳಿಗೆ ಬಳಸಲಾಗುವುದಿಲ್ಲ. ಬದಲಿಗೆ ಇತೆ ಮುಖಬೆಲೆಯ ನೋಟುಗಳ ಸಂಗ್ರಹವು ದೇಶದ ಜನರ ಅಗತ್ಯತೆಗೆ ಸಮರ್ಪಕವಾಗಿ ಬಳಕೆಯಾಗುತ್ತದೆ ಎಂದಿದೆ.
2000 ರೂ. ನೋಟು ನಿಮ್ಮ ಬಳಿ ಇದ್ದರೆ ಏನು ಮಾಡಬೇಕು?
2,000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ತಕ್ಷಣಕ್ಕೆ ನಿಲ್ಲಿಸುವಂತೆ ಆರ್ಬಿಐ ಬ್ಯಾಂಕ್ಗಳಿಗೆ ಸೂಚಿಸಿದೆ.
ನಾಗರೀಕರು ತಮ್ಮ ಬಳಿ ಇರುವ 2000 ರೂ. ನೋಟನ್ನು ವಿನಿಮಯ ಮಾಡಿಕೊಳ್ಳಲು ಈ ಸ್ಟೆಪ್ಸ್ ಫಾಲೋ ಮಾಡಿ:
• ನೀವು ನಿಮ್ಮ ಬಳಿ ಇರುವ ನೋಟನ್ನು ನಿಮ್ಮ ಬ್ಯಾಂಕ್ ಖಾತೆಗೆ ಠೇವಣಿ ಮಾಡಬಹುದು ಅಥವಾ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಇತರ ಮುಖಬೆಲೆಯ ಬ್ಯಾಂಕ್ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಬಹುದು.
• ಯಾವುದೇ ಬ್ಯಾಂಕ್ನಲ್ಲಿ ಒಂದು ಬಾರಿಗೆ 20 ಸಾವಿರ ರೂ. ವರೆಗೆ ಮಿತಿಗೊಳಿಸಬಹುದು.
• ಎಲ್ಲಾ ಬ್ಯಾಂಕ್ಗಳು 2,000 ರೂ. ನೋಟುಗಳಿಗೆ ವಿನಿಮಯ ಸೌಲಭ್ಯವನ್ನು ಸೆಪ್ಟೆಂಬರ್ 30, 2023 ರವರೆಗೆ ಒದಗಿಸುತ್ತವೆ.
ಈ ನೋಟ್ ಬ್ಯಾನ್ ನಿಂದ ಜನತೆಗೆ ತೊಂದರೆ ಆಗ್ತಿದ್ಯಾ?
ಪ್ರತಿ ಮೂರು ವ್ಯಕ್ತಿಗಳಲ್ಲಿ ಇಬ್ಬರು 2000 ರೂ. ನೋಟು ಹಿಂಪಡೆದಿರುವ ಬಗ್ಗೆ ಪಾಸಿಟಿವ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನು ಶೇ.64ರಷ್ಟು ಜನ ಆರ್ ಬಿಐ ನ ಕ್ರಮವನ್ನು ಬೆಂಬಲಿಸಿದ್ದಾರೆ. ಈ ಮೂಲಕ ಕಪ್ಪು ಹಣವನ್ನು ಕಡಿಮೆ ಮುಖಬೆಲೆಯ ನೋಟುಗಳಾಗಿ ಪರಿವರ್ತಿಸಲು ಕಾರಣವಾಗುತ್ತದೆ.
ಆರ್ ಬಿಐ 2000 ರೂ. ಮುಖಬೆಲೆಯ ನೋಟು ವಿನಿಯಮದ ಬಗ್ಗೆ ಘೋಷಣೆಯಾದ ಬಳಿಕವೂ ಸಾರಿಗೆ, ಚಿನ್ನ, ಬೆಳ್ಳಿ ಆಭರಣಗಳ ಖರೀದಿ ಹೆಚ್ಚಳವಾಗಿದೆ.
ಆದರೆ ಅಂಗಡಿ, ಮೆಡಿಕಲ್ ಸ್ಟೋರ್, ಆಸ್ಪತ್ರೆ, ಪೆಟ್ರೋಲ್ ಬಂಕ್ ಗಳಲ್ಲಿ 2000 ರೂ. ನೋಟು ಬಳಕೆಯಾಗದೆ ಕೆಲವರಿಗೆ ತೊಂದರೆಯಾಗಿದೆ ಎನ್ನಲಾಗಿದೆ.
15% ಜನರಿಗೆ ಅಂಗಡಿಗಳಲ್ಲಿ, 13% ಮೆಡಿಕಲ್ ಸ್ಟೋರ್ ಗಳಲ್ಲಿ, 9% ಆಸ್ಪತ್ರೆಯಲ್ಲಿ ಇನ್ನು 6% ಪೆಟ್ರೋಲ್ ಬಂಕ್, 4% ಆಭರಣಗಳ ಅಂಗಡಿಯಲ್ಲಿ, 4% ನಷ್ಟು ಇ ಕಾಮರ್ಸ್ ಸಂಸ್ಥೆಗಳು ಕ್ಯಾಶ್ ಆನ್ ಡೆಲಿವೆರಿ ವೇಳೆ 2000 ರೂ. ನೋಟು ಸ್ವೀಕರಿಸುತ್ತಿಲ್ಲ.
ಲೋಕಲ್ ಸರ್ಕಲ್ಸ್ ವರದಿ ಮಾಡಿರುವ ಪ್ರಕಾರ
• ಶೇ.64ರಷ್ಟು ಜನರ ಬಳಿ 2000 ರೂ. ನೋಟ್ ಇಲ್ಲ.
• ಶೇ.6ರಷ್ಟು ಜನರ ಬಳಿ 1 ಲಕ್ಷ ರೂ. ಗಿಂತ ಅಧಿಕ 2000 ರೂ. ನೋಟು ಇದೆ.
• ಶೇ. 34 ರಷ್ಟು ಜನ ಸರ್ಕಾರದ ಘೋಷಣೆ ಬಳಿಕ 2000 ರೂ. ನೋಟು ಬಳಸುತ್ತಿದ್ದಾರೆ.
• ಶೇ.91 ರಷ್ಟು ಜನ ಅಂಗಡಿ, ಮೆಡಿಕಲ್ ಸ್ಟೋರ್, ಆಸ್ಪತ್ರೆ, ಪೆಟ್ರೋಲ್ ಬಂಕ್ ಗಳಲ್ಲಿ 2000 ರೂ. ನೋಟು ಪಡೆಯಲು ಸಮ್ಮತಿಸುತ್ತಿಲ್ಲ.
• ಶೇ.22ರಷ್ಟು ಜನ 2000 ರೂ. ನೋಟು ಹಿಂಪಡೆಯೋದಕ್ಕೆ ನಕಾರ ಎತ್ತಿದ್ದಾರೆ.
• ಶೇ.12ರಷ್ಟು ಜನರಿಗೆ ಇದರಿಂದ ಯಾವುದೇ ಬದಲಾವಣೆ ಇಲ್ಲ.
• ಇನ್ನು ಶೇ. 2ರಷ್ಟು ಜನರು ಧ್ವಂಧ್ವ ಸ್ಥಿತಿಯಲ್ಲಿದ್ದಾರೆ.