ನಲವತ್ತರ ನಂತರ ಮುಖದಲ್ಲಿ ಸುಕ್ಕು ಕಾಣಿಸಿಕೊಳ್ಳುವುದು ಸಹಜ. ಜೀವನದಲ್ಲಿ ಒತ್ತಡ ಹೆಚ್ಚಾದಷ್ಟು ಮುಖದ ಮೇಲೆ ವಯಸ್ಸಾದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆದರೆ ಚರ್ಮದ ಕಾಳಜಿಯನ್ನು ಮಾಡುವುದರ ಮೂಲಕ ಮುಖದ ಮೆಲೆ ಕಾಣಿಸಿಕೊಳ್ಳುವ ಸುಕ್ಕನ್ನು ಮರೆಮಾಚಬಹುದು. ಮುಖದ ಮೇಲಿನ ಸುಕ್ಕನ್ನು ಹೋಗಲಾಡಿಸಲು ಇಲ್ಲಿದೆ ಪರಿಹಾರ.
ತೆಂಗಿನ ಎಣ್ಣೆ:
ತೆಂಗಿನ ಎಣ್ಣೆ ಚರ್ಮದ ಆರೈಕೆ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಇದು ತ್ವಚೆಯನ್ನು ಉತ್ತಮವಾಗಿ ಮೋಶ್ಚರ್ ಮಾಡುತ್ತದೆ. ದಿನ ನಿತ್ಯ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ದಿನ ಮುಖದ ಮೇಲಿನ ಸುಕ್ಕು ಮರೆಯಾಗಿ ಚರ್ಮವು ಕಾಂತಿಯುತವಾಗುತ್ತದೆ. ಇನ್ನೂ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಚರ್ಮವು ಮೃದು ಮತ್ತು ಹೈಡ್ರೇಟ್ ಆಗುತ್ತದೆ.
ದಾಲ್ಚಿನ್ನಿ:
ದಾಲ್ಚಿನ್ನಿ ತ್ವಚೆಯಲ್ಲಿ ಕಂಡು ಬರುವ ವಯಸ್ಸಾ ಗುವಿಕೆ ಪ್ರಕ್ರಿಯೆಯನ್ನು ದೂರ ಮಾಡುವುದರ ಜೊತೆಗೆ ಚರ್ಮದ ಮೇಲೆ ಕಂಡುಬರುವ ಸುಕ್ಕುಗಳು ಹಾಗೂ ಗೆರೆಗಳನ್ನು ನಿವಾರಣೆ ಮಾಡಿ, ಮುಖದ ಸೌಂದರ್ಯ ವನ್ನು ಹೆಚ್ಚಿಸುತ್ತದೆ. ಒಂದು ಚಮಚ ದಾಲ್ಚಿನ್ನಿ ಪುಡಿ ಹಾಗೂ ಒಂದು ಚಮಚ ಜೇನುತುಪ್ಪವನ್ನು ಒಂದು ಬೌಲ್ಗೆ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ ಕೊಂಡು, ದಪ್ಪಗೆ ಪೇಸ್ಟ್ ಮಾಡಿಕೊಳ್ಳಿ. ಪೇಸ್ಟ್ ಅನ್ನು ದಪ್ಪಗೆ ಮುಖದ ಮೇಲೆ ಹಚ್ಚಿ, ಸುಮಾರು ಹದಿನೈದು ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ ಹೀಗೆ ವಾರದಲ್ಲಿ ಎರಡು ಮೂರು ಬಾರಿ ಮಾಡಿದರೆ ಮುಖದ ಮೇಲಿನ ಸುಕ್ಕು ನಿವಾರಣೆಯಾಗುತ್ತದೆ.
ಲವಂಗ:
ಲವಂಗ ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಸೌಂದರ್ಯವನ್ನು ಕೂಡ ಹೆಚ್ಚಿಸುವ ಗುಣವನ್ನು ಹೊಂದಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಚರ್ಮಸ ಆರೈಕೆಯನ್ನು ಮಾಡುತ್ತದೆ. ಒಂದು ಚಮಚ ತೆಂಗಿನಕಾಯಿ ಎಣ್ಣೆ ಹಾಗೂ ನಾಲ್ಕು ಹನಿಗಳಷ್ಟು ಲವಂಗದ ಎಣ್ಣೆ ಮಿಶ್ರಮಾಡಿ ಮುಖಕ್ಕೆ ಹಚ್ಚಿ ಸುಮಾರು ಅರ್ಧ ಗಂಟೆಗಳ ಕಾಲ ಹಾಗೇ ಬಿಟ್ಟು ನಂತರ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿದರೆ ಮುಖದಲ್ಲಿ ಕಾಣಿಸಿಕೊಳ್ಳುವ ಸುಕ್ಕು ನಿವಾರಣೆಯಾಗುತ್ತದೆ.