ಮಂಗಳೂರು: ಮಂಗಳೂರು ನಗರ ಪೊಲೀಸ್ ವತಿಯಿಂದ `ಡ್ರಗ್ಸ್ ಮುಕ್ತ ಕರ್ನಾಟಕ’ ಸಂಬಂಧ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ ಸಲುವಾಗಿ Decathlon, Mangalore Runners Club, ZEUS Fitness Club, WE R Cycling, Verito Media ಮತ್ತು ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಇಂದು ಬೆಳಿಗ್ಗೆ 07.00 ಗಂಟೆಗೆ ಮಂಗಳೂರು ನಗರದ ಟೌನ್ಹಾಲ್ನಿಂದ ಟಿ.ಎಂ.ಎ. ಪೈ ಕನ್ವೆನ್ಷನ್ ಹಾಲ್ವರೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ `ವಾಕ್ ರನ್ ಸೈಕ್ಲೋಥಾನ್’ ಕಾರ್ಯಕ್ರಮ ನಡೆಯಿತ್ತು.
ಈ ಕಾರ್ಯಕ್ರಮದಲ್ಲಿ ನಗರದ 24 ಕಾಲೇಜ್ಗಳ ವಿದ್ಯಾರ್ಥಿಗಳು ಮತ್ತು ವಿವಿಧ ಸಂಸ್ಥೆಗಳ ಸದಸ್ಯರು ಸೇರಿ ಒಟ್ಟು 1896 ಜನರು ಭಾಗವಹಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಕಾಲೇಜ್ ವಿದ್ಯಾರ್ಥಿಗಳು ಮಾದಕ ದ್ರವ್ಯ ವಿರೋಧಿ ಪ್ಲೇ ಕಾರ್ಡ್ಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಸೈಕ್ಲೋಥಾನ್ ಟೌನ್ಹಾಲ್ನಿಂದ ಹೊರಟು ಕ್ಲಾಕ್ಟವರ್-ಹಂಪನಕಟ್ಟೆ-ಎಲ್ಹೆಚ್ಹೆಚ್-ಮಿಲಾಗ್ರೀಸ್-ಫಳ್ನೀರ್-ಕಂಕನಾಡಿ-ಬೆಂದೂರ್ವೆಲ್-ಅಂಬೇಡ್ಕರ್ ವೃತ್ತ-ಬಂಟ್ಸ್ ಹಾಸ್ಟೆಲ್-ಪಿವಿಎಸ್ ವೃತ್ತ- ಟಿಎಂಎಪೈ ಕನ್ವೆನ್ಷನ್ ಹಾಲ್ ವರೆಗೆ 5 ಕಿ.ಮೀ ಮತ್ತು ನಡಿಗೆ ಮತ್ತು ಓಟವು ಟೌನ್ಹಾಲ್ನಿಂದ ಹೊರಟು ಕ್ಲಾಕ್ ಟವರ್-ಹಂಪನಕಟ್ಟೆ-ನವಭಾರತ ವೃತ್ತ-ಪಿವಿಎಸ್-ಟಿ.ಎಂ.ಎ ಪೈ ಕನ್ವೆನ್ಷನ್ ಹಾಲ್ವರೆಗೆ 2 ಕೀ.ಮೀ ಸಾಗಿದರು.