ಒಬ್ಬೊಬ್ಬರು ಸಮಯ ಸಿಕ್ಕಾಗಲ್ಲ ಮಲಗಿರುತ್ತಾರೆ. ಅವರಿಗೆ ಮಲಗೋದು ಬಿಟ್ಟು ಬೇರೆ ಅಭ್ಯಾಸವೇ ಇರೋದಿಲ್ಲ. ಹಾಗೆ ನೀವು ತುಂಬಾ ನಿದ್ರೆ ಮಾಡ್ತೀರಾ? ಹಾಗಾದ್ರೆ ಈ ಅಭ್ಯಾಸವನ್ನು ಈಗಲೇ ಬಿಟ್ಟುಬಿಡುವುದು ಉತ್ತಮ. ಏಕೆಂದರೆ ಹೆಚ್ಚು ಹೊತ್ತು ಮಲಗುವುದರಿಂದ ಅನೇಕ ರೀತಿಯ ರೊಗಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಹೆಚ್ಚು ಅಥವಾ ಕಡಿಮೆ ನಿದ್ರೆ ಸಾಮಾನ್ಯವಾಗಿ ದೈಹಿಕ ಅನಾರೋಗ್ಯದ ಲಕ್ಷಣವಾಗಿದೆ. ಅಷ್ಟಕ್ಕೂ ಇವುಗಳಿಂದ ನೀವು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ದೀರ್ಘಕಾಲ ನಿದ್ರೆ ಮಾಡುವವರಾಗಿದ್ದರೆ ಅಥವಾ ಯಾವಾಗಲೂ ನಿದ್ರೆ ಮಾಡುತ್ತಿದ್ದರೆ, ನೀವು ಬೇಗನೆ ಹೃದ್ರೋಗವನ್ನು ಅನುಭವಿಸಬಹುದು ಎಂದು ಸಂಶೋಧಕರು ಹೇಳುತ್ತಾರೆ. ಅಲ್ಲದೆ ಈ ಕೆಳಗಿನ ರೋಗಗಳಿಗೆ ಬಲಿಯಾಗಬೇಕಾಗುತ್ತದೆ.
ದೇಹಕ್ಕೆ ಕೆಲಸ ಕೊಡದೇ ಮಲಗುವುದರಿಂದ ಬೊಜ್ಜು ಬರುತ್ತದೆ. ಒಮ್ಮೆ ಬೊಜ್ಜು ಬಂದರೆ ಡಯಾಬಿಟೀಸ್ ಕೂಡ ಕರೆಯದ ಅತಿಥಿಯಾಗಿ ಬಂದು ಬಿಡುತ್ತದೆ. ಹೀಗೆ ದಿನವಿಡೀ ಮಲಗುವುದರಿಂದ ಒಂಥರಾ ಸುಸ್ತಾಗಿರುತ್ತೀರಿ. ವಿನಾಕಾರಣ ಸೋಮಾರಿತನ ಹೆಚ್ಚುವುದರಿಂದ ಯಾವುದೇ ಕೆಲಸ ಮಾಡದೇ ಸೋಮಾರಿಯಾಗಿಯೇ ಇರುತ್ತೀರಿ. ಇದರಿಂದ ತೂಕ ಹೆಚ್ಚಾಗುವುದು. ಕೆಟ್ಟ ಕೊಲೆಸ್ಟ್ರಾಲ್ ಕೂಡ ಉಂಟಾಗುತ್ತದೆ. ಯಾವಾಗಲು ಮಲಗುವುದರಿಂದ ಹೃದ್ರೋಗ ಅಂತಹ ಅಪಾಯಕಾರಿ ಕಾಯಿಲೆಗಳು ಬರಬಹುದು.
ಆದ್ದರಿಂದ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ ಹೆಚ್ಚಾಗಿ ನಿದ್ರೆ ಮಾಡುವುನ್ನು ಬಿಟ್ಟು ಕ್ರಿಯಾಶೀಲರಾಗಿರಿ. ಮನುಷ್ಯರಿಗೆ 8 ಗಂಟೆಗಳ ನಿದ್ರೆ ಅತ್ಯಗತ್ಯ. ರಾತ್ರಿ ಹೆಚ್ಚಾಗಿ ನಿದ್ರೆ ಮಾಡಿದರೆ ಹಗಲಿನಲ್ಲಿ ನಿದ್ರೆ ಬರುವುದಿಲ್ಲ. ಹಗಲಿನಲ್ಲಿ ಮಲಗಿದರೆ ರಾತ್ರಿ ನಿದ್ರೆ ಮಾಡಲು ಕಷ್ಟಪಡಬೇಕಾಗುತ್ತದೆ. ಹಾಗಾಗಿ ಹಗಲಿನಲ್ಲಿ ಯಾವುದಾದರೂ ಕೆಲಸ ವ್ಯಾಯಾಮ, ಯೋಗ, ಓದುವುದು ಅಥವಾ ಯಾವುದಾದರೂ ಒಂದು ಕೆಲಸದಲ್ಲಿ ನಿರತರಾಗಿರುವ ಹಾಗೆ ಮಾಡಿಕೊಂಡರೆ ಆರೋಗ್ಯಕ್ಕೂ ಕೂಡ ಒಳ್ಳೆಯದು.