ಬೆಂಗಳೂರು: ಸಿದ್ದರಾಮಯ್ಯರವರು ಕೇಂದ್ರ ಸರ್ಕಾರವು ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಲು ಅಡ್ಡಗಾಲುಹಾಕುತ್ತಿದೆ. ಅಕ್ಕಿ ವಿತರಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದು ಈ ಹಿನ್ನಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ‘ಕೇಂದ್ರ ಸರ್ಕಾರವು ಹಣದುಬ್ಬರ ನಿಯಂತ್ರಿಸಲು ಯತ್ನಿಸುತ್ತಿದ್ದು ಅದಕ್ಕೆ ಭಾರತೀಯ ಆಹಾರ ನಿಗಮವು ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಹಾಗೂ ಅಕ್ಕಿಯನ್ನು ಮಾರಾಟ ಮಾಡುತ್ತದೆ. ಅಕ್ಕಿ ಹಾಗೂ ಗೋದಿ ಮಾರಾಟದ ಕುರಿತು 2೦23-24ನೇ ಸಾಲಿನ ಮೊದಲ ಹರಾಜು ಜೂನ್ 28ರಂದು ನಡೆಯಲಿದೆ’ ಎಂದು ಹೇಳುವ ಮೂಲಕ ಅಕ್ಕಿ ಮಾರಾಟವನ್ನು ಸ್ಥಗಿತಗೊಳಿಸಿಲ್ಲಎಂದು ಸ್ಪಷ್ಟನೆ ನೀಡಿದೆ.ಭಾರತೀಯ ಆಹಾರ ನಿಗಮದ ಜೊತೆಗೆ ಅಕ್ಕಿ ನೀಡುವ ಕುರಿತು ಮಾತನಾಡಲಾಗಿದ್ದು ನಮ್ಮ ಬಳಿ ಸ್ಟಾಕ್ ಇದೆ, ಅಕ್ಕಿ ಕೊಡುತ್ತೇವೆ ಎಂದು FCI ನವರು ಹೇಳಿದ್ದಾರೆ. ಅದಾದ ನಂತರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ ಅವರು ಎಫ್ಸಿಐನ ಉಪ ಪ್ರಧಾನ ವ್ಯವಸ್ಥಾಪಕರನ್ನು ಕರೆದು ಮಾತನಾಡಿದರು. ನೀವು ಒಪ್ಪಿಕೊಂಡ ಮೇಲೆ ತಪ್ಪಿಸಬಾರದು ಎಂದು ಹೇಳಿದ್ದೆವು. ಇದಕ್ಕೆ ಅವರು ಒಪ್ಪಿ ಎಫ್ಸಿಐ ನಲ್ಲಿ 7 ಲಕ್ಷ ಟನ್ ಅಕ್ಕಿ ಇದೆ ಎಂದು ಸಿದ್ಧರಾಮಯ್ಯ ಹೇಳಿದ್ದರು.
ಆದರೆ ಜೂನ್ 13ರಂದು ಎಫ್ ಸಿ ಐ ಪತ್ರ ಬರೆದಿದ್ದು ಗೋಧಿ ಹಾಗೂ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಸರ್ಕಾರಗಳಿಗೆ ಮಾರಾಟ ಮಾಡುವುದನ್ನು ರದ್ದುಪಡಿಸಲಾಗಿದೆ. ಆದರೆ ಈಶಾನ್ಯ ರಾಜ್ಯಗಳಿಗೆ ಮಾತ್ರ ಈ ಯೋಜನೆ ಮುಂದುವರೆಯುತ್ತದೆ. ಹರಾಜಿಗೆ ಮುಂದೆ ಎಫ್ಸಿಐ ಮಾರ್ಗಸೂಚಿ ಬಿಡುಗಡೆ ಮಾಡುತ್ತದೆ ಎಂದೂ ಹೇಳಿದ್ದಾರೆ ಎಂದರು.
ಮೊದಲಿಗೆ ಅಕ್ಕಿ ಕೊಡುತ್ತೇವೆ ಎಂದು ಒಪ್ಪಿಕೊಂಡಿದ್ದರು. ಅದರ ಆಧಾರದಲ್ಲಿ ನಾವು ಜುಲೈ 1ರಿಂದ ಕೊಡಲು ಘೋಷಣೆ ಮಾಡಿದ್ದೆವು. ಕರ್ನಾಟಕದಲ್ಲಿ ಅಕ್ಕಿ ಸಿಗುವುದಿಲ್ಲವಾದ್ದರಿಂದ ಎಫ್ ಸಿ ಐ ಮೇಲೆ ಭರವಸೆ ಇಟ್ಟಿದ್ದು ಒಪ್ಪಿಕೊಂಡ ಒಂದೇ ದಿನದಲ್ಲಿ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಮಾಡಿ ಅಕ್ಕಿ ಕೊಡಬಾರದು ಎಂದು ತಿಳಿಸಿದೆ. ಒಂದು ವೇಳೆ ಅಕ್ಕಿ ಕೊಟ್ಟರೆ ಇದರಿಂದ ಕರ್ನಾಟಕ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣಕ್ಕಾಗಿ ಈ ನಿರ್ಧಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯರವರು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು.