ಕರ್ನಾಟಕದ ಜಾನಪದ ನೃತ್ಯಗಳಲ್ಲಿ ಒಂದಾದ ಕೋಲಾಟ ಐತಿಹಾಸಿಕ ಹಿನ್ನಲೆಯುಳ್ಳ ನೃತ್ಯವಾಗಿದೆ. ದಾಖಲೆಗಳ ಪ್ರಕಾರ ಎಳನೇ ಶತಮಾದಲ್ಲಿ ಕೋಲಾಟವು ಹುಟ್ಟಿರುತ್ತದೆ. ಹಾಡು ಮತ್ತು ಕುಣಿತದ ಮಿಶ್ರಣದ ಕಲೆಯೇ ಕೋಲಾಟ.
ಗಂಡು ಮತ್ತು ಹೆಣ್ಣು ಮಕ್ಕಳು ಗುಂಪಲ್ಲಿ ಎದುರಾಗಿ ನೃರ್ತಿಸುವ ಈ ಕಲೆಯನ್ನು ನಾವು ಹೆಚ್ಚಾಗಿ ಉತ್ಸವಗಳಲ್ಲಿ ಕೋಲು ನೃತ್ಯ ಎಂಬ ಹೆಸರಲ್ಲಿ ಗುರುತಿಸುತ್ತೇವೆ. ನೃತ್ಯಗಾರರು ಕೈಯಲ್ಲಿ ಹಿಡಿದಿರುವ ಕೋಲುಗಳನ್ನು ದೇಹದ ವಿವಿಧ ಭಾಗಗಳ ಬಳಿಯಿಂದ ಅಂದರೆ ತಲೆಯ ಮೇಲೆ, ಹೆಗಲ ಮೇಲೆ, ಬೆನ್ನ ಹಿಂದೆ ಮತ್ತು ಮೋಣಕಾಲುಗಳ ಬಳಿ ಕೋಲುಗಳನ್ನು ಹೊಡೆಯುತ್ತಾರೆ.
ಈ ಕೋಲಾಟವನ್ನು ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ, ಜಾತ್ರೆ ಉತ್ಸವಗಳಲ್ಲಿ, ವಿಶೇಷ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಬಹುದು.
ಈ ಕೋಲಾಟ ನೃತ್ಯದಲ್ಲಿ ಹತ್ತರಿಂದ ಹದಿನಾರು ನೃತ್ಯಗಾರರು ಭಾಗವಹಿಸುವರು. ಹೆಜ್ಜೆಗೆ ಹೆಜ್ಜೆಯನ್ನು ಸೇರಿಸಿ ತಾಳ ಲಯಕ್ಕೆ ತಕ್ಕಂತೆ ನೃತ್ಯ ಭಂಗಿಯನ್ನು ಬದಾಲಾಯಿಸಿ, ಎಲ್ಲರು ಒಂದೆಡೆ ಗುಂಪಾಗಿ ಸೇರಿ ಮತ್ತೇ ಬೇರ್ಪಟ್ಟು, ತಿರುಗಿ ಕುಣಿಯುವ ವಿನ್ಯಾಸವನ್ನು ಎಲ್ಲರೂ ಯತಬದ್ಧವಾಗಿ ಅನುಕರಣೆಯಲ್ಲಿ ನೃರ್ತಿಸುವುದನ್ನು ನೋಡುವುದು ಕಣ್ಣಿಗೆ ಹಬ್ಬದಂತಿರುತ್ತದೆ.
ಒಂದೊಂದು ಹೆಜ್ಜೆಯಿಂದ ಆರಂಭವಾಗುವ ನೃತ್ಯವು ಮುಂದೆ ಮೂರು ಹೆಜ್ಜೆಗೆ ತಿರುಗುತ್ತದೆ. ಜೋತೆಗೆ ನೃತ್ಯವು ನಿಧಾನಕ್ಕೆ ವೇಗವನ್ನು ಪಡೆಯುತ್ತದೆ.
ಕೋಲಾಟ ನೃತ್ಯಗಾರರು ತೊಡುವ ಬಟ್ಟೆಯು ಭಿನ್ನವಾಗಿರುತ್ತದೆ. ಬಯಲು ಸೀಮೆಯ ಕೋಲಾಟದ ನೃತ್ಯಗಾರರು ಅಂಗಿ,ತಲೆ ಮತ್ತು ಸೊಂಟಕ್ಕೆ ಬಣ್ಣ ವಸ್ತ್ರವನ್ನು ಕಟ್ಟಿ ಕುಣಿಯುತ್ತಾರೆ. ಉತ್ತರ ಕರ್ನಾಟಕದಲ್ಲಿ ಕಚ್ಚೆ, ತಲೆಗೆ ಟೋಪಿ, ಸೊಂಟಕ್ಕೆ ವಸ್ತ್ರವನ್ನು ಕಾಲಿಗೆ ಗೆಜ್ಜೆಯನ್ನು ಕಟ್ಟಿರುತ್ತಾರೆ.ದಕ್ಷಿಣ ಕನ್ನಡದಲ್ಲಿ ಕೋಲುಗಳ ಶಬ್ದನಾದವೇ ಹಾಡಿಗೆ ಪೂರಕವಾದ ತಾಳವನ್ನಾಗಿ ಬಳಸುತ್ತಾರೆ. ಉತರ ಕರ್ನಾಟಕದಲ್ಲಿ ಮದ್ದಲೆ, ಡಪ್ಪು, ತಬಲಾ, ಕಂಚಿನ ತಾಳಗಳನ್ನು ಕೂಡ ಬಳಸುತ್ತಾರೆ.
ನೃತ್ಯದ ಕೋಲುಗಳನ್ನು ಮಧ್ಯ ಭಾಗದಲ್ಲಿ ಇಟ್ಟು ಕೈಮುಗಿದು, ಗುರವಿಗೆ ನಮಸ್ಕಾರಮಾಡಿ ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಕೋಲಾಟವು ಆರಂಭದಲ್ಲಿ ನಿಧಾನಗತಿಯಲ್ಲಿ ಕೋಲಾಟದ ಸಪ್ಪಳವು ಕೇಳಿಸುತ್ತದೆ.
ಒಬ್ಬರ ಕೋಲಿನಿಂದ ಇನ್ನೊಬ್ಬರ ಕೋಲಿಗೆ ಮುಟ್ಟಿಸುವುದರ ಮೂಲಕ ಆರಂಭಗೊಳ್ಳುವ ನೃತ್ಯವು,ಒಬ್ಬನ ಸುತ್ತ ಇನ್ನೊಬ್ಬ, ಗುಂಪಿನಲ್ಲಿ ಚದುರಿ ನಿಂತು ಒಳಗೆ ಹೊರಗೆ ಕೋಲನ್ನು ಬದಲಾಯಿಸಿ ಕೊಡುವುದು, ಕುಳಿತು, ಎರಡು ಗುಂಪುಗಳು ಎದುರುಬದರು ನಿಂತು ಕೋಲನ್ನು ಬದಲಾಯಿಸುವುದು ಈ ರೀತಿ ಅನೇಕ ಭಗೆಯ ವಿನ್ಯಾಸಗಳಲ್ಲಿ ನೃತ್ಯವನ್ನು ಕಾಣಬಹದು.
ಕರ್ನಾಟಕದ ಕೋಲಾಟದಲ್ಲಿ ಒಟ್ಟು ೫೦ ವಿವಿಧದ ನೃತ್ಯ ಸಂಯೋಜನೆಗಳಿವೆ. ಉತ್ತರ ಭಾರತದಲ್ಲಿ ನಾವು ಸಾಮಾನ್ಯವಾಗಿ ದಾಂಡಿಯ ನೃತ್ಯ ಎಂಬ ಹೆಸರಿನಲ್ಲಿ ಕೋಲಾಟವನ್ನು ಗುರುತಿಸುತ್ತೇವೆ. ನವರಾತ್ರಿಯ ಸಂದರ್ಭದಲ್ಲಿ ಸಾರ್ವಜನಿಕ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದಾಂಡಿಯ ನೃತ್ಯವನ್ನು ಮಕ್ಕಳು, ಹಿರಿಯರು, ಹುಡುಗರು ಹುಡುಗಿಯರು ವಯಸ್ಸಿನ ನಿರ್ಭಂದವಿಲ್ಲದೆ ಕುಣಿಯುತ್ತಾರೆ.
ಗೋಕುಲದಲ್ಲಿ ಶ್ರೀಕೃಷ್ಣನ ಜನನವಾದಾಗ ಯಾದವರು ತಮ್ಮ ಸಂತೋಷವನ್ನು ಕೋಲಾಡುವ ಮೂಲಕ ವ್ಯಕ್ತಪಡಿಸಿದ್ದರು. ಗೋಪಿಕೆಯರು ಶ್ರೀ ಕೃಷ್ಣನೊಂದಿಗೆ ಬಣ್ಣದ ಕೋಲುಗಳಿಂದ ಕೋಲಾಟವಾಡಿರುವ ಪ್ರತೀಕಗಳಿಗೆ. ಇವೆಲ್ಲವು ಕೋಲಾಟದ ಪ್ರಾಚೀನತೆಗೆ ಪುಷ್ಟಿಯನ್ನು ನೀಡುತ್ತವೆ.