ಯುಪಿಐ ಎನ್ಪಿಸಿಐ ಅಭಿವೃದ್ಧಿಪಡಿಸಿದ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದು, ಮೊಬೈಲ್ ಅಪ್ಲಿಕೇಶನ್ ಮೂಲಕ ಎರಡು ಬ್ಯಾಂಕುಗಳ ನಡುವೆ ಹಣವನ್ನು ತ್ವರಿತವಾಗಿ ವರ್ಗಾಯಿಸಲು ಸಹಾಯ ಮಾಡುತ್ತದೆ. ಯುಪಿಐ ಬಂದ ಮೇಲೆ ಹಣಕಾಸು ವಹಿವಾಟಿನ ಚಹರೆಯೇ ಪೂರ್ಣ ಬದಲಾಗಿದೆ. ಜನರು ತಮ್ಮ ಬಹುತೇಕ ಹಣಕಾಸಿನ ವಾಹಿವಟನ್ನು ಈಗ ಯುಪಿಐನ ಮೂಲಕ ಮಾಡುತ್ತಿದ್ದಾರೆ.
ಯುಪಿಐ ವಹಿವಾಟುಗಳಿಂದ ಹೆಚ್ಚಿನ ಆದಾಯ ಇಲ್ಲದೇ ಇರುವುದು ಮತ್ತು ಅವುಗಳನ್ನು ಸಂಭಾಳಿಸಿಕೊಂಡು ಹೋಗುವುದು ಬ್ಯಾಂಕ್ಗಳಿಗೆ ಕಷ್ಟವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವ ಈ ವಹಿವಾಟುಗಳಿಗೆ ಮಿತಿ ಹಾಕಲು ಯುಪಿಐ ಆ್ಯಪ್ಗಳು ಹಾಗೂ ಬ್ಯಾಂಕುಗಳು ನಿರ್ಧರಿಸಿವೆ.
ಯುಪಿಐ ಮೂಲಕ ಒಬ್ಬ ವ್ಯಕ್ತಿ ದಿನಕ್ಕೆ 1ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ವಹಿವಾಟು ಮಾಡುವಂತಿಲ್ಲ ಹಾಗೆಯೇ ದಿನಕ್ಕೆ 20ಕ್ಕಿಂತ ಹೆಚ್ಚು ವಹಿವಾಟು ನಡೆಸುವಂತಿಲ್ಲ. ಪೇಟಿಎಂ, ಗೂಗಲ್ ಪೇ ಮತ್ತು ಅಮೇಜಾನ್ ಪೇ ಆ್ಯಪ್ಗಳು ದಿನಕ್ಕೆ 1ಲಕ್ಷ ರೂ ಮೊತ್ತದ ವಹಿವಾಟು ನಡೆಸಲು ಮಾತ್ರ ಅವಕಾಶ ಕೊಟ್ಟಿವೆ.
ಇತರೆ ಬ್ಯಾಂಕಿನಿಂದ ಯುಪಿಐ ವಹಿವಾಟು ಮಿತಿ:
*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಳಕೆದಾರರಿಗೆ ಯುಪಿಐ ಮೂಲಕ ₹ 1 ಲಕ್ಷ ಮಿತಿ.
*ಎಚ್ಡಿಎಫ್ಸಿ ಬಳಕೆದಾರರಿಗೂ ಸಹ ಯುಪಿಐ ಮೂಲಕ ₹1 ಲಕ್ಷ ರೂಗಳ ಮಿತಿ. ಹೊಸ ಗ್ರಾಹಕರಿಗೆ ಈ ಮಿತಿ ₹ 5000.
*ಐಸಿಐಸಿಐ ಬ್ಯಾಂಕ್ ಗ್ರಾಹಕರು ₹10,000 ವರೆಗೆ ಯುಪಿಐ ವಹಿವಾಟುಗಳನ್ನು ಮಾಡಬಹುದು. ಗೂಗಲ್ ಪೇ ಬಳಕೆದಾರರಿಗೆ ಈ ಮಿತಿ ₹ 25,000.
*ಆಕ್ಸಿಸ್ ಬ್ಯಾಂಕ್ ಯುಪಿಐ ವಹಿವಾಟಿನ ಮಿತಿ ₹ 1 ಲಕ್ಷ.
*ಬ್ಯಾಂಕ್ ಆಫ್ ಬರೋಡಾ ಯುಪಿಐ ವಹಿವಾಟಿನ ಮಿತಿ ₹ 25,000.