ದೈವಿಕ ಕಾರ್ಯಗಳೇ ಆಗಲಿ, ವೈದ್ಯಕೀಯ ಕಾರ್ಯಗಳೇ ಬೇವು ಕಣ್ಣ ಮುಂದೆ ಬೇಕಾಗುತ್ತದೆ. ವೇದ ಸಾಹಿತ್ಯದಲ್ಲಿ ಬೇವಿನ ಮರದ ಪ್ರತಿ ಭಾಗಕೂಡ ಉಪಯೋಗಕಾರಿ ಎಂದು ಹೇಳಲಾಗಿದೆ. ಬಹು ಉಪಯೋಗಿ ಬೇವಿನ ಗುಣದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ವ್ಯಕ್ತಿಯ ದೈಹಿಕ, ಮಾನಸಿಕ ವಿಷಯಗಳ ಸಧಾರಣೆಯಲ್ಲಿ ಬೇವು ಆದ್ಯ ಪಾತ್ರ ವಹಿಸುತ್ತದೆ ಎಂದರೆ ನಂಬಲೇಬೇಕು.
ಬೇವು ಪರಿಸರವನ್ನು ನಿರ್ಮಲವಾಗಿಟ್ಟು ಶುದ್ಧ ಗಾಳಿಯನ್ನು ನೀಡುತ್ತದೆ. ಬೇವು ಕಹಿಯಾದದರೂ ಅದರ ಉಪಯೋಗದ ಕಾರಣದಿಂದ ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ಬೇವಿನ ಎಲೆಯಿಂದ ನಾವು ಹಲವಾರು ರೋಗಗಳಿಂದ ಮುಕ್ತಿ ಪಡೆಯಲು ಸಾಧ್ಯ. ಬೇವಿನ ಎಲೆಯಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ರೋಗಗಳ ವಿರುದ್ಧ ಹೋರಾಡುವ ಶಕ್ತಿಯಿದೆ. ಬೇವಿನ ಎಲೆಯಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಬದಲಾದ ಜೀವನಶೈಲಿಯಿಂದ ಇಂದು ಅನೇಕರಿಗೆ ತಲೆನೋವು, ಕೀಲು ನೋವು, ಸೊಂಟ ನೋವು ಸೇರಿದಂತೆ ಅನೇಕ ನೋವುಗಳು ಕಾಡುತ್ತವೆ. ಈ ನೋವುಗಳಿಂದ ಮುಕ್ತಿ ಪಡೆಯಲು ಜನರು ನೋವು ನಿವಾರಕ ಮಾತ್ರೆ ಸೇವಿಸುತ್ತಾರೆ. ಈ ಮಾತ್ರೆಗಳ ಬದಲು ಮನೆಮದ್ದಿನ ಮೂಲಕವೇ ಎಲ್ಲ ನೋವನ್ನು ಕಡಿಮೆ ಮಾಡಿಕೊಳ್ಳಲು ಈ ಬೇವಿನ ಎಲೆ ಸಹಾಯ ಮಾಡುತ್ತದೆ.
ಬೇವಿನ ಎಲೆಯಲ್ಲಿ ಎಲ್ಲಾ ರೀತಿಯ ನೋವು ನಿವಾರಿಸುವ ಶಕ್ತಿಯಿದೆ. ಬೇವಿನ ಎಲೆಯಲ್ಲಿ ತಾಮ್ರ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣದ ಪ್ರಮಾಣ ಹೆಚ್ಚಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಗಳ ವಿರುದ್ಧ ದೇಹವನ್ನು ರಕ್ಷಿಸುವ ಶಕ್ತಿ ಬೇವಿನ ಎಲೆಯಲ್ಲಿದೆ. ಬೇವಿನ ಎಲೆಗೆ ಉರಿಯೂತ ಹಾಗೂ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿಯಿದೆ. ಹಲವಾರು ರೋಗಗಳಿಗೆ ಬೇವಿನ ಎಲೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ದಾಲ್ಚಿನಿ, ಲವಂಗದ ಜೊತೆ ಬೇವಿನ ಎಲೆಯನ್ನು ಹಾಕಿ ಲೇಪ ಮಾಡಿ ನೋವಾದ ಜಾಗಕ್ಕೆ ಹಚ್ಚಿಕೊಳ್ಳಬೇಕು. ಆಗ ನೋವು ಕಡಿಮೆ ಆಗುತ್ತದೆ.
ಬೇವಿನ ಎಲೆಯಲ್ಲಿ ತಾಮ್ರ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣದ ಪ್ರಮಾಣವು ಹೆಚ್ಚಿದ್ದರಿಂದ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಗಳ ವಿರುದ್ಧ ದೇಹವನ್ನು ರಕ್ಷಿಸುವ ಶಕ್ತಿ ಈ ಬೇವಿನ ಎಲೆ ಗೆ ಇದೆ.
ಬೇವಿನ ಎಲೆಯನ್ನು ಕುದಿಸಿದ ನೀರಿನಲ್ಲಿ ಹಾಕಿ ಕಾಲಿ ಹೊಟ್ಟೆಯಲ್ಲಿ ಸ್ವಲ್ಪ ಸೇವಿಸುವುದರಿಂದ ಮಧುಮೇಹ ವನ್ನು ಕೂಡ ಕಡಿಮೆ ಮಾಡಬಹುದಾಗಿದೆ.
ಕೀಟಗಳ ಕಡಿತ, ತುರಿಕೆ, ಎಕ್ಸಿಮಾ, ಹುಳಕಡ್ಡಿ ಮತ್ತು ಕೆಲವು ಸೌಮ್ಯ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬೇವಿನ ಎಲೆಗಳು ಮತ್ತು ಅರಿಶಿನ ಅರೆದ ಲೇಪವನ್ನು ಬಳಸಬಹುದಾದರೂ, ಎಲೆಗಳನ್ನು ಅಗಿಯುವುದರಿಂದ ನಿಮಗೆ ಹೆಚ್ಚಿನ ಪೋಷಣೆ, ಶುದ್ಧೀಕರಿಸಿದ ಮತ್ತು ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಸಾಧ್ಯ.
ಹೀಗೆ ಬೇವಿನ ಎಲೆ, ಪ್ರತಿಯೊಂದರಲ್ಲಿಯೂ ತನ್ನದೆ ಆದ ಪ್ರಭಾವವನ್ನು ಬೀರುತ್ತದೆ.