ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್ಸಂಗ್ ಇಂದು ಅದ್ಭುತವಾದ ಆವಿಷ್ಕಾರಗಳನ್ನು ಹೊಂದಿರುವ ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಅನ್ನು ಬಿಡುಗಡೆ ಮಾಡಿದೆ. ಹೊಸ ಎ ಸರಣಿಯ ಸಾಧನಗಳು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆ, ಎಐ ಫೀಚರ್ ಗಳುಳ್ಳ ಕ್ಯಾಮೆರಾ, ಟ್ಯಾಂಪರ್-ರೆಸಿಸ್ಟೆಂಟ್ ಸೆಕ್ಯೂರಿಟಿ, ಸ್ಯಾಮ್ಸಂಗ್ ನಾಕ್ಸ್ ವಾಲ್ಟ್ ಸೇರಿದಂತೆ ಅನೇಕ ಪ್ರಮುಖ ಹೊಸ ವೈಶಿಷ್ಟ್ಯಗಳನ್ನು ಹೊಂದಿವೆ.
“ಗ್ಯಾಲಕ್ಸಿ ಎ ಸರಣಿಯು ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ಫೋನ್ ಸರಣಿಯಾಗಿದೆ. ಇದು ಭಾರತದ ಎಂಝಡ್ ಗ್ರಾಹಕರಲ್ಲಿ ಮಧ್ಯೆ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಗ್ಯಾಲಕ್ಸಿ ಎ55 5ಜಿ & ಎ35 5ಜಿ ಬಿಡುಗಡೆಯು ಹೊಸ ರೀತಿಯ ಅಪೂರ್ವ ನಾವೀನ್ಯತೆಗಳನ್ನು ಎಲ್ಲರಿಗೂ ದೊರಕಿಸುವಂತೆ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಪಾದಿಸುತ್ತದೆ. ಗ್ಯಾಲಕ್ಸಿ ಎ55 5ಜಿ ಮತ್ತು ಎ35 5ಜಿ ಸಾಧನಗಳು 5ಜಿ ಸ್ಮಾರ್ಟ್ಫೋನ್ ವಿಭಾಗದಲ್ಲಿ ಮತ್ತು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಿಡ್ ಪ್ರೀಮಿಯಂ (ರೂ.30,000-ರೂ.50,000) ವಿಭಾಗದಲ್ಲಿ ನಮ್ಮ ನಾಯಕತ್ವವನ್ನು ಗಟ್ಟಿಗೊಳಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ಸ್ಯಾಮ್ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್ ಸೀನಿಯರ್ ಡೈರೆಕ್ಟರ್ ಘುಫ್ರಾನ್ ಆಲಂ ಹೇಳಿದರು.
ವಿನ್ಯಾಸ ಮತ್ತು ಬಾಳಿಕೆ: ಮೊದಲ ಬಾರಿಗೆ, ಗ್ಯಾಲಕ್ಸಿ ಎ55 5ಜಿ ಲೋಹದ ಚೌಕಟ್ಟನ್ನು ಹೊಂದಿದೆ ಮತ್ತು ಗ್ಯಾಲಕ್ಸಿ ಎ35 5ಜಿ ಪ್ರೀಮಿಯಂ ಗ್ಲಾಸ್ ಅನ್ನು ಮರಳಿ ಪಡೆದಿದೆ. ಈ ಫೋನ್ಗಳು ಆಸಮ್ ಲಿಲಾಕ್, ಆಸಮ್ ಐಸ್ ಬ್ಲೂ ಮತ್ತು ಆಸಮ್ ನೇವಿ ಎಂಬ ಮೂರು ಟ್ರೆಂಡಿ ಬಣ್ಣಗಳಲ್ಲಿ ಲಭ್ಯವಿದೆ. ಇದು ಐಪಿ67 ರೇಟಿಂಗ್ ಗಳಿಸಿದ್ದು, 1 ಮೀಟರ್ ಶುದ್ಧ ನೀರಿನಲ್ಲಿ 30 ನಿಮಿಷಗಳವರೆಗೆ ಇರಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಧೂಳು ಮತ್ತು ಮರಳು ನಿರೋಧಕ ಗುಣ ಇರುವ ಫೋನ್ ಗಳಾಗಿವೆ.
6.6-ಇಂಚಿನ ಎಫ್ಎಚ್ಡಿ+ ಸೂಪರ್ ಅಮೋಲ್ಡ್ ಡಿಸ್ಪ್ಲೇ ಮತ್ತು ಕಡಿಮೆಗೊಳಿಸಿದ ಬೆಜೆಲ್ಗಳ ಜೊತೆಗೆ 120ಹರ್ಟ್ಜ್ ರಿಫ್ರೆಶ್ ದರ ಹೊಂದಿದ್ದು, ಅತ್ಯಂತ ಸೂಕ್ಷ್ಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಈ ಸ್ಮಾರ್ಟ್ಫೋನ್ಗಳು ಮುಂಭಾಗ ಮತ್ತು ಹಿಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆಯೊಂದಿಗೆ ಬಾಳಿಕೆ ಬರುವಂತಹ ವಿಶೇಷತೆ ಹೊಂದಿವೆ.
ಕ್ಯಾಮೆರಾ ಆವಿಷ್ಕಾರಗಳು: ಈ ಹೊಸ ಎ ಸರಣಿಯ ಸ್ಮಾರ್ಟ್ಫೋನ್ಗಳು ಬಳಕೆದಾರರು ಅತ್ಯುನ್ನತ ಕಂಟೆಂಟ್ ಗಳನ್ನು ಸಿದ್ಧಗೊಳಿಸಲು ನವೀನ ಎಐ- ವರ್ಧಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು ನೀಡುತ್ತವೆ. ಫೋಟೋ ರೀಮಾಸ್ಟರ್, ಇಮೇಜ್ ಕ್ಲಿಪ್ಪರ್ ಮತ್ತು ಆಬ್ಜೆಕ್ಟ್ ಎರೇಸರ್ ಎಂಬ ಈ ವೈಶಿಷ್ಟ್ಯಗಳು ಲಭ್ಯವಿದೆ. ಗ್ಯಾಲಕ್ಸಿ ಎ55 5ಜಿ ಮತ್ತು ಎ35 5ಜಿ ಗಳು 50 ಎಂಪಿ ಟ್ರಿಪಲ್ ಕ್ಯಾಮೆರಾ ಹೊಂದಿದ್ದು, ಎಐ ಇಮೇಜ್ ಸಿಗ್ನಲ್ ಪ್ರೊಸೆಸಿಂಗ್ (ಐಎಸ್ಪಿ)ಮೂಲಕ ಉನ್ನತೀಕರಿಸಲ್ಪಟ್ಟ ನೈಟೋಗ್ರಫಿ ಹೆಗ್ಗಳಿಕೆ ಪಡೆದಿದೆ. ಆ ಮೂಲಕ ಎ ಸರಣಿಯಲ್ಲಿ ನೀವು ಹಿಂದೆಂದೂ ನೋಡಿರದ ಕಡಿಮೆ-ಬೆಳಕಿನ ಚಿತ್ರಗಳನ್ನು ತೆಗೆಯಬಹುದಾಗಿದೆ.
ಅಪೂರ್ವ ಭದ್ರತೆ: ಸ್ಯಾಮ್ಸಂಗ್ ನಾಕ್ಸ್ ವಾಲ್ಟ್ ಸೆಕ್ಯುರಿಟಿ ವೈಶಿಷ್ಟ್ಯವನ್ನು ಮೊದಲ ಬಾರಿಗೆ ಎ-ಸೀರೀಸ್ನಲ್ಲಿ ನೀಡಲಾಗಿದ್ದು, ಗ್ರಾಹಕರಿಗೆ ಅಪೂರ್ವವಾದ ಭದ್ರತೆಯನ್ನು ಒದಗಿಸುತ್ತದೆ. ಹಾರ್ಡ್ವೇರ್ ಆಧಾರಿತ ಭದ್ರತಾ ವ್ಯವಸ್ಥೆಯು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ದಾಳಿಗಳ ವಿರುದ್ಧ ಸಮಗ್ರ ರಕ್ಷಣೆ ನೀಡುತ್ತದೆ. ಪಿನ್ ಕೋಡ್ಗಳು, ಪಾಸ್ವರ್ಡ್ಗಳು ಮತ್ತು ಪ್ಯಾಟರ್ನ್ಗಳಂತಹ ಲಾಕ್ ಸ್ಕ್ರೀನ್ ಕ್ರೆಡೆನ್ಷಿಯಲ್ ಗಳು ಒಳಗೊಂಡಂತೆ ಸಾಧನಗಳಲ್ಲಿನ ಅತ್ಯಂತ ಮಹತ್ವದ ಡೇಟಾಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಅತ್ಯುತ್ತಮ ಕಾರ್ಯಕ್ಷಮತೆ: 4ಎನ್ಎಂ ಪ್ರೊಸೆಸ್ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಹೊಚ್ಚ ಹೊಸ ಎಕ್ಸಿನೋಸ್ 1480 ಪ್ರೊಸೆಸರ್ ಗ್ಯಾಲಕ್ಸಿ ಎ55 5ಜಿಗೆ ಅಪಾರವಾದ ಶಕ್ತಿ ನೀಡುತ್ತದೆ. ಗ್ಯಾಲಕ್ಸಿ ಎ35 5ಜಿ ಅನ್ನು 5ಎನ್ಎಂ ಪ್ರೊಸೆಸ್ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಎಕ್ಸಿನೋಸ್ 1380 ಪ್ರೊಸೆಸರ್ಗೆ ಅಪ್ಗ್ರೇಡ್ ಮಾಡಲಾಗಿದೆ. ಈ ಅತ್ಯುನ್ನತ ಫೋನ್ಗಳು ಹಲವಾರು ಎನ್ಪಿಯು, ಜಿಪಿಯು ಮತ್ತು ಸಿಪಿಯು ಅಪ್ಗ್ರೇಡ್ಗಳೊಂದಿಗೆ 70%+ ದೊಡ್ಡ ಕೂಲಿಂಗ್ ಚೇಂಬರ್ನೊಂದಿಗೆ ಬರುತ್ತವೆ. ಅದು ನೀವು ಆಟವಾಡುತ್ತಿರುವಾಗಲೀ, ಅಥವಾ ಮಲ್ಟಿ ಟಾಸ್ಕಿಂಗ್ ಮಾಡುತ್ತಿರುವಾಗಲೀ ಅತ್ಯುತ್ತಮವಾಗಿ ಕಾರ್ಯನಿರ್ಹವಿಸುವಂತೆ ಮಾಡುತ್ತದೆ.
ಗ್ಯಾಲಕ್ಸಿ ಎ55 5ಜಿ ಯಲ್ಲಿ 12ಜಿಬಿ ರಾಮ್ ಅನ್ನು ಪರಿಚಯಿಸುವ ಮೂಲಕ ಈ ಫೋನು ಈ ಬೆಲೆ ವಿಭಾಗದಲ್ಲಿನ ಗೇಮ್ ಚೇಂಜರ್ ಫೋನ್ ಎಂದೇ ಕರೆಸಿಕೊಂಡಿದೆ.
ಅದ್ಭುತ ಅನುಭವ: ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಖರೀದಿದಾರರು ಸ್ಯಾಮ್ಸಂಗ್ ವ್ಯಾಲೆಟ್ ಸೌಲಭ್ಯ ಪಡೆಯುತ್ತಾರೆ. ಇದು ನಿಮ್ಮ ಗ್ಯಾಲಕ್ಸಿ ಸಾಧನದಲ್ಲಿ ನಿಮ್ಮ ಅಗತ್ಯ ವಸ್ತುಗಳನ್ನು ಅನುಕೂಲಕರವಾಗಿ ಮತ್ತು ಸುರಕ್ಷಿತವಾಗಿ ಸಾಗಿಸಲು ಅನುವು ಮಾಡಿಕೊಡುವ ಮೊಬೈಲ್ ವ್ಯಾಲೆಟ್ ವೈಶಿಷ್ಟ್ಯವಾಗಿದೆ. ನಿಮ್ಮ ಪಾವತಿ ಕಾರ್ಡ್ಗಳು, ಡಿಜಿಟಲ್ ಐಡಿ, ಪ್ರಯಾಣ ಟಿಕೆಟ್ಗಳು ಮತ್ತು ಹೆಚ್ಚಿನದನ್ನು ಇದರಲ್ಲಿ ಸೇರಿಸಬಹುದು. ಈ ಸಾಧನಗಳು ಹೆಚ್ಚು ಜನಪ್ರಿಯವಾಗಿರುವ ವಾಯ್ಸ್ ಫೋಕಸ್ ವೈಶಿಷ್ಟ್ಯವನ್ನು ಹೊಂದಿದ್ದು ಅದು ಬಳಕೆದಾರರಿಗೆ ವಾತಾವರಣದಲ್ಲಿರುವ ಶಬ್ದಗಳ ಬಗ್ಗೆ ಚಿಂತಿಸದೆ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ.
ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ, ಸ್ಯಾಮ್ಸಂಗ್ 4 ಜನರೇಷನ್ ಆಂಡ್ರಾಯ್ಡ್ ಓಎಸ್ ಅಪ್ಗ್ರೇಡ್ಗಳನ್ನು ಮತ್ತು ಐದು ವರ್ಷಗಳ ಸೆಕ್ಯುರಿಟಿ ಅಪ್ಡೇಟ್ ಗಳನ್ನು ಒದಗಿಸುತ್ತದೆ. ಎಲ್ಲಾ ಇತ್ತೀಚಿನ ಗ್ಯಾಲಕ್ಸಿ ಮತ್ತು ಆಂಡ್ರಾಯ್ಡ್ ವೈಶಿಷ್ಟ್ಯಗಳೊಂದಿಗೆ ಸಾಧನಗಳ ಜೀವನಚಕ್ರ ಉತ್ತಮಗೊಳ್ಳಲಿದೆ.
ಮೆಮೊರಿ ವೇರಿಯಂಟ್ ಗಳು, ಬೆಲೆ, ಲಭ್ಯತೆ ಮತ್ತು ಕೊಡುಗೆಗಳು
ಉತ್ಪನ್ನ ಸ್ಟೋರೇಜ್ ವೇರಿಯೆಂಟ್ ಬೆಲೆ*
ಗ್ಯಾಲಕ್ಸಿ ಎ55 5ಜಿ 8GB+128GB ರೂ. 36999
8GB+256GB ರೂ. 39999
12GB+256GB ರೂ. 42999
ಗ್ಯಾಲಕ್ಸಿ ಎ35 5ಜಿ 8GB+128GB ರೂ. 27999
8GB+256GB ರೂ. 30999
ಇತರೆ ಕೊಡುಗೆಗಳು:
• ಸ್ಯಾಮ್ಸಂಗ್ ವ್ಯಾಲೆಟ್: ಮೊದಲ ಯಶಸ್ವಿ ಟ್ಯಾಪ್ ಮತ್ತು ಪಾವತಿ ವಹಿವಾಟಿನಲ್ಲಿ ರೂ. 250 ಮೌಲ್ಯದ ಅಮೆಜಾನ್ ವೋಚರ್ ಪಡೆಯಿರಿ
• ಯೂಟ್ಯೂಬ್ ಪ್ರೀಮಿಯಂ: 2 ತಿಂಗಳು ಉಚಿತ (ಏಪ್ರಿಲ್ 1, 2025 ರವರೆಗೆ)
• ಮೈಕ್ರೋಸಾಫ್ಟ್ 365: ಮೈಕ್ರೋಸಾಫ್ಟ್ 365 ಬೇಸಿಕ್ + 6 ತಿಂಗಳ ಕ್ಲೌಡ್ ಸ್ಟೋರೇಜ್ (100ಜಿಬಿ ವರೆಗೆ, ಜೂನ್ 30, 2024ರ ಮೊದಲು ರಿಡೆಂಪ್ಶನ್ ಮಾಡಬೇಕಾದ ಆಫರ್)
ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಸ್ಯಾಮ್ಸಂಗ್ ಎಕ್ಸ್ ಕ್ಲೂಸಿವ್ ಮತ್ತು ಪಾಲುದಾರ ಅಂಗಡಿಗಳು, samsung.com ಮತ್ತು ಇತರ ಆನ್ಲೈನ್ ಪ್ಲಾಟ್ಫಾರ್ಮ್ಗಳಾದ್ಯಂತ ಖರೀದಿಗೆ ಲಭ್ಯವಿದೆ.